ಹೋಳಿ, ರಮಜಾನ್ ಸೌರ್ಹಾದತೆಯಿಂದ ಆಚರಿಸಿ; ಡಿವೈಎಸ್‌ಪಿ ಜಾವೇದ್

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಹೋಳಿ ಹಾಗೂ ರಮಜಾನ್ ಹಬ್ಬಗಳನ್ನು ಸೌರ್ಹಾದತೆಯಿಂದ ಆಚರಿಸಬೇಕು ಎಂದು ಸುರಪುರ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಜಾವೇದ್ ಇನಾಮದಾರ್ ಹೇಳಿದರು.
ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಹೋಳಿ ಹಾಗೂ ರಮಜಾನ್ ಹಬ್ಬಗಳ ನಿಮಿತ್ತ ಬುಧವಾರ ಕರೆದಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೋಳಿ ಹಬ್ಬದ ದಿನ ಪಿಯುಸಿ ಪರೀಕ್ಷೆ ಇರುತ್ತದೆ. ಕಾರಣ ಪರೀಕ್ಷಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಹಬ್ಬದಲ್ಲಿ ಯಾರಿಗೂ ತೊಂದರೆಯಾಗದಂತೆ ಬಣ್ಣ ಆಡಬೇಕು ಎಂದು ಸಲಹೆ ನೀಡಿದರು.
ಕಾಮ ದಹನ ಸ್ಥಳಗಳಲ್ಲಿ ಮತ್ತು ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ನಿಯೋಜನೆ ಮಾಡಲಾಗುವುದು. ಎರಡು ಕೆಎಸ್‌ಆರ್‌ಪಿ ತುಕ್ಕಡಿ, ಪೊಲೀಸ್‌ರು, ಗೃಹ ರಕ್ಷಕ ದಳದವರಿಗೆ ಬಂದೋಬಸ್ತ್ಗೆ ಹಾಕಲಾಗಿದೆ. ಬಣ್ಣದ ನೆಪದಲ್ಲಿ ಜೋರಾವರಿ ಮಾಡಿ ಹಣ ವಸೂಲಿ ಮಾಡುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಅಡ್ಡಗಟ್ಟಿ ಬೈಕ್ ಸವಾರರಿಗೆ ಬಣ್ಣ ಹಾಕುವುದು ಹಣ ವಸೂಲಿ ಮಾಡುವುದು ಅಪರಾಧ. ಇಂತಹ ಅಹಿತಕರ ಘಟನೆಗೆ ಆಸ್ಪದ ಮಾಡಿ ಕೊಡಬಾರದು. ಒಟ್ಟಾರೆಯಾಗಿ ಸೌರ್ಹದತೆಯಿಂದ ಬಣ್ಣ ಆಡಬೇಕು ಎಂದು ಸಲಹೆ ನೀಡಿದರು.
ಪಿಎಸ್‌ಐ ಶಿವುರಾಜ್ ಪಾಟೀಲ್, ಮುಖಂಡರಾದ ವೆಂಕೋಬ ದೊರೆ, ರಾಮು ನಾಯಕ ಅರಳಳ್ಳಿ ಮಾತನಾಡಿದರು. ಪಿಎಸ್‌ಐ ಕೃಷ್ಣ ಸುಬೇದಾರ, ವೇದಿಕೆಯಲ್ಲಿದ್ದರು. ಮುಖಂಡರಾದ ಸಂದೀಪ್ ಜೋಷಿ, ಆನಂದ ಲಕ್ಷ್ಮೀಪುರ, ಮಲ್ಲಿಕಾರ್ಜುನ ಸೂಗೂರು, ಮಹಮ್ಮದ ಯೂನಿಸ್, ಮಲ್ಲಿಕಾರ್ಜುನ ಕಡಿಮನಿ, ರಾಘವೇಂದ್ರ ಅರಕೇರಿ, ಮಹಮ್ಮದ್ ಜಬ್ಬರ್ ಖುರೇಶಿ, ಅಬ್ದುಲ್ ಮಾಜೀದ್, ರಾಚಯ್ಯಸ್ವಾಮಿ ಹಿರೇಮಠ, ಆಂಜನೇಯ ಹೊಸಮನಿ, ಮಹಿಮೂದ್‌ಖಾನ್ ಅಡ್ಡೊಡಗಿ, ಚೆಂದಪ್ಪ ಅಡ್ಡೊಡಗಿ, ಅಜಗರ್, ನಾಗರಾಜ ದೊರೆ, ವಿಶ್ವರಾಜ, ಅಮರಪ್ಪ ಸೇರಿ ಇತರರಿದ್ದರು. ಪೊಲೀಸ್ ಪೇದೆ ದಯಾನಂದ ಜಮಾದಾರ್ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!