ಸುರಪುರ ಪತ್ರಕರ್ತರ ಸಂಘಕ್ಕೆ ಶ್ರೀಕರಭಟ್ ಜೋಷಿ ಪುನರಾಯ್ಕೆ, ಎರಡನೇ ಬಾರಿಗೆ ಪ್ರದಾನ ಕಾರ್ಯದರ್ಶಿಯಾಗಿ ಕ್ಷೀರಲಿಂಗಯ್ಯ ಹಿರೇಮಠ ಆಯ್ಕೆ.

ಸುರಪುರ ಟೈಮ್ಸ್ ವಾರ್ತೆ

ಸುರಪುರ;ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕಕ್ಕೆ ಭಾನುವಾರ ಚುನಾವಣೆ ಜರುಗಿ ಎಲ್ಲ ಪದಾಧಿಕಾರಿಗಳ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು.
ನಗರದ ಪತ್ರಿಕಾ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಚುನಾವಣೆ ನಿಗದಿಯಾಗಿತ್ತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ನೇತೃತ್ವ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಅಧ್ಯಕ್ಷ ಸ್ಥಾನಕ್ಕೆ ಶ್ರೀಕರಭಟ್ ಜೋಷಿ ಮತ್ತು ವಿಜಯಾಚಾರ್ಯ ಪುರೋಹಿತ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕ್ಷೀರಲಿಂಗಯ್ಯ ಹಿರೇಮಠ ಮತ್ತು ನಾಗರಾಜ ನ್ಯಾಮತಿ ನಾಮಪತ್ರ ಸಲ್ಲಿಸಿದ್ದರು. ನಂತರ ವಿಜಯಾಚಾರ್ಯ ಪುರೋಹಿತ ಮತ್ತು ನಾಗರಾಜ್ ನ್ಯಾಮತಿ ತಮ್ಮ ಉಮೇದುವಾರಿಕೆ ವಾಪಸ್ ಪಡೆದರು. ಶ್ರೀಕರಭಟ್ ಜೋಷಿ ಅಧ್ಯಕ್ಷರಾಗಿ ಮತ್ತು ಕ್ಷೀರಲಿಂಗಯ್ಯ ಹಿರೇಮಠ ಬೋನ್ಹಾಳ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದರು.
ಮೂರು ಸ್ಥಾನಗಳಿರುವ ಉಪಾಧ್ಯಕ್ಷ ಸ್ಥಾನಕ್ಕೆ ಮಹಾಂತೇಶ ಹೊಗರಿ, ಮಲ್ಲಿಕಾರ್ಜುನ ತಳಳ್ಳಿ, ಶ್ರೀಮಂತ ಚಲುವಾದಿ, ಅದೇ ರೀತಿ ಮೂರು ಸ್ಥಾನಗಳಿರುವ ಕಾರ್ಯದರ್ಶಿ ಸ್ಥಾನಕ್ಕೆ ಪರಶುರಾಮ ನಾಯಕ ಮಲ್ಲಿಬಾವಿ, ಕಲಿಂ ಫರೀದಿ, ಸೋಮು ನಾಯಕ ಗೋಸಲರ್, ಒಂದು ಸ್ಥಾನದ ಖಜಾಂಚಿಗೆ ಮುರಳೀಧರ ಅಂಬೂರೆ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಇವರುಗಳು ಅವಿರೋಧವಾಗಿ ಆಯ್ಕೆಯಾದರು. ಎಲ್ಲ ಪ್ರದಾಧಿಕಾರಿಗಳ ಆಯ್ಕೆಯನ್ನು ಚುನವಣಾಧಿಕಾರಿಗಳು ಪ್ರಕಟಿಸಿದರು.
ಸಂಘವನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವಂತೆ ನೂತನ ಪದಾಧಿಕಾರಿಗಳಿಗೆ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಸಲಹೆ ನೀಡಿದರು. ಸಂಘದ ಜಿಲ್ಲಾ ಉಪಾಧ್ಯಕ್ಷ ಗುಂಡುಭಟ್ ಜೋಶಿ, ಪತ್ರಕರ್ತರಾದ ಅಶೋಕ ಸಾಲವಾಡಗಿ, ಗಿರೀಶ್ ಶಾಬಾದಿ, ಧಿರೇಂದ್ರ ಕುಲಕರ್ಣಿ, ಗವಿಸಿದ್ದೇಶ ಹೊಗರಿ,ಸಿದ್ದಯ್ಯ ಪಾಟೀಲ್, ಮಲ್ಲು ಗುಳಗಿ, ರಾಜು ಕುಂಬಾರ, ಪುರುಷೋತ್ತಮ್ ನಾಯಕ್ ಪವನ ಕುಲಕರ್ಣಿ, ಡಿ.ಸಿ.ಪಾಟೀಲ್, ಗಿರೀಶ್ ಬ್ಯಾಕೋಡ್, ದೇವರಾಜ ಪಾಟೀಲ್, ಮಹಾದೇವ ಬೊಮ್ಮನಳ್ಳಿ, ಹೊನ್ನಪ್ಪ ತೇಲ್ಕರ್, ಮೋಹನ್ ಪ್ರತಿಹಸ್ತ, ವೆಂಕಟೇಶ ಯಾದವ, ರೇವಣಸಿದ್ದಯ್ಯ ಹಿರೇಮಠ, ಥಾಮಸ್, ಹಂಪಯ್ಯ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!