ಧರ್ಮಸ್ಥಳ ಯೋಜನೆಯಿಂದ ಅಭಿವೃದ್ಧಿಗೆ ಬಹುದೊಡ್ಡ ಕಾಣಿಕೆ: ಗುರುಶಾಂತಮೂರ್ತಿ ಶಿವಾಚಾರ್ಯ


ಸುರಪುರ ಟೈಮ್ಸ್ ವಾರ್ತೆ

ಸುರಪುರ;ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನ ಕಲ್ಯಾಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ನಾಡಿನ ಅಭಿವೃದ್ಧಿಗೆ ಬಹುದೊಡ್ಡ ಕಾಣಿಕೆ ನೀಡುತ್ತಿದೆ ಎಂದು ರುಕ್ಮಾಪುರ ಹಿರೇಮಠ ಸಂಸ್ಥಾನದ ಗುರುಶಾಂತಮೂರ್ತಿ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಸುರಪುರ ಸಮೀಪದ ರುಕ್ಮಾಪುರ ಗ್ರಾಮದ ಬನಶಂಕರಿ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶುಕ್ರವಾರ ಹಮ್ಮಿಕೊಂಡ ಸಾಮೂಹಿಕ ಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿದರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಪ್ರಗತಿ ಮಾತ್ರವಲ್ಲ, ಸ್ವಚ್ಛತೆ ಸಬಲೀಕರಣಕ್ಕೆ ಆದ್ಯತೆ ನೀಡಿ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ ಎಂದರು.

ಜಿಲ್ಲಾ ನಿರ್ದೇಶಕರ ವಸಂತಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದವರು ಯೋಜನೆಯ ಬಗ್ಗೆ ಏನೆಲ್ಲಾ ಸೌಲಭ್ಯಗಳು ಸಾಮಾಜಿಕ ಕೆಲಸಗಳು ಬಗ್ಗೆ ಮತ್ತು ಸ್ವಸಹಾಯ ಸಂಘಗಳ ಇವರಿಗೆ ಮಾಡಿರುವ ಉಳಿತಾಯ ಮತ್ತು ಬ್ಯಾಂಕ್ ವ್ಯವಹಾರದ ಬಗ್ಗೆ ಕೃಷಿ, ಜ್ಞಾನವಿಕಾಸ, ಜನ ಮಂಗಳ ,ಕೆರೆ ಹೂಳೆತ್ತುವುದು ,ವಾಸ್ತಲ್ಯ ಕಾರ್ಯಕ್ರಮ, ಮಾಶಾಸನ ದೇವಸ್ಥಾನ ಜೀವನೋದ್ಧಾರ ಜ್ಞಾನದೀಪ ಶಿಕ್ಷಕರು ಯೋಜನೆಯ ಹತ್ತು ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಮ್ಮ ದೊರೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ರುಕ್ಮಾಪುರ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಗ್ರಾಂಪ ಮಾಜಿ ಅಧ್ಯಕ್ಷ ನಿಂಗಪ್ಪ ರುಕ್ಮಾಪುರ,ತಾಪಂ ಸದಸ್ಯ ಸುರೇಂದ್ರ ನಾಯಕ, ಹನುಮಂತಗೌಡ ದಳಪತಿ,ಮಲ್ಲಯ್ಯ ಬಂಡಾರಿ,ಸುರೇಶ್ ಶೆಟ್ಟಿಯವರು ವಹಿಸಿದ್ದರು. ಕಾರ್ಯಕ್ರಮವನ್ನು ತಾಲೂಕಿನ ಯೋಜನಾಧಿಕಾರಿಗಳು ನಾಗೇಶ್ ನಿರೂಪಿಸಿ ಸ್ವಾಗತಿಸಿದರು ವಲಯ ಮೇಲ್ವಿಚಾರಕ ಜೈ ಶ್ರೀ ಅಂಗಡಿ ವಂದಿಸಿದರು.ಕಾರ್ಯಕ್ರಮದಲ್ಲಿ ತಾಲೂಕಿನ ಮೇಲ್ವಿಚಾರಕ ಶ್ರೇಣಿ ಸಿಬ್ಬಂದಿಗಳಾದ ಅನಿತಾ, ವಿನೋದ, ಸಿದ್ದರಾಮ, ಅಶೋಕ, ದತ್ತಾತ್ರೆಯ ವಲಯದ ಸೇವಾ ಪ್ರತಿನಿಧಿಗಳು ಒಕ್ಕೂಟ ಪದಾಧಿಕಾರಿಗಳು ಸಹಾಯ ಮತ್ತು ಪ್ರಗತಿ ಬಂದು ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!