ಕ್ರೀಡೆಯಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ : ಸಂತೋಷ ನಾಯಕ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಮನುಷ್ಯನ ಜೀವನ ಆರೋಗ್ಯಕರವಾಗಿಡಲು ಕ್ರೀಡೆಯು ಸಹಕಾರಿಯಾಗಿದ್ದು. ಪ್ರತಿಯೊಬ್ಬ ಯುವಕನು ಸಹ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು, ಆಟದಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವಂತೆ ಕಾಂಗ್ರೆಸ್ ಯುವ ಮುಖಂಡ ರಾಜಾ ಸಂತೋಷ ನಾಯಕ ಹೇಳಿದರು.
ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ದಿ. ರಾಜಾ ವೆಂಕಟಪ್ಪ ನಾಯಕ್ ಇವರ ಸ್ಮರಣಾರ್ಥವಾಗಿ ಆಯೋಜಿಸಿರುವ ಗ್ರಾಮೀಣ ಮಟ್ಟದ ಹಾರ್ಡ್ ಟೆನ್ನಿಸ್ ಕ್ರಿಕೆಟ್ ಬಾಲ್ ಟೂರ್ನಮೆಂಟ್ ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡಾಕೂಟದಲ್ಲಿ ಸೋಲು- ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವ ಮುಖ್ಯ, ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ಮಾನವೀಯ ಕ್ರೀಡಾಪಟು ವಾಗುವಂತೆ ಸಲಹೆ ನೀಡಿದರು.
ಸಂದರ್ಭದಲ್ಲಿ ಮುಖಂಡ ಭೀಮರಾಯ ಮೂಲಿಮನಿ ಮಾತನಾಡಿ ದಿ. ರಾಜಾ ವೆಂಕಟಪ್ಪ ನಾಯಕ್ ಅವರು ಅಪರೂಪದ ನಾಯಕರು, ಅವರ ಹೆಸರಿನಲ್ಲಿ ಯುವಕರು ಟೂರ್ನಮೆಂಟ್ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಯಾವುದೇ ಮನಸ್ತಾಪಗಳಿಲ್ಲದೆ ಕ್ರೀಡಾ ಮನೋಭಾವದಿಂದ ಟೂರ್ನಮೆಂಟ್ ನಡೆಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪೂಜ್ಯರಾದ ದೇವರು ಗೋವಿಂದರಾಜ ಮುತ್ಯಾ ಘಂಟಿ, ಮುಖಂಡರಾದ ಹನುಮಂತ್ರಾಯ ದೊಣ್ಣೆಗೇರಾ, ಬಾಪುಗೌಡ ಶಾಂತಗೌಡ ಪಾಟೀಲ ಚನ್ನಪಟ್ಟಣ,ನಂದಣ್ಣ ಮೇಟಿ, ಬಲ ಭೀಮರಾಯ ಘಂಟಿ, ಅಯ್ಯಪ್ಪ ಗೌಡ ಪಾಟೀಲ್, ಚಂದ್ರು ಮಲ್ಕಾಪುರ್, ನಿಂಗಣ್ಣ ಆಲ್ದಾಳ, ಮುದ್ದಣ್ಣ ಸಾಹು, ಲಕ್ಷ್ಮಣ್ ನಾವದಗಿ, ರಂಗಣ್ಣ ಘಂಟಿ, ನಾಗರಾಜ್ ಬಾವಿಹೊಲ, ವೆಂಕಟೇಶ್ ಮಾರಲಬಾವಿ ಪಾರಪ್ಪ, ಕೃಷ್ಣಪ್ಪ ಗೌಡ, ಪರಮಣ್ಣಗೌಡ, ಭೀಮನಗೌಡ, ನರಸಣ್ಣ ಒಡವಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹತ್ತು ಓವರಗಳ ಟೂರ್ನಮೆಂಟ್
ಟೂರ್ನಮೆಂಟ್ ನಲ್ಲಿ ಕಡ್ಡಾಯವಾಗಿ ಗ್ರಾಮೀಣ ಮಟ್ಟದ ಆಟಗಾರರು ಪಾಲ್ಗೊಳ್ಳುಬೇಕು. ಹಂತ ಹಂತವಾಗಿ ನಡೆಯುವ ಲೀಗ್ ಪಂದ್ಯಗಳಲ್ಲಿ ಗೆದ್ದು ಫೈನಲ್ ಪ್ರವೇಶಿಸಿ. ಫೈನಲ್ ಪಂದ್ಯ ವಿಜೇತರಾದವರಿಗೆ ಪ್ರಥಮ ಬಹುಮಾನ 30 ಸಾವಿರ ನಗದು ಒಂದು ಆಕರ್ಷಕ ಕಪ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 20 ಸಾವಿರ ನಗದು ಒಂದು ಆಕರ್ಷಕ ಕಪ್, ತೃತೀಯ ಸ್ಥಾನ ಪಡೆದ ತಂಡಕ್ಕೆ 10 ಸಾವಿರ ನಗದು ಒಂದು ಆಕರ್ಷಕ ಕಪ್ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.

