ಜ.25 ರಂದು ತಾಲೂಕು ಮಟ್ಟದ ಸವಿತಾ ಮಹರ್ಷಿ ಜಯಂತ್ಯೋತ್ಸವ:ಸರಕವಾಸ್
ಸುರಪುರ ಟೈಮ್ಸ್ ವಾರ್ತೆ
ಸುರಪುರ : ತಾಲೂಕಿನಲ್ಲಿ ಸವಿತಾ ಮಹರ್ಷಿ ಜಯಂತಿಯನ್ನು ಜ.25 ರಂದು ಆಚರಿಸಲಾಗುವುದು. ಎಲ್ಲಾ ಸರಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸಬೇಕು ಎಂದು ತಹಸೀಲ್ದಾರ್ ಹೆಚ್.ಎ.ಸರಕವಾಸ್ ಹೇಳಿದರು.
ಇಲ್ಲಿಯ ತಹಸಿಲ್ ಕಚೇರಿಯ ಸಭಾಂಗಣದಲ್ಲಿ ಸವಿತಾ ಮಹರ್ಷಿ ಜಯಂತಿ ನಿಮಿತ್ಯವಾಗಿ ಶನಿವಾರ ಜರುಗಿದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ಗಂಟೆಗೆ ಸವಿತಾ ಮಹರ್ಷಿ ಅವರ ಭಾವಚಿತ್ರವಿಟ್ಟು ಪುಷ್ಪ ನಮನ ಸಲ್ಲಿಸಿ ಜಯಂತಿ ಆಚರಿಸಬೇಕು ಎಂದು ಸೂಚಿಸಿದರು.
ತಹಸಿಲ್ ಕಚೇರಿಯ ಸಭಾಂಗಣದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಜಯಂತ್ಯುತ್ಸವ ಇರುತ್ತದೆ. ಎಲ್ಲಾ ಅನುಷ್ಟಾನಾಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಜಯಂತಿಯಲ್ಲಿ ಸವಿತಾ ಮಹರ್ಷಿ ಕುರಿತಾದ ಉಪನ್ಯಾಸ ನಡೆಯಲಿದೆ ಎಂದು ತಿಳಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ, ಎಸ್‌ಟಿಒ ಎಸ್.ಎಚ್.ಕೊಂಡಿಕಾರ, ಉಪ ನೋಂದಾಣಾಧಿಕಾರಿ ಗುರುರಾಜ್ ಸಜ್ಜನ್.ಸಿಡಿಪಿಒ ಕಚೇರಿಯ ಭೀಮಾಶಂಕರ ನಾಯಕ, ನಾನಾ ಇಲಾಖೆಯ ಅಧಿಕಾರಿಗಳಾದ ಸಿಕೆ ಸಣ್ಣಕ್ಕನವರ, ಎಲ್.ಎನ್.ಚೌದ್ರಿ, ವಿಜಯಕುಮಾರ ಜೋಶಿ, ಮೈನುದ್ದೀನ್, ನಿಂಗಣ್ಣ, ಕವಿತಾ, ಭಾಗಶ್ರೀ ಸೇರಿ ಇತರರಿದ್ದರು. ಸವಿತಾ ಸಮಾಜ ಸಂಘದ ತಾಲೂಕು ಅಧ್ಯಕ್ಷ ದೇವಿಂದ್ರಪ್ಪ ಅಜ್ಜಿಕೊಲ್ಳಿ, ಮುಖಂಡರಾದ ಚಂದ್ರಾಮ ಮೂಲಿಮನಿ, ಬಾಲರಾಜ್ ಚಿನ್ನಕಾರ, ಮಂಜುನಾಥ ಅನ್ವರ್, ಗೋಪಾಲ ಚಿನ್ನಾಕಾರ, ಚಂದ್ರು ಸೇರಿದಂತೆ ಇತರರು ಉಪಸ್ಥಿತರಿದ್ದರು.



