ಶೋಷಿತರ ಸಂಘರ್ಷ ದಿನಾಚರಣೆಯಲ್ಲಿ ಎಲ್ಲರು ಭಾಗವಹಿಸಿ

ಸುರಪುರ ಟೈಮ್ಸ್ ವಾರ್ತೆ

ಹುಣಸಗಿ: ಶಹಾಪುರ ನಗರದಲ್ಲಿ ಮಾರ್ಚ್ 24ರಲ್ಲೂ ನಡೆಯಲಿರುವ ಶೋಷಿತರ ಸಂಘರ್ಷ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ ಕರೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಅಸ್ಪೃಶ್ಯತೆಯ ಮೊದಲ ಚಳವಳಿ ಯಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಡೆಸಿದ ಮಹಡ್ ಕೆರೆ ಚಳುವಳಿಯ ಅಂಗವಾಗಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯಾದ್ಯಂತ ಎಲ್ಲ ತಾಲೂಕಿನಿಂದ ನಮ್ಮ ಕಾರ್ಯಕರ್ತರು ಮುಖಂಡರು ಭಾಗವಹಿಸುವಂತೆ ಕರೆ ನೀಡಿದರು.ಜಿಲ್ಲಾ ಸಂಚಾಲಕ ಮಾಳಪ್ಪ ಕಿರದಳ್ಳಿ ಮಾತನಾಡಿ, ರಾಜ್ಯ ಸಂಚಾಲಕರದ ಮಾವಳ್ಳಿ ಶಂಕರ್ ಅವರ ನಿರ್ದೇಶನದಂತೆ ರಾಜ್ಯಾದ್ಯಂತ ನಡೆಯುವ ಈ ಸಮಾವೇಶಗಳು ಯಾದಗಿರಿ ಜಿಲ್ಲೆಯಿಂದ ಶಹಪುರ ನಗರದಲ್ಲಿ ನಡೆಯಲಿದ್ದು ಜಿಲ್ಲೆಯ ಎಲ್ಲಾ ತಾಲೂಕಿನ ನಮ್ಮ ಸಂಘಟನೆಯ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಿದರು. ಅಲ್ಲದೆ ಮುಂಬರುವ ದಿನಗಳಲ್ಲಿ ಹುಣಸಗಿ ತಾಲೂಕು ಘಟಕವನ್ನು ಪುನರ್ ರಚನೆ ಮಾಡುವುದಾಗಿ ವಿವರಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಬಿತ್ತಿ ಪತ್ರಗಳ ಬಿಡುಗಡೆ ಮಾಡಲಾಯಿತು.ಸಭೆಯಲ್ಲಿ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ನಾಗಣ್ಣ ಬಡಿಗೇರ, ವಿಭಾಗೀಯ ಸಂಘಟನಾ ಸಂಚಾಲಕ ಮರಳುಸಿದ್ದಪ್ಪ ನಾಯ್ಕಲ್, ಮುಖಂಡರಾದ ಬಸವರಾಜ ಅಣಬಿ, ನಿಂಗಪ್ಪ ಬೀರನಾಳ, ಮಲ್ಲಣ್ಣ ಕಟ್ಟಿಮನಿ, ಹನುಮಂತ ರಾಜನಕೋಳೂರ, ಶರಣಪ್ಪ ತಳವಾರಗೇರಾ, ಆಂಜನೇಯ ಬಳಿಚಕ್ರ, ಲಕ್ಷ್ಮಣ ರಾಂಪುರ, ಭೀಮರಾಯ ಅಗ್ನಿ, ಮಲ್ಲಿಕಾರ್ಜುನ್ ಹಾದಿಮನಿ, ಕೆಂಚಪ್ಪ ಕಟ್ಟಿಮನಿ, ಶರಣಬಸವ ವಜ್ಜಲ್, ಬಸವರಾಜ್ ಪೂಜಾರಿ ಅಗ್ನಿ ,ನಿಂಗಪ್ಪ ಯಡಹಳ್ಳಿ, ತಿರುಪತಿ ಕೊಡೆಕಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!