ಬೆಂದ ಅನ್ನದಲ್ಲಿ 🦎 ಹಲ್ಲಿ ಪತ್ತೆ, ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಮಕ್ಕಳ ಪೋಷಕರ ಆಕ್ರೋಶ
ಸುರಪುರ ಟೈಮ್ಸ್ ವಾರ್ತೆ
ಸುರಪುರ ;ನಗರದ ವಡ್ಡರ ಓಣಿಯಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಧ್ಯಾಹ್ನದ ಬಿಸಿ ಊಟದಲ್ಲಿ ಹಲ್ಲಿ ಪತ್ತೆಯಾಗಿದೆ .ಹಲ್ಲಿ 🦎 🦎 ಕಾಣುತ್ತಿದ್ದಂತೆ ಊಟ ಮಾಡುತ್ತಿದ್ದ ಮಕ್ಕಳು ಆತಂಕಗೊಂಡಿದ್ದಾರೆ ನಂತರ ಮಕ್ಕಳ ಪೋಷಕರು ಶಾಲೆಗೆ ಆಗಮಿಸಿ ಶಿಕ್ಷಕರ ಹಾಗೂ ಅಡುಗೆ ಸಹಾಯಕಿಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
42 ಮಕ್ಕಳು ಶಾಲೆಯಲ್ಲಿ ಇದ್ದು ಹಲ್ಲಿ ಪತ್ತೆಯಾಗುತ್ತಿದ್ದಂತೆ ಎಲ್ಲಾ ಮಕ್ಕಳನ್ನು ಹಸನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ನಂತರ ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಒಂದು ಮಗುವಿನಲ್ಲಿ ವಾಂತಿ ಕಾಣಿಸಿಕೊಂಡಿದ್ದು ಇನ್ನುಳಿದ ಮಕ್ಕಳಿಗೆ ಯಾವುದೇ ತೊಂದರೆ ಕಾಣಿಸಿಕೊಂಡಿಲ್ಲ ಎಂದು ಆಸ್ಪತ್ರೆಗೆ ಭೇಟಿ ನೀಡಿದ ತಾಲೂಕ ಆರೋಗ್ಯ ಅಧಿಕಾರಿ ಡಾ. ಆರ್.ವಿ ನಾಯಕ ತಿಳಿಸಿದ್ದಾರೆ.
ಅಡುಗೆ ಸಹಾಯಕಿಯರು ಅಡುಗೆ ತಯಾರಿಸುವಾಗ ನಿರ್ಲಕ್ಷ ತೋರಿದೆ ಇದಕ್ಕೆ ಕಾರಣ ಎನ್ನಲಾಗುತ್ತಿದ್ದು ನಿಖರವಾದ ಕಾರಣ ತಿಳಿದು ಬರಬೇಕಿದೆ.



