ಮಣ್ಣು–ನೀರು ಮತ್ತು ಸಸಿ ಮಾದರಿಗಳ ಪರೀಕ್ಷಾ ಕೇಂದ್ರದ ಕೊರತೆ:KRRS ಹಾಗೂ ಹಸಿರು ಸೇನೆಯಿಂದ ಸ್ಥಾಪನೆಗೆ ಆಗ್ರಹ
ಸುರಪುರ ಟೈಮ್ಸ್ ವಾರ್ತೆ
ಹುಣಸಗಿ ;ತಾಲೂಕು ಪ್ರದೇಶದಲ್ಲಿ ಮಣ್ಣು, ನೀರು ಹಾಗೂ ಸಸಿ ಮಾದರಿಗಳ ವೈಜ್ಞಾನಿಕ ಪರೀಕ್ಷೆಗೆ ಅಗತ್ಯವಾದ ಪರೀಕ್ಷಾ ಕೇಂದ್ರಗಳ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಇದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ (KRRS) ಹಾಗೂ ಹಸಿರು ಸೇನೆ ಆತಂಕ ವ್ಯಕ್ತಪಡಿಸಿದೆ.
ಮಣ್ಣಿನ ಗುಣಮಟ್ಟ, ನೀರಿನ ಶುದ್ಧತೆ ಹಾಗೂ ಸಸಿಗಳ ಆರೋಗ್ಯದ ಕುರಿತು ಸೂಕ್ತ ಪರೀಕ್ಷೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಇಲ್ಲವೇ ಕೃಷಿ ಮಹಾವಿದ್ಯಾಲಯ ವಿಜಯಪೂರ ಸುಎ150 ಕಿ.ಮೀ ದೂರ ಹೋಗಬೇಕಾಗುತ್ತದೆ ಇದರಿಂದಾಗಿ ರೈತರು ಅಂದಾಜಿನ ಮೇಲೆ ಕೃಷಿ ನಡೆಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗುವುದರೊಂದಿಗೆ ಬೆಳೆ ನಷ್ಟಕ್ಕೂ ಕಾರಣವಾಗುತ್ತಿದೆ ಎಂದು ಸಂಘಟನೆಗಳು ತಿಳಿಸಿವೆ.
ಇಂದಿನ ಆಧುನಿಕ ಕೃಷಿಯಲ್ಲಿ ಮಣ್ಣು–ನೀರು–ಸಸಿ ಪರೀಕ್ಷೆ ಅತ್ಯಂತ ಅಗತ್ಯವಾಗಿದ್ದು, ಸ್ಥಳೀಯ ಮಟ್ಟದಲ್ಲೇ ಪರೀಕ್ಷಾ ಕೇಂದ್ರ ಸ್ಥಾಪನೆಯಾದರೆ ರೈತರಿಗೆ ಸಮಯ ಮತ್ತು ಹಣ ಉಳಿತಾಯವಾಗಲಿದೆ. ಜೊತೆಗೆ, ಸರಿಯಾದ ಸಲಹೆ ದೊರೆತು ಸುಸ್ಥಿರ ಕೃಷಿಗೆ ಸಹಕಾರಿಯಾಗುತ್ತದೆ ಎಂದು KRRS ಹಾಗೂ ಹಸಿರು ಸೇನೆ ರಾಜ್ಯ ಪ್ರದಾನ ಸಂಚಾಲಕ ನಾಗಯ್ಯ ಸ್ವಾಮಿ ಎಸ್ ದೇಸಾಯಿಗುರು ಅಭಿಪ್ರಾಯಪಟ್ಟಿವೆ.
ಆದ್ದರಿಂದ ಸಂಬಂಧಿಸಿದ ಇಲಾಖೆ ತಕ್ಷಣ ಕ್ರಮಕೈಗೊಂಡು ಈ ಭಾಗದಲ್ಲಿ ಮಣ್ಣು–ನೀರು ಮತ್ತು ಸಸಿ ಮಾದರಿಗಳ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆಯನ್ನು ಸಹ ನೀಡಿವೆ. ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ
ಗುರುಲಿಂಗಪ್ಪ ಸಜ್ಜನ ,ಜಿಲ್ಲಾ ಕಾರ್ಯಾಧ್ಯಕ್ಷ ರಾಜಾಶಂಕರ ದೇಸಾಯಿ,ಶಂಕರನಾಯಕ ಜಾಧವ ,ಮಹಿಳಾ ಘಟಕದ ತಾಲೂಕು ಅಧ್ಯಕ್ಷ ಸಂಗಮ್ಮ ಎಸ್ ಮುದಗಲ್, ಬೋರಮ್ಮ ಭೀಮನಗೌಡ ಹೊಸಳ್ಳಿ ಅಮರೇಶಗೌಡ ಬಿರಾದಾರ,ಹಣಮಂತ್ರಾಯಗೌಡ ಹಳ್ಳಿ ದ್ಯಾಮಣ್ಣ ಗುಜ್ಜಲ್ ರಾಯನಪಾಳೆ,ಈರಸಂಗಪಗೌಡ ಅಂಬಲಿಹಾಳ ಮಲ್ಲನಗೌಡ ಅರಿಕೇರಿ ಕಾಸಿಮಸಾಬ ಮಾಳನೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.


