ರುಕ್ಮಾಪುರದಲ್ಲಿ ಶರಣ ಬಸವೇಶ್ವರರ ತೊಟ್ಟಿಲೋತ್ಸವ,ಭಕ್ತರ ಕಾಮಧೇನು ಕಲ್ಪತರು ಶರಣಬಸವೇಶ್ವರ; ರುಕ್ಮಾಪುರ ಶ್ರೀ
ಸುರಪುರ ಟೈಮ್ಸ್ ವಾರ್ತೆ
ಸುರಪುರ; ಶರಣಬಸವೇಶ್ವರರು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಕಾಯಕ, ತ್ರಿಕಾಲ ಪೂಜೆ, ಕೃಷಿ ಕಾಯಕ, ತಪಸ್ಸಿನ ಫಲವೇ ಇಂದಿಗೂ ಅವರು ಇಲ್ಲಿ ನೆಲೆ ನಿಂತಿದ್ದಾರೆ. ದರ್ಶನ ಪಡೆಯುವ ಭಕ್ತರ ಕಾಮಧೇನು ಕಲ್ಪತರು ಆಗಿದ್ದಾರೆ. ಶರಣಬಸವೇಶ್ವರರ ಮಹಿಮೆ ಅಪಾರವಾಗಿದೆ. ಅಂತೆಯೇ ಭಕ್ತರು ಇಂದಿಗೂ ಅಷ್ಟೇ ಭಕ್ತಿ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ ಎಂದು ರುಕ್ಮಾಪುರದ ಹಿರೇಮಠ ಸಂಸ್ಥಾನದ ಗುರುಶಾಂತಮೂರ್ತಿ ಶಿವಾಚಾರ್ಯರು ಹೇಳಿದರು .
ಇಂದು ಸಮೀಪದ ರುಕ್ಮಾಪುರ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಶರಣಬಸವೇಶ್ವರ ತೊಟ್ಟಿಲೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆಯಿಂದ ವಿಶೇಷ ಪೂಜೆ ರುದ್ರಭಿಷೇಕ ಮತ್ತು ಸುಮಂಗಲ ಸುಮಂಗಲರಿಂದ ವಿಶೇಷ ಪೂಜೆ ಹಾಗೂ ತೊಟ್ಟಿಲೋತ್ಸವನ್ನು ಅದ್ದೂರಿಯಾಗಿ ಮುತ್ತೈದೆಯರು ನೆರವೇರಿಸಿದರು. ನೇತ್ರ ತಂಬಾಕಿ ವಿಜಯಲಕ್ಷ್ಮಿ ಹಿರೇಗೌಡರು ಬಸ್ಸಮ್ಮ ಜಾಣ ನೀಲಮ್ಮ ಶಿವಲೀಲಾ ಬಳ್ಳುಂಡಗಿಮಠ ಕಾರ್ಯಕ್ರಮ ನೆರವೇರಿಸಿದರು.
ಅರ್ಚಕರಾದ ಕೊಟ್ರಯ್ಯಸ್ವಾಮಿ ಬಳ್ಳುಂಡಿಗಿಮಠ ಶಿವಪ್ಪ ಪರ ಚಂಡಿ ಬಸ್ಸಪ್ಪ ಶಕ್ತಿ ಸಲೇಗರ ಅಶೋಕ ಧರಣಿ.ಕೊಟ್ರಪ್ಪ ಈರೇಗೌಡರು ರಾಜಶೇಖರ್ ಹಿರೇಗೌಡರು ಅಂಬ್ರಪ್ಪ ಕುಂಬಾರ್ ಮಂಜುನಾಥ ಪಡುಮುಕಿ ಶರಣಪ್ಪ ಗುಮ್ಮ ಅಂಬರೀಷ್ ಚೆಲ್ಲಾಳ್ ನಿರೂಪಿಸಿ ವಂದಿಸಿದರು.

