ಶೋಷಿತರಿಗೆ ಹೊಸ ದಿಕ್ಕು ತೋರಿದ ಕೋರೆಗಾಂವ್‌ ಯುದ್ಧ: ರಾಹುಲ್ ಹುಲಿಮನಿ


ಸುರಪುರ ಟೈಮ್ಸ್ ವಾರ್ತೆ

ಸುರಪುರ;ಮಹರ್ ಸೈನಿಕರ ವೀರಾವೇಶದ ಹೋರಾಟ ಪ್ರತಿಫಲವಾಗಿ ಭೀಮಾ ಕೋರೆಗಾಂವ್ ವಿಜಯ ಸಾಧ್ಯವಾಯಿತು ಎಂದು ರಾಹುಲ್ ಹುಲಿಮನಿ ಹೇಳಿದರು. ನಗರದ ಡಾ. ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಭೂಮಿ ಮಂಜೂರಾತಿ ಹೋರಾಟ ಸಮಿತಿ ಮತ್ತು ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ 208ನೇ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು 1818 ರಲ್ಲಿ ಮಹಾರಾಷ್ಟ್ರದ ಭೀಮಾ ತೀರದ ಕೋರೆಗಾಂವ್‌ನಲ್ಲಿ ಮಹರ್ ಸೈನಿಕರು ಮತ್ತು ಪೇಶ್ವೆಗಳ ನಡುವೆ ಯುದ್ಧ ನಡೆಯಿತು. ಈ ಸಮರ ಶೋಷಿತ ಸಮುದಾಯಕ್ಕೆ ದೊಡ್ಡ ವಿಜಯ ತಂದುಕೊಟ್ಟು ಹೊಸ ದಿಕ್ಕನ್ನು ತೋರಿತು. ಯುದ್ಧ ಗೆದ್ದ ನೆನಪಿಗಾಗಿ ಸೈನಿಕರು ಶಿಕ್ಷಣಕ್ಕೆ ಬೇಡಿಕೆ ಸಲ್ಲಿಸಿದ್ದರು. ಪರಿಣಾಮವಾಗಿ ಶಿಕ್ಷಣ ಪಡೆಯುವ ಅವಕಾಶವೂ ಈ ಸಮುದಾಯಕ್ಕೆ ಸಿಕ್ಕಿತು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ್ ಕಟ್ಟಿಮನಿ, ಮಾಳಪ್ಪ ಕಿರದಳ್ಳಿ, ಚಂದಪ್ಪ ಪಂಚಮ್, ಶ್ರೀರಾಮ ದೇವರಗೋನಾಲ್, ನಾಗಲಿಂಗ ಹುಲಿ, ವಿಶ್ವನಾಥ ಹೊಸಮನಿ, ಶಾಂತು ದೇವರಗೋನಾಲ್, ಶರಣು ತಳವಾರ್ಗೆರೆ, ಆಕಾಶ್ ಕಟ್ಟಿಮನಿ, ಪರಶುರಾಮ ನಾಟಿಕಾರ್, ರಮೇಶ್ ಬಾಚಿಮಟ್ಟಿ, ನಾಗರಾಜ್ ಬೇವಿನ ಗಿಡ, ಗಜ ತಳವಾರ್, ಅವಿನಾಶ್ ಹೊಸ್ಮನಿ, ಗಣೇಶ್ ದೇವಿಕೆರೆ, ಮುಕುಲ್ ತೆಲಕರ್ ನಿಂಗಪ್ಪ ಡಿ, ಮಂಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!