ಮಾಜಿ ಸಚಿವ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜುಗೌಡ ಹಾಗೂ ಅವರ ಸಹೋದರ ಬಬ್ಲೂಗೌಡ ಜನ್ಮದಿನದ ಅಂಗವಾಗಿ ಆಸ್ಪತ್ರೆಯಲ್ಲಿ ಹಣ್ಣು ವಿತರಣೆ, ಅನ್ನಸಂತರ್ಪಣೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ; ನಗರದಲ್ಲಿ ಇಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ನರಸಿಂಹ ನಾಯಕ ರಾಜುಗೌಡ್ರು ಹಾಗೂ ಅವರ ಸಹೋದರಾದ ಹಣಮಂತ ನಾಯಕ ಬಬ್ಲೂಗೌಡ್ರು ಬಿಜೆಪಿ ಯುವ ಮುಖಂಡರು ರವರ ಹುಟ್ಟು ಹಬ್ಬದ ಪ್ರಯುಕ್ತ ರಾಜುಗೌಡ್ರು ಅಭಿಮಾನಿಗಳ ಹಾಗೂ ಕಾರ್ಯಕರ್ತರ ವತಿಯಿಂದ ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು ಹಾಗೂ ನಗರ ಗಾಂಧಿ ವೃತ್ತದಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಾಯಕರು, ಜನಸೇವೆಯೇ ತಮ್ಮ ಆದರ್ಶ ಎಂದು ತಿಳಿಸಿ, ಆರೋಗ್ಯಲಾಭ ಕೋರಿ ಎಲ್ಲ ರೋಗಿಗಳಿಗೆ ಶುಭಹಾರೈಸಿದರು.ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ, ಆಸ್ಪತ್ರೆ ಸಿಬ್ಬಂದಿ ಹಾಗೂ ಬಿಜೆಪಿಯ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು. ರೋಗಿಗಳಿಗೆ ಹಣ್ಣು ವಿತರಣೆ ಮಾಡುತ್ತಾ ಅವರ ಆರೋಗ್ಯ ವಿಚಾರಣೆ ನಡೆಸಲಾಯಿತು.
ಕಾರ್ಯಕ್ರಮವನ್ನು ಸಮಾಜಮುಖಿ ಚಟುವಟಿಕೆಯ ಭಾಗವಾಗಿ ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ಸೇವಾಕಾರ್ಯಗಳು ಮುಂದುವರಿಯಲಿವೆ ಎಂದು ಆಯೋಜಕರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ, ಶಂಕರ ನಾಯಕ , ರಾಜಾ ರಂಗಪ್ಪ ನಾಯಕ, ವೇಣು ಯಾದವ್ ನಾಯಕ,ದೇವರಾಜ ಮಕಾಶಿ, ಜೈರಾಮ ನಾಯಕ, ಪಾರಪ್ಪ ಗುತ್ತಿಗೆದಾರರು, ದತ್ತು ಗುತ್ತಿಗೆದಾರರು, ವೆಂಕಟೇಶ್ ನಾಯಕ ಬೈರಿಮಡ್ಡಿ, ಮಹೇಶ ಪಾಟೀಲ್, ಸಂಗಣ್ಣ ಗೌಡ ,ಬೇವಿನಾಳ ಭೀಮಣ್ಣ, ನರಸಿಂಹ ಪಂಚಮಗಿರಿ, ಈಶ್ವರ ನಾಯಕ, ಜಗದೀಶ್ ಪಾಟೀಲ್, ಶ್ರೀ ನಿಂಗು ಹೈಕೂರ, ಭೀಮಾಶಂಕರ ಬಿಲ್ಲವ್, ಸೇರಿದಂತೆ ಇತರರು ಉಪಸ್ಥಿತರಿದ್ದರು.









