ಸೃಜನಶೀಲತೆ, ಆತ್ಮವಿಶ್ವಾಸ ಬೆಳೆಸುವುದು ‘ಕಲಿಕಾ ಹಬ್ಬ’ದ ಮುಖ್ಯ ಉದ್ದೇಶ;ಪರಶುರಾಮ ಛಲವಾದಿ

ಸುರಪುರ ಟೈಮ್ಸ್ ವಾರ್ತೆ

ಸುರಪುರ ;ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಏರಿಸುವುದು, ಅವರಲ್ಲಿರುವ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ಭಾಗವಹಿಸುವ ಮನೋಭಾವವನ್ನು ಬೆಳೆಸುವುದು ‘ಕಲಿಕಾ ಹಬ್ಬ’ದ ಪ್ರಧಾನ ಉದ್ದೇಶವಾಗಿದೆ. ತರಗತಿ ಕೊಠಡಿಯ ಪಾರಮ್ಯವನ್ನು ಮೀರಿ ಆಟ, ಚಟುವಟಿಕೆ ಆಧಾರಿತ ಕಲಿಕೆಗೆ ಅವಕಾಶ ಕಲ್ಪಿಸುವ ಮೂಲಕ ಕಲಿಕೆಯ ಗುಣಮಟ್ಟವನ್ನು ಉತ್ತಮಗೊಳಿಸುವ ಪ್ರಮುಖ ವೇದಿಕೆಯಾಗಿಯೇ ಕಲಿಕಾ ಹಬ್ಬ ಕಾರ್ಯನಿರ್ವಹಿಸುತ್ತಿದೆ ಎಂದು ಕನ್ನೆಳ್ಳಿ ಕ್ಲಸ್ಟರ್ ನ ನಿಕಟಪೂರ್ವ ಸಂಪನ್ಮೂಲ ವ್ಯಕ್ತಿ ಪರಶುರಾಮ ಛಲವಾದಿ ಹೇಳಿದರು..

ಅವರು ಸುರಪುರ ತಾಲ್ಲೂಕಿನ ಕುರುಬನ ತಳ್ಳಳ್ಳಿ (ಕೆ. ತಳ್ಳಳ್ಳಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ
ಜಿಲ್ಲಾ ಪಂಚಾಯತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಯಾದಗಿರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸುರಪುರ ಸಮೂಹ ಸಂಪನ್ಮೂಲ ಕೇಂದ್ರ ಕನ್ನೆಳ್ಳಿ 2025 – 26 ನೇ ಸಾಲಿನ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ (FLN) ಆಧಾರಿತ ಕ್ಲಸ್ಟರ್ ಮಟ್ಟದ ( FLN) ಕಲಿಕಾ ಹಬ್ಬದ ಉದ್ಘಾಟನಾ ಕಾರ್ಯಕ್ರಮದಲ್ಲಿ  ಮಾತನಾಡಿದರು ವಿದ್ಯಾರ್ಥಿಗಳು ಮಾತನಾಡುವುದು, ಬರೆಯುವುದು, ಪ್ರಶ್ನಿಸುವುದು, ಸಮಾಧಾನ ಹುಡುಕುವುದು ಇವೆರಡರ ಮೂಲಕ ಜೀವನ ಕೌಶಲ್ಯಗಳನ್ನೂ ಅರಿಯುತ್ತಿದ್ದಾರೆ. ಶಿಕ್ಷಕರು, ಪೋಷಕರು ಹಾಗೂ ಸಮುದಾಯದ ಸಹಭಾಗಿತ್ವದಿಂದ ನಡೆಯುತ್ತಿರುವ ಕಲಿಕಾ ಹಬ್ಬ ಶಾಲೆಯನ್ನು ಮಕ್ಕಳ ಸ್ನೇಹಿ ವಾತಾವರಣದತ್ತ ಕರೆದೊಯ್ಯುತ್ತಿದೆ  ಎಂದು ನುಡಿದರು.

1ನೇ ತರಗತಿಯಿಂದ 5ನೇ ತರಗತಿಯವರೆಗೆ ಎಫ್ ಎಲ್ ಏನ್ ಕಲಿಕೆಯ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದ್ದು ಇದು ವಿಶೇಷವಾಗಿ ಕಲಿಕಾ ಅಂತರವನ್ನು ಕಡಿಮೆ ಮಾಡಲು ಮತ್ತು ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ತಂಡದ ಕೆಲಸ ದಂತಹ ಜೀವನ ಕೌಶಲ್ಯಗಳನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಕನ್ನೆಳ್ಳಿ ಶಾಲೆಯ ಶಿಕ್ಷಕ ಮಂಜುನಾಥ ನಾಯಕ  ಮಾತನಾಡಿ ಈ ಹಬ್ಬದಲ್ಲಿ ಮಕ್ಕಳು ಆಟ ಹಾಡು ನಾಟಕ ಮತ್ತು ಇತರೆ ಚಟುವಟಿಕೆಗಳ ಮೂಲಕ ಸಂತೋಷದಿಂದ ಕಲಿಯುತ್ತಾರೆ. ಶಾಲೆಗಳ ಅಭಿವೃದ್ಧಿಯಲ್ಲಿ ಪೋಷಕರ ಸಮುದಾಯ ಹಾಗೂ ಶಿಕ್ಷಕರ ಬಾಗಿದಾರಿಕೆಯ ಅಗತ್ಯತೆಯ ಬಗ್ಗೆ ತಿಳಿಸಿದರು.

ಮೊದಲಿಗೆ ಗ್ರಾಮದ ಆಂಜನೇಯ ದೇವಸ್ಥಾನದಿಂದ ಡೊಳ್ಳು ವಾದ್ಯ, ಶಾಲಾ ಮಕ್ಕಳಿಂದ ಕೋಲಾಟ, ಕುಂಭ ಕಳಶ ಮೇಳಗಳೊಂದಿಗೆ ಶಾಲೆಯವರೆಗೂ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಸಸಿಗೆ ನೀರೆರೆಯುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕನ್ನೆಳ್ಳಿ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಹಣಮಂತ್ರಾಯ ಪಲ್ಲೇದ,ಕಚಕನೂರ ಶಾಲೆ ಮುಖ್ಯ ಶಿಕ್ಷಕರಾದ ಶಾಂತಗೌಡ ಶಿರಗುಂಡ, ಭೂದಾನಿಗಳಾದ ಸಾಹೇಬಗೌಡ ಪೊಲೀಸ್ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸಾವಿತ್ರಿ ಗಾಳಿ,ರಾಜಶೇಖರ ದೇಸಾಯಿ, ಮುಖ್ಯ ಶಿಕ್ಷಕರಾದ ಸತೀಶ ಶೆಟ್ಟಿ ಪಾಟೀಲ ವೇದಿಕೆಯಲ್ಲಿದ್ದರು.

ನಂತರ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.

ಜಾಲಿಬೆಂಚಿ ಶಾಲೆಯ ಮುಖ್ಯ ಶಿಕ್ಷಕರಾದ ಕುಮಾರಗೌಡ, ಶ್ರೀಶೈಲ ಬಳಿಗಾರ, ವಾಹೀದ್ ಹುಸೇನ, ಟಿ.ಜಿ.ಬಾಬು, ಪಾಲಾಕ್ಷಿ ನಾಯ್ಕ, ಕೆ. ತಳ್ಳಳ್ಳಿ ಶಾಲೆಯ ಅತಿಥಿ ಶಿಕ್ಷಕರಾದ ಮಲ್ಲಿಕಾರ್ಜುನ ಜಾಲಿಬೆಂಚಿ, ನಾಗಪ್ಪ ಕೂಚಬಾಳ, ಬಸನಗೌಡ ಬಿರಾದಾರ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಅತಿಥಿ ಶಿಕ್ಷಕರು, ಮಕ್ಕಳು ಹಾಗೂ ಕೆ.ತಳ್ಳಳ್ಳಿ ಗ್ರಾಮದ ಹಿರಿಯರು, ಯುವಕರು,ಮುಖಂಡರು, ಹಳೆಯ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಉಪಸ್ಥಿತರಿದ್ದರು.

ಶಿಕ್ಷಕರಾದ ವೆಂಕಟೇಶ ಬ್ಯಾಕೋಡ್ ನಿರೂಪಿಸಿದರು ಮುಖ್ಯ ಶಿಕ್ಷಕರಾದ ಸತೀಶ ಶೆಟ್ಟಿ ಪಾಟೀಲ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!