ಅಮರಶಿಲ್ಪಿ ಜಕಣಾಚಾರಿ ಹೆಸರು ಅಮರ; ಸಂತೋಷ ಆಚಾರ್ಯ

ಸುರಪುರ ಟೈಮ್ಸ್ ವಾರ್ತೆ

ಸುರಪುರ;ಶಿಲ್ಪಕಲೆಗೆ ಅಪಾರ ಕೊಡುಗೆ ನೀಡಿರುವ ಅಮರಶಿಲ್ಪಿ ಜಕಣಾಚಾರಿ ಅವರ ಹೆಸರು ಸೂರ್ಯ ಚಂದ್ರ ಇರುವರೆಗೂ ಅಮರವಾಗಿ ಇರುತ್ತದೆ’ ಎಂದು ಸಂತೋಷ ಎಂ. ಆಚಾರ್ಯ ಶಾರದಳ್ಳಿಯವರು ಹೇಳಿದರು.
ಇಲ್ಲಿಯ ರಂಗಂಪೇಟಿಯ ಗೋವಿಂದರಾಜ್ ಬೋಡಾ ಅವರ ಆವರಣದಲ್ಲಿ ಗುರುವಾರ ತಾಲೂಕು ವಿಶ್ವಕರ್ಮ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಮಹಿಳಾ ವತಿಯಿಂದ ಹಮ್ಮಿಕೊಂಡಿದ್ದ ಅಮರ ಶಿಲ್ಪಿ ಜಕಣಾಚಾರ್ಯ ಸಂಸ್ಮರಣಾ ದಿನಾಚರಣೆಯಲ್ಲಿ ಅವರು ಮಾತನಾಡಿ,ಇಂದಿಗೂ ಶಿಲ್ಪ ಕಲೆ ಜೀವಂತವಾಗಿದೆ ಎಂಬುದಕ್ಕೆ ಬೇಲೂರು, ಹಳೇಬೀಡು, ಸೋಮನಾಥಪುರ ಸೇರಿದಂತೆ ಅನೇಕ ಶಿಲ್ಪಗಳೇ ಸಾಕ್ಷಿಯಿವೆ. ಅಮರ ಶಿಲ್ಪಿ ಜಕಣಾಚಾರ್ಯರಂತೆ ಈಗಿನ ಕಾಲದಲ್ಲೂ ಶಿಲ್ಪಿ ಅರುಣ್ ಯೋಗಿರಾಜ್ ಸೇರಿದಂತೆ ಅನೇಕರಿದ್ದಾರೆ ಆದರೆ ಯಾವುದೇ ಸರ್ಕಾರವು ವಿಶ್ವ ಕರ್ಮ ಸಮಾಜದ ಶಿಲ್ಪಿಗಳನ್ನು ಗುರುತಿಸದಿರುವುದು ನಮ್ಮ ಸಮಾಜಕ್ಕೆ ಅಸಮಾಧಾನವಿದೆ ವಿಷಾದ ವ್ಯಕ್ತಪಡಿಸಿದರು.
ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ಶಿಲ್ಪಿಯೊಬ್ಬರನ್ನು ಗುರುತಿಸಿ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ರಾಜಾ ಪಿಡ್ಡನಾಯಕ ಅವರು ಉದ್ಘಾಟಿಸಿದರು.
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಾಷ್ಠ ಶಿಲ್ಪಿ ಹಂದ್ರಾಳದ ಬಸಣ್ಣ ಎಂ ಬಡಿಗೇರ್ ,ಸರಸ್ವತಿ ಎಲ್ ಶಿರವಾಳ ವೇದಿಕೆಯಲ್ಲಿದ್ದರು. ನಿರ್ಮಲಾ ಐದಬಾವಿ ಪ್ರಾರ್ಥನೆ ಗೀತೆ ಹಾಡಿದರು.ಸುನಂದ ನಾಲವಾರ ಜಕಣಾಚಾರ್ಯ ಜೀವನ ಚರಿತ್ರೆ ಕುರಿತು ವಿವರಿಸಿದರು.ಶಶಿಕಲಾ ಸ್ವಾಗತಿಸಿದರು.ವಾಣಿಶ್ರೀ ನಾಲವಾರ ನಿರೂಪಿಸಿದರು.
ಗಂಗಮ್ಮ ವಂದಿಸಿದರು.
ದೇವಮ್ಮನಾಲವಾರ ,ವಿಜಯಲಕ್ಷ್ಮೀನೇತ್ರಾವತಿ ಗೋಗಿ,ನಾಗರತ್ನ
ಕಂಚಗಾರ,ಶೈಲಾ,ಆಚಾರ್ಯರು, ಮೇಘಾ ಆಚಾರ್ಯರು,ಗಂಗಮ್ಮ ದೇವಿಕೇರಿ,ಸುಮಂಗಲಾ,ಶಶಿಕಲಾ, ವೀಣಾ ಶಾಬಾದಿ, ಅನುರಾಧಾ, ರಾಜೇಶ್ವರಿ, ವಾಣಿಶ್ರೀ, ಸಾನ್ವಿ ಹಾಗೂ ಅರ್ಚಕ ಮೌನೇಶ್,
ಲಕ್ಷ್ಮೀಕಾಂತ ಶಿರವಾಳ, ಮಹೇಶ ಶಾರದಹಳ್ಳಿ, ದೇವಿಂದ್ರಪ್ಪ ತಳವಾರ
ಗೇರಿ, ತರುಣ್ ಆಚಾರ್ಯ,ಮೌನೇಶ್ ನಾಲವಾರ, ಮಹೇಶ ಸಗರ, ವಿಷ್ಣು,ಪ್ರಭು ಚನ್ನಪಟ್ಟಣ,ರವಿ ಪತ್ತಾರ,ವಿರೇಶ್ ನಾಲವಾರ, ಅಂಬ್ರೇಶ ನಾಲವಾರ ಅಶೋಕಗೋಗಿ,ಭಾಸ್ಕರರಾವ,ಅಯ್ಯಪ್ಪ,ಪಂಪಣ್ಣ ಹಳಿಸಗರ,ಶ್ರೀಕಾಂತ ಚಿಕ್ಕನಳ್ಳಿ,ಶಿವುಕುಮಾರ,ವಿಜಯಕುಮಾರ ಹಳಿಸಗರ,ಈರಣ್ಣ ಕುಂಟೋಜಿ,ಗಂಗಾಧರ ಜಾಲಿಬೆಂಚಿ,ರಾಜೂ ತಾಳಿಕೋಟಿ,ತಿಪ್ಪಣ್ಣ ಕಮ್ಮಾರ,ಗಂಗಾಧರ ಅಮ್ಮಾಪುರ,ಪ್ರಭು ಕಲಕೇರಿ, ರಾಕೇಶ ,ಕಾಳಪ್ಪ ಶಹಾಬಾದಿ, ವಿನೋದ ಕೋನ್ಹಾಳ,ರಘುಸೂಗೂರ,ಮನೋಹರ ಕಂಚಗಾರ
ಲಕ್ಷ್ಮೀಕಾಂತ, ಈರಣ್ಣ ಬಡಿಗೇರ ಗಂಗಾಧರ ಕರಣಗಿ,ದಿನೇಶ ಹಳಿಸಗರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!