ಹೊಸ ವರ್ಷವು ಪ್ರತಿಯೊಬ್ಬರಿಗೂ ಸಂತೋಷ, ಆರೋಗ್ಯ ಮತ್ತು ಸಮೃದ್ಧಿ ತರಲಿ ; ರೆವರೆಂಡ್ ಆನಂದ
ಸುರಪುರ ಟೈಮ್ಸ್ ವಾರ್ತೆ
ಸುರಪುರ; ಕಳೆದ ವರ್ಷವಿಡಿ ನಮ್ಮನ್ನು ಕಾಪಾಡಿದ ದೇವರಿಗೆ ಕೃತಜ್ಞತೆ ಸಲ್ಲಿಸಬೇಕು. ಹೊಸ ವರ್ಷದಲ್ಲಿ ಕಷ್ಟಗಳು ಕಳೆದು ಹೋಗಲಿ ಹಾಗೂ ನೂತನ ವರ್ಷ ಎಲ್ಲರಿಗೂ ಶಾಂತಿ, ಸಮೃದ್ಧಿ, ಮತ್ತು ದೈವಿಕ ಆಶೀರ್ವಾದ ತರಲಿ ಎಂದು ಮೆಥೋಡಿಸ್ಟ ಸೆಂಟ್ರಲ್ ಚರ್ಚನ ಜಿಲ್ಲಾ ಮೇಲ್ವಿಚಾರಕ ರೆವರೆಂಡ ಆನಂದ ಹೇಳಿದರು.ನಗರದ ಮೆಥೋಡಿಸ್ಟ ಸೆಂಟ್ರಲ್ ಚರ್ಚನಲ್ಲಿ ನೂತನ ವರ್ಷದ ಆರಂಭವನ್ನು ಅತ್ಯಂತ ಶ್ರದ್ಧಾ, ಭಕ್ತಿ, ಸಡಗರದಿಂದ ಆಚರಿಸಿ ಮಾತನಾಡಿದ ಹೊಸ ವರ್ಷವು ಪ್ರಗತಿ, ಸೌಹಾರ್ದತೆ ಮತ್ತು ಸಾಮಾಜಿಕ ಏಕತೆಯ ವರ್ಷವಾಗಲಿ ಎಂದು ನುಡಿದರು.
ಹೊಸ ವರ್ಷದ ಅಂಗವಾಗಿ ವಿಶೇಷ ಆರಾಧನೆ ಮತ್ತು ವಿಶೇಷ ಪ್ರಾರ್ಥನೆ ಜರುಗಿತು. ಕೇಕ್ ಕತ್ತರಿಸಿ ಎಲ್ಲರಿಗೂ ಸಿಹಿ ಹಂಚಲಾಯಿತು.ಈ ಸಂದರ್ಭದಲ್ಲಿ ಸಭಾ ಪಾಲಕರಾದ ರೆವರೆಂಡ್ ಪ್ರಕಾಶ್ ಹಂಚಿನಾಳ, ಮೆಥೋಡಿಸ್ಟ್ ಚರ್ಚ್ ನ ಮುಖಂಡರಾದ ಸಾಮುವೇಲ್ ಮ್ಯಾಥ್ಯೂ, ವಸಂತ ಕುಮಾರ, ಜಯಪ್ಪ, ಜಾನ್ ವೆಸ್ಲಿ, ಪಾಲ್ ನಾಯ್ಕ್, ದೇವಪುತ್ರ, ಧರ್ಮಣ್ಣ, ಸಿಮಿಯೋನ್, ರಮೇಶ ಪಾಲ್, ಇಮಾನುವೆಲ್, ಥಾಮಸ್ ಮ್ಯಾಥ್ಯೂ, ಜಿಮ್ಮಿ ಜಸ್ಟೀನ್, ನವೀನಕುಮಾರ, ಸಂದೀಪಕುಮಾರ, ಪಿನಿಹಾಸ್, ಸೋನಾಸುಕುಮಾರಿ, ಆಲೀಸ್ ಜಾನವೆಸ್ಲಿ, ಸುಜಾತ ಜಯಪ್ಪ, ಸುಮತಿ ವಸಂತ, ಸಾಗರಿಕ, ಶಕುಂತಲಾ, ಅನಿತಾ,ಸ್ಟೆಲ್ಲಾ, ಸೌಮ್ಯ,ಸಂಗೀತಾ ಸುಭಾಸ, ಸರಿತಾ, ಶೋಭಾ, ರೆಬೆಕ್ಕಾ, ರತ್ನಮ್ಮ, ಶೀಲಮ್ಮ, ಪವಿತ್ರಾ, ರೋಜ್ ಬೆಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.




