ಕನಕ ಗುರುಪೀಠದ ಲಿಂಗೈಕ್ಯ ಮಹಾಸ್ವಾಮಿಗಳ ಸಮಾಧಿಗೆ ರಾಜುಗೌಡ್ರು ಪುಷ್ಪಾರ್ಚನೆ

ಸುರಪುರ ಟೈಮ್ಸ್ ವಾರ್ತೆ
ಸುರಪುರ;ದಿನಾಂಕ 15-01-202 ರಂದು ಕಾಗಿನೆಲೆ ಮಹಾಸಂಸ್ಥಾನ ತಿಂಧಣಿ ಬ್ರಿಡ್ಜ್ ಕನಕಗುರುಪೀಠದ ದಿ| ಶ್ರೀ ಪರಮಪೂಜ್ಯ ಸಿದ್ಧರಾಮನಂದಪುರಿ ಮಹಾಸ್ವಾಮಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ, ಇಂದು ಮಠಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ನರಸಿಂಹ ನಾಯಕ ರಾಜುಗೌಡ್ರು ಭೇಟಿ ನೀಡಿ ಮಹಾಸ್ವಾಮಿಗಳ ಸಮಾಧಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ), ಜಿಪಂ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ,ಡಾ.ಬಿ.ಎಮ್ ಹಳ್ಳಿಕೋಟಿ, ಎಚ್.ಸಿ.ಪಾಟೀಲ್, ವಿರೇಶ ಚಿಂಚೋಳಿ ಹುಣಸಗಿ,ವಿರುಪಾಕ್ಷಯ್ಯ ಸ್ಥಾವರಮಠ, ಸಣ್ಣ ದೇಸಾಯಿ ದೇವರಗೋನಾಲ,ಮಲ್ಲು ದಂಡಿನ್  ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!