ಶರಣ ಬಸವ ವಸತಿ ಶಾಲೆಯಲ್ಲಿ CET(ಟ್ಯಾಲೆಂಟ್ ಕ್ವೆಸ್ಟ್) ಪರೀಕ್ಷೆ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿನ ವೀರಪ್ಪ ನಿಷ್ಠಿ ತಾಂತ್ರಿಕ ಮಹಾ ವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಇಲ್ಲಿಯ ಶರಣಬಸವ ವಸತಿ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ.ಶಾಂತಲಾ ಎಸ್.ನಿಷ್ಠಿ ಹಾಗೂ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಎಸ್.ನಿಷ್ಠಿ ಅವರ ಮಾರ್ಗದರ್ಶನದ ಮೇರೆಗೆ ಪ್ರಪ್ರಥಮ ಬಾರಿಗೆ ಎಸ್‌ಬಿಆರ್ ಸಿಇಟಿ (ಟ್ಯಾಲೆಂಟ್ ಕ್ವೆಸ್ಟ್) ಪರೀಕ್ಷೆಯನ್ನು ಭಾನುವಾರ ನಡೆಸಲಾಯಿತು.
ತಾಲೂಕಿನ ಸುತ್ತಮುತ್ತಲಿನ ಸುಮಾರು 20 ಕ್ಕೂ ಹೆಚ್ಚು ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಈ ಪರೀಕ್ಷೆ ನಡೆಸಲಾಯಿತು. ಸುಮಾರು 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿ ಈ ಪರೀಕ್ಷೆಯನ್ನು ಯಶಸ್ವಿಗೊಳಿಸಿದರು.
ಪರೀಕ್ಷಾ ಮುಗಿದ ನಂತರ ವಿದ್ಯಾರ್ಥಿಗಳಿಗೆ ವಿಶೇಷ ಸಂವಾದ ಕಾರ್ಯಕ್ರಮ ಏರ್ಪಡಿಸಿ ಶೈಕ್ಷಣಿಕ ವಿಭಾಗದ ನಿರ್ದೇಶಕ ಪ್ರೊ.ಅನಿಕುಮಾರ ಮಾಲಿ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳಿಗಾಗಿರುವ ವಿವಿಧ ಅವಕಾಶಗಳ ಕುರಿತು ಪ್ರೇರಿಪಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲ ನಾನಾಗೌಡ ದೇಸಾಯಿ ಮಾತನಾಡಿ, ವಾಣಿಜ್ಯ ವಿಭಾಗದಲ್ಲಿರುವ ವೈವಿಧ್ಯಮಯ ಅವಕಾಶಗಳನ್ನು ತಿಳಿ ಹೇಳಿದರು. ಶಾಲೆಯ ಮುಖ್ಯ ಗುರು ರೇವಪ್ಪ ಪಾಟೀಲ್ ಸೇರಿದಂತೆ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು ಇದ್ದರು.ಪ್ರೊ.ಮೋಹನರೆಡ್ಡಿ ದೇಸಾಯಿ ನಿರೂಪಿಸಿ ವಂದಿಸಿದರು.

ಪರೀಕ್ಷೆ ಯಶಸ್ವಿಗೆ ಹರ್ಷ.
ಸಿಇಟಿ ಪರೀಕ್ಷೆ ಯಶಸ್ವಿಗೊಂಡಿದ್ದಕ್ಕಾಗಿ ಸಂಸ್ಥೆಯ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯ ಕಲಬುರಗಿಯ ಕುಲಾಧಿಪತಿ ಮಾತೋಶ್ರೀ ಪೂಜ್ಯ ಡಾ.ದಾಕ್ಷಾಯಣಿ ಎಸ್. ಅಪ್ಪ,  9ನೇ ಪೀಠಾಧಿಪತಿ ಪರಮ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ,ಉಪಾಧ್ಯಕ್ಷರಾದ ಪೂಜ್ಯ ಮಾತೋಶ್ರೀ ನೀಲಮ್ಮ ತಾಯಿ ವ್ಹಿ ನಿಷ್ಠಿ, ಕಾರ್ಯದರ್ಶಿ ಡಾ.ಶಾಂತಲಾ ಎಸ್ .ನಿಷ್ಠಿ, ಹಿರಿಯ ನ್ಯಾಯವಾದಿಗಳು ಹಾಗೂ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಶರಣಬಸಪ್ಪ ವ್ಹಿ. ನಿಷ್ಠಿ,ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಎಸ್ .ನಿಷ್ಠಿ, ಪ್ರಾಂಶುಪಾಲರು ಹಾಗೂ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

ಸುರಪುರ ಎಸ್‌ಬಿಆರ್ ಶಾಲೆಯಲ್ಲಿ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಶೈಕ್ಷಣಿಕ ವಿಭಾಗದ ನಿರ್ದೇಶಕ ಪ್ರೊ.ಅನಿಕುಮಾರ ಮಾಲಿ ಪಾಟೀಲ್ ಮಾತನಾಡಿದರು.

Leave a Reply

Your email address will not be published. Required fields are marked *

error: Content is protected !!