ಸುರಪುರ ಯುವ ಸಾಹಿತಿ ಜಾವೀದ ಹುಸೇನ ಹವಲ್ದಾರವರು “ಅಪ್ಪ ಪ್ರಶಸ್ತಿ” ಗೆ ಆಯ್ಕೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ ; ವಿಜಯಪುರದ ಅಪ್ಪ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಕೊಡ ಮಾಡುವ 2026ನೇ ಸಾಲಿನ ರಾಜ್ಯ ಮಟ್ಟದ ಅಪ್ಪ ಪ್ರಶಸ್ತಿ ಗೆ ಸುರಪುರದ ಯುವ ಸಾಹಿತಿಗಳಾದ ಜಾವೀದ ಹುಸೇನ ಹವಲ್ದಾರ ಅವರು ಆಯ್ಕೆಯಾಗಿದ್ದಾರೆ. ಇವರ ಸಾಹಿತ್ಯ ಸೇವೆ ಸಾಧನೆಗಳನ್ನು ಪರಿಗಣಿಸಿ ಅಪ್ಪ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ಜನವರಿ 4ರಂದು ವಿಜಯಪುರದ ಚೇತನ ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಅಪ್ಪ – ಉತ್ಸವ 2026ರ ಕಾರ್ಯಕ್ರಮದಲ್ಲಿ ನಾಡಿನ ಗಣ್ಯ ಮಾನ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಅಪ್ಪ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಸುಜ್ಞಾನಿ ಎನ್. ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



