2026-ಶ್ರೀ ಮಹರ್ಷಿ ವಾಲ್ಮೀಕಿ ಪರೀಶಿಷ್ಟ ಪಂಗಡ ಪತ್ತಿನ ಸಹಕಾರ ಸಂಘದ ದಿನ ದರ್ಶೀಕೆ ಬಿಡುಗಡೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ನಗರದ ನಮ್ಮ ಶ್ರೀ ಮಹರ್ಷಿ ವಾಲ್ಮೀಕಿ ಪರೀಶಿಷ್ಟ ಪಂಗಡ ಪತ್ತಿನ ಸಹಕಾರ ಸಂಘವತಿಯಿಂದ 2026ನೇ ಸಾಲಿನ ದಿನದರ್ಶಿಕೆಯನ್ನು ರವಿವಾರ ರಂದು ಶಾಸಕರ ಕಛೇರಿಯಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಯಿತು.
ದಿನ ದರ್ಶೀಕೆ ಮಾಡಿ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿ, ದಿನದರ್ಶಿಕೆ ನಮ್ಮ ದೈನಂದಿನ ಜೀವನದ ಅತ್ಯಗತ್ಯ ಸಾಧನವಾಗಿದ್ದು, ಸಮಯಪಾಲನೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಈ ದಿನದರ್ಶಿಕೆಯಲ್ಲಿ ಹಬ್ಬಗಳು, ಜಯಂತಿಗಳು, ರಾಷ್ಟ್ರೀಯ ದಿನಗಳು, ಮಹನೀಯರ ಸಂದೇಶಗಳು ಹಾಗೂ ಉಪಯುಕ್ತ ಮಾಹಿತಿಯನ್ನು ಒಳಗೊಂಡಿದ್ದು, ಸಾರ್ವಜನಿಕರಿಗೆ ಮಾರ್ಗದರ್ಶಕವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶ್ರೀ ವಿಠಲ ಯಾದವ್ , ಸಂಘದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಕುಲಕರ್ಣಿ ಗೌಡಗೇರಾ, ಅಬ್ದುಲ್ ಗಫಾರ್ ನಗನೂರಿ, ನಾಗಪ್ಪ ಕಟ್ಟಿಮನಿ, ನಾಗರಾಜ ನಾಯಕ ಪ್ಯಾಪ್ಲಿ, ದೇವಿಂದ್ರ ನಾಯಕ್, ಮಾರ್ಥಂಡಪ್ಪ ದೋರಿ, ಸಚಿನ್ ಕರ್ನಾಳ, ಚಂದ್ರಶೇಖರ್, ಸಿದ್ದು ಜೈನಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.ಕೊನೆಯಲ್ಲಿ ಎಲ್ಲರಿಗೂ ದಿನದರ್ಶಿಕೆ ವಿತರಿಸಲಾಯಿತು.

