ನಿವೃತ್ತಿ ಹೊಂದಿದ ದೇವತ್ಕಲ್ ಪ್ರೌಢಶಾಲೆಯ ಸಿಪಾಯಿ ದೇವಿಂದ್ರಪ್ಪ ದ್ಯಾಮನ್ ಅವರಿಗೆ ಬೀಳ್ಕೊಡುಗೆ


ಸುರಪುರ ಟೈಮ್ಸ್ ವಾರ್ತೆ

ಸುರಪುರ; ತಾಲೂಕಿನ ದೇವತ್ಕಲ್ ಗ್ರಾಮದ ಪ್ರೌಢಶಾಲೆಯ ಸಿಪಾಯಿ ದೇವಿಂದ್ರಪ್ಪ ದ್ಯಾಮನ್ ಅವರು ದೀರ್ಘ 18 ವರ್ಷಗಳ ಸೇವೆ ಪೂರ್ಣಗೊಳಿಸಿ ನಿವೃತ್ತಿ ಪಡೆದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ  ಅವರು ದೇವೇಂದ್ರಪ್ಪನವರ ಶಿಸ್ತಿನ ಜೊತೆಗೆ ಸೇವಾನಿಷ್ಠೆಯಿಂದ ಕೆಲಸ ಮಾಡಿ ಶಾಲೆಯ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಮೇಲೆ ಸ್ನೇಹಭಾವದಿಂದ ವರ್ತಿಸಿ, ಶಾಲೆಯ ಸ್ವಚ್ಛತೆ ಮತ್ತು ಶಿಸ್ತು ಕಾಪಾಡುವಲ್ಲಿ ಸದಾ ಮುಂಚೂಣಿಯಲ್ಲಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕನಕಪ್ಪ ವಾಗನಾಗೇರಾ, ಸವಿತಾ, ಶಿವನಗೌಡ , ಶಾಂತಗೌಡ ಪಾಟೀಲ ಸೇರಿ ಹಳೆ ವಿದ್ಯಾರ್ಥಿಗಳಾದ ಕೃಷ್ಣ, ಶೀಲವಂತ, ಹಣಮಂತ್ರಾಯ, ಬಸವರಾಜೇಶ್ವರಿ, ನಿಂಗನಗೌಡ, ಶ್ರೀದೇವಿ, ಪುರುಷೋತ್ತಮ ನಾಯಕ ಮಾತನಾಡಿದರು.
ದೇವತ್ಕಲ್ ಪ್ರೌಢಶಾಲೆ ‘ಕೆಪಿಎಸ್’ ಆಗಿ ಮೇಲ್ದರ್ಜೆಗೆ
ದೇವತ್ಕಲ್ ಪ್ರೌಢಶಾಲೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ, ಇದರಿಂದ ಎಲ್ ಕೆ ಜಿ ಯಿಂದ್ ಪಿಯುಸಿ ವರೆಗೂ ಒಂದೇ ಸೂರಿನಡಿ ಬೋಧಿಸಲಾಗುವುದು, ಉತ್ತಮ ಕಲಿಕಾ ವಾತಾವರಣ, ಆಧುನಿಕ ತರಗತಿ ಕೊಠಡಿಗಳು, ಪ್ರಯೋಗಾಲಯಗಳು, ಕ್ರೀಡಾ ಸೇರಿ ಅಗತ್ಯ ಸೌಲಭ್ಯಗಳು ಜತೆಗೆ ಸಮಗ್ರ ಶಿಕ್ಷಣ ನೀಡುವುದರ ಕೆಪಿಎಸ್ ಉದ್ದೇಶವಾಗಿದೆ . ಇದು ಮಕ್ಕಳನ್ನು ಶಾಲೆಗೆ ಕೆರೆತರಲು ಪ್ರೋತ್ಸಾಹಿಸುತ್ತದೆ ಎಂದು ಬಿಇಓ ಯಲ್ಲಪ್ಪ ಕಾಡ್ಲೂರು ಹೇಳಿದರು.


ನಿವೃತ್ತಿಯಾಗುತ್ತಿರುವ ದೇವೇಂದ್ರಪ್ಪ ದ್ಯಾಮನ್ ಅವರು ಮಾತನಾಡಿ, “ಈ ಶಾಲೆಯೇ ನನ್ನ ಕುಟುಂಬದಂತಾಗಿದೆ. ಎಲ್ಲರ ಸಹಕಾರದಿಂದ ಇಷ್ಟು ವರ್ಷಗಳು ಸೇವೆ ಸಲ್ಲಿಸಲು ಸಾಧ್ಯವಾಯಿತು,” ಎಂದು ಭಾವೋದ್ರೇಕದಿಂದ ಪ್ರತಿಕ್ರಿಯಿಸಿದರು.

ಸಮಾರಂಭದಲ್ಲಿ ಅಭಿನಂದನಾ ಪತ್ರ, ಗೌರವ ವಸ್ತ್ರ ಮತ್ತು ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು. ನಿವೃತ್ತಿ ಜೀವನದಲ್ಲಿ ಆರೋಗ್ಯ, ಸಂತೋಷ ಮತ್ತು ನೆಮ್ಮದಿ ನೆಲೆಸಲಿ ಎಂಬ ಹಾರೈಕೆ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಜ್ಞಾನದೇವ ಗೆಂಡ, ಗೋವಿಂದಪ್ಪ ಟಣಕೆದಾರ ಗ್ರಾಮದ ಮುಖಂಡರಾದ ಹಣಮಂತ್ರಾಯ ಡೊಣ್ಣೆಗೇರಾ, ಬಸಯ್ಯಸ್ವಾಮಿ, ಬಲಭೀಮರಾಯ ಘಂಟಿ, ಪರಮಣ್ಣಗೌಡ ಕೊನಾಳ, ನಾಗರಾಜ ಭಾವಿಹೊಲ, ಸಿದ್ದಲಿಂಗಯ್ಯ ಹಿರೇಮಠ, ಬಾಪೂಗೌಡ ಮೇಟಿ, ಸಿದ್ದನಗೌಡ ಸೇರಿ ಸಹ ಶಿಕ್ಷಕರಾದ ವಿವೇಕಾನಂದ, ಚಂದಪ್ಪ, ನೀಲಗಂಗಮ್ಮ ಉಪಸ್ಥಿತರಿದ್ದರು, ಬಸವರಾಜ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!