ಆನಂದದ ಅನುಭೂತಿ ಶಿಬಿರ 18 ರಿಂದ ಪ್ರಾರಂಭ
ಸುರಪುರ ಟೈಮ್ಸ್ ವಾರ್ತೆ
ಸುರಪುರ; ನಗರದ ಶ್ರೀಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಇದೇ ತಿಂಗಳು 18 ರಿಂದ 23 ರ ವರೆಗೆ ಪ್ರತಿದಿನ ಬೆಳಗ್ಗೆ 5:30 ರಿಂದ 8:00 , ಸಂಜೆ 5:30 ರಿಂದ 8:00 ಗಂಟೆಯವರೆಗೆ ಆನಂದದ ಅನುಭೂತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಶ್ರೀ ರವಿಶಂಕರ್ ಗುರೂಜಿ ಆರ್ಟ್ ಆಫ್ ಲಿವಿಂಗ್ ನ ಯೋಗ ಶಿಕ್ಷಕಿ ಶಿಲ್ಪಾ ಆವಂಟಿ ತಿಳಿಸಿದ್ದಾರೆ.
ಶಿಬಿರದಲ್ಲಿ ಯೋಗಾಸನ, ಪ್ರಾಣಾಯಾಮ, ಧ್ಯಾನ, ಸುದರ್ಶನ ಕ್ರಿಯಾ ಹೇಳಿ ಕೊಡಲಾಗುವುದು.

