ತಿಂಥಣಿ ಶ್ರೀ ಮೌನೇಶ್ವರ ಜಾತ್ರೆಗೆ ಸೌಲಭ್ಯ ಕಲ್ಪಿಸಿ

ಸುರಪುರ ಟೈಮ್ಸ್ ವಾರ್ತೆ

ಸುರಪುರ:ಮುಂಬರುವ ಇದೇ ಜನವರಿ 28ರಿಂದ ಸುಕ್ಷೇತ್ರ ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ ನಡೆಯಲಿದ್ದು, ಜಾತ್ರೆಗೆ ಆಗಮಿಸುವ ಭಕ್ತರಿಗೆ ಸೂಕ್ತ ಮೂಲ ಸೌಲಭ್ಯ ಕಲ್ಪಿಸುವಂತೆ ಕಾರ್ಮಿಕ ರಕ್ಷಣಾ ವೇದಿಕೆ ಟ್ರೇಡ್ ಯೂನಿಯನ್ ಹಾಗೂ ವಿಶ್ವಕರ್ಮ ಮಹಾಸಭಾ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ, ಜಾತ್ರೆಗೆ ನಾನಾ ಕಡೆಯಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸುವುದು ನಮ್ಮೆಲ್ಲರ ಜಿಮ್ಮೇದಾರಿಯಾಗಿದೆ. ಇದಕ್ಕಾಗಿ ಈಗಿನಿಂದಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಸಮರ್ಪಕ ಕುಡಿಯುವ ನೀರಿನ ಸೌಲಭ್ಯ, ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ, ಹೆಚ್ಚಿನ ಸಾರಿಗೆ ಸೌಲಭ್ಯ, ಆರೋಗ್ಯ ಘಟಕದ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ತಡೆರಹಿತ ವಿದ್ಯುತ್ ಪೂರೈಕೆ ಮಾಡುವುದು ಅತ್ಯವಶ್ಯವಿದೆ. ಇದಲ್ಲದೇ ಎಲ್ಲೆಡೆ ಸಮರ್ಪಕವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಿದರೆ ಸಾಕಷ್ಟು ಅನುಕೂಲವಾಗುತ್ತದೆ. ಸಮಯಕ್ಕೆ ಸರಿಯಾಗಿ ಪ್ರಸಾದ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.
ಇದಲ್ಲದೇ ಮುಖ್ಯವಾಗಿ ಮದ್ಯಪಾನ ಹಾಗೂ ಮಾಂಸ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧ ಮಾಡಬೇಕಿದೆ. ಇದರಿಂದಾಗಿ ಸಾಕಷ್ಟು ಅನುಕೂಲವಾ ಗುತ್ತದೆ. ರಾಜ್ಯ ಮತ್ತು ಹೊರ ರಾಜ್ಯಗಳಿಂದ ಸಾಕಷ್ಟು ಪ್ರಮಾಣದಲ್ಲಿ ಭಕ್ತಾಧಿಗಳು ಮೌನೇಶ್ವರನ ದರ್ಶನಕ್ಕೆ ಆಗಮಿಸುತ್ತಾರೆ. ಹೀಗಾಗಿ ಇವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ ಎಂದು ತಿಳಿಸಿದರು.
ಸಮರ್ಪಕವಾಗಿ ಮಹಿಳಾ ಶೌಚಾಲಯ ವ್ಯವಸ್ಥೆ ಕಲ್ಪಿಸಿದರೆ ಸ್ವಚ್ಛತೆ ಕಾಪಾಡಲು ಅನುಕೂಲವಾಗುತ್ತದೆ. ಒಂದು ವೇಳೆ ನಿಷ್ಕಾಳಜಿಯನ್ನು ವಹಿಸಿದರೆ ಪರಿಸರಕ್ಕೆ ಹಾನಿಯಾಗಲಿದೆ. ಇದಲ್ಲದೇ ಮಹಿಳೆಯರಿಗೆ ಸಾಕಷ್ಟು ತೊಂದರೆ ಆಗುತ್ತದೆ ಎಂದು ಹೇಳಿದರು.
ಮೌನೇಶ್ವರ ದೇವಸ್ಥಾನದ ಒಳಗಡೆ ನಡೆಯುವ ಪೂಜಾ ಕೈಂಕರಿಯ ಹಾಗೂ ಸಂಗೀತ ಕಾರ್ಯಕ್ರಮ ಮತ್ತು ಪುರವಂತರ ಸೇವೆಯನ್ನು ನೋಡಲು ಎರಡು ದಿನದ ಮಟ್ಟಿಗೆ ದೇವಸ್ಥಾನದ ದ್ವಾರ ಬಾಗಿಲ ಎರಡು ಕಡೆ ದೊಡ್ಡ ದೊಡ್ಡ ಎಲ್ಇಡಿ LED ಸ್ಕ್ರೀನ್ಗಳನ್ನು  ಅಳವಡಿಸಬೇಕು.ತಿಂಥಣಿ ಗ್ರಾಮ ಪಂಚಾಯಿತಿಯಿಂದ ದೇವಸ್ಥಾನದವರೆಗೆ ಹಾಗೂ ತಿಂಥಣಿ ಗ್ರಾಮದ ಹಳ್ಳದ ದಂಡೆಯಲ್ಲಿರುವ ಶ್ರೀ ಮೌನೇಶ್ವರ ಕಟ್ಟಿಯಿಂದ ಮೌನೇಶ್ವರ ದೇವಸ್ಥಾನದವರೆಗೆ ಸಣ್ಣ ಸಣ್ಣ ಝೀರೋ ಬಲ್ಪ್ ಗಳನ್ನು ಅಳವಡಿಸಿ ಅತ್ಯಾಕರ್ಷಕ ಲೈಟಿಂಗ್ ವ್ಯವಸ್ಥೆ ಮಾಡಬೇಕು ಅಲ್ಲದೆ ಬಾಜಾರ್ ಲೈನ್ ಗಳಲ್ಲಿ ಬಸ್ ನಿಲ್ದಾಣದ ಹತ್ತಿರ, ದಾಸೋಹ ಗಳ ಹತ್ತಿರ ಹಾಗೂ ಪಾರ್ಕಿಂಗ್ ಇರುವ ಸ್ಥಳಗಳಲ್ಲಿ ದೊಡ್ಡ ದೊಡ್ಡ ಮರ್ಕೂರಿ ಲೈಟ್ ಗಳನ್ನು ಹಾಕಬೇಕುಕೃಷ್ಣಾ ನದಿಯಲ್ಲಿ ಜಾತ್ರೆ ಸಮಯದಲ್ಲಿ ಡ್ಯಾಮಿನಿಂದ ಹೆಚ್ಚು ನೀರನ್ನು ಬಿಡಿಸಬೇಕು ಭಕ್ತಾದಿಗಳಿಗೆ ನೀರಿನ ತೊಂದರೆಯಾಗದಂತೆ ತಾವುಗಳು ಡ್ಯಾಮ್ ಡಿವಿಜನಕ್ಕೆ(Dam Division)ಮನವಿ ಮಾಡಿ ನೀರು ಬಿಡಸಬೇಕು. ಜಾತ್ರೆಯ ರಕ್ಷಣೆಗಾಗಿ ಮತ್ತು ಕಳ್ಳತನ ಆಗದಂತೆ ಹಾಗೂ ಭಕ್ತಾದಿಗಗಳಿಗೆ ಜಾತ್ರೆಯಲ್ಲಿ ಟೆಂಡರ್ ಮಾಡಿರುವ ಕಲ್ಲು ಸಕ್ಕರೆ ಪ್ರಸಾದ ಹಾಗೂ ಅಂಗಡಿಗಳಿಗೆ ಸಂಪರ್ಕ ಕಲ್ಪಿಸುವ ಲೈಟಿಂಗ್ ವ್ಯವಸ್ಥೆ ಇವೆಲ್ಲ ಟೆಂಡರ್ ಆದೇಶ ಮೀರದಂತೆ ಆದೇಶದ ಪ್ರಕಾರ ನಡೆಯುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಗಮನಿಸಲು ಅಧಿಕಾರಿಗಳನ್ನು ನೇಮಿಸಬೇಕು ಎಂದರು.ಸಮರ್ಪಕ ವಿದ್ಯುತ್ ಸರಬರಾಜು ಅತ್ಯಾಕರ್ಷಕ ಲೈಟಿಂಗ್ ವ್ಯವಸ್ಥೆ ಆಗುವಂತೆ ಮಾಡಬೇಕು. ವಿದ್ಯುತ್ ಸಮಸ್ಯೆಯಿಂದ ಮುಕ್ತಿ ಕಾಣಲು ಸೂಕ್ತ ಪರಿಹಾರವನ್ನು ಜಿಲ್ಲಾಡಳಿತ ಕಂಡುಕೊಳ್ಳಬೇಕಿದೆ. ಜಾತ್ರೆಯಲ್ಲಿ ವಿದ್ಯುತ್ ಬೇಕಾಬಿಟ್ಟಿಯಾಗಿ ಕಡಿತ ಮಾಡುವುದರಿಂದಾಗಿ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಜಾತ್ರೆಯಲ್ಲಿ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಈ ವಿಷಯವನ್ನು ಮಾನವ ಹಕ್ಕು ಆಯೋಗವು ಕೂಡ ಗಂಭೀರವಾಗಿ ಪರಿಗಣಿಸಿದೆ ಎಂದು ಕೋರಿದರು.

ಈ ಸಂದರ್ಭದಲ್ಲಿ ಕಾರ್ಮಿಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ನಾಯಕ ತಿಂಥಣಿ,ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಯಾದಗಿರಿ ಜಿಲ್ಲಾಧ್ಯಕ್ಷ ಮಹೇಶ ವಿಶ್ವಕರ್ಮ ತಡಿಬಿಡಿ, ಪ್ರದಾನ ಕಾರ್ಯದರ್ಶಿ ರಮೇಶ ಬಿ ವಿಶ್ವಕರ್ಮ, ಸುರಪುರ ತಾಲೂಕ ಅಧ್ಯಕ್ಷ ದೇವಿಂದ್ರಪ್ಪ ವಿಶ್ವಕರ್ಮ,ಜಿಲ್ಲಾ ಗೌರವಾಧ್ಯಕ್ಷ
ಶಿವಣ್ಣ ಉನೂರು, ಜಿಲ್ಲಾ ವಿಶ್ವಕರ್ಮ ಕಾರ್ಯದರ್ಶಿ ಹಣಮಂತ್ರಾಯ
ಮಲ್ಲಿಕಾರ್ಜುನ ವಿಶ್ವಕರ್ಮ ಯಾದಗಿರಿ,ರಾಜಶೇಖರ ವಿಶ್ವಕರ್ಮ ಹತ್ತಿಕುಣಿ,ಈರಣ್ಣ ವಿಶ್ವಕರ್ಮ ದೇವರಗೋನಾಲ ತಿಪ್ಪಣ್ಣ ಮಾಸ್ಟರ್ ಸುರಪುರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಿ ಬಿ ವಿಶ್ವಕರ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!