ಭೂ ದಾನಿ, ವಿವಿಧ ಕ್ಷೇತ್ರದ ಸಾಧಕರಿಗೆ ಬಡಿ ಮಸೀದಿ ಮುಸ್ಲಿಂ ಸಮಾಜದ ವತಿಯಿಂದ ಗೌರವ ಸನ್ಮಾನ
ಸುರಪುರ ಟೈಮ್ಸ್ ವಾರ್ತೆ
ಸುರಪುರ ; ನಗರದ ಇನಾಂದಾರ್ ಅಸ್ಪತ್ರೆ ಹಾಲಿನಲ್ಲಿ ಸುರಪುರ ಬಡಿ ಮಸೀದಿ ಮುಸ್ಲಿಂ ಸಮಾಜದ ವತಿಯಿಂದ ಡಾ.ಮೌಲಾನಾ ಅಬ್ಬುಲ್ ಕಲಾಂ ಆಜಾದ್ ಶಿಕ್ಷಣ ಸರ್ಕಾರಿ ಶಾಲಾ ಕಟ್ಟಡಕ್ಕೆ ತಮ್ಮ ಜಮೀನನ್ನು ದೇಣಿಗೆ ನೀಡಿದ ಖಾಲಿದ ಸಾಬ್ ತಾಳಿಕೋಟಿಯವರನ್ನು ಮತ್ತು ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಭಾರತ ಸೇವಾ ರತ್ನ ಪ್ರಶಸ್ತಿ ಪಡೆದಿರುವ ಸಮಾಜದ ಯುವಕರ ಪರವಾಗಿ ಸದಾ ಸಮಾಜ ಸೇವೆ ಮಾಡುವ ಅಮ್ಜದ್ ಖಾನ್ ಭಗವಾನ್ ವಕೀಲರಿಗೂ ಹಾಗೂ ಶಿಕ್ಷಣ ವೃತ್ತಿಯಲ್ಲಿ ತಮ್ಮ ಸೇವೆಸಲ್ಲಿಸಿರುವ ಚಿನ್ನು ಮಿಯಾ ಪಟೇಲ್ ಗಣನೀಯ ಸಾಧನೆ ಮಾಡಿದ ಮುಸ್ಲಿಂ ಸಮಾಜದ ವ್ಯತ್ತಿಗಳಿಗೆ ಗೌರವ ಸನ್ಮಾನ ನೀಡಿ ಅಭಿನಂದಿಸಲಾಯಿತು.
ಶಿಕ್ಷಣ, ಸಮಾಜ ಸೇವೆ, ಕ್ರೀಡೆ, ವ್ಯಾಪಾರ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆಯ ಮೂಲಕ ಸಮಾಜಕ್ಕೆ ಮಾದರಿಯಾದ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷರಾದ ನದೀಮ್ ಮುಲ್ಲಾ ಹುಸೇನಿ ಇನಾಂದಾರ್ ಹಾಗೂ ಅಬ್ದುಲ್ ಖಾದರ್ ಲಾಯಿನ್ ಅವರು ಮುಸ್ಲಿಂ ಸಮಾಜದ ಸಾಧಕರು ಯುವಜನತೆಗೆ ಪ್ರೇರಣೆಯಾಗಿದ್ದು, ಅವರ ಸಾಧನೆಗಳು ಸಮಾಜದ ಒಗ್ಗಟ್ಟಿಗೆ ಮತ್ತು ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು. ಇಂತಹ ಗೌರವ ಸಮಾರಂಭಗಳು ಸಮಾಜದಲ್ಲಿ ಸಾಧನೆಗೆ ಉತ್ತೇಜನ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅಬ್ದುಲ್ ಮಜೀದ್ ಕುರೇಶಿ, ಶಕೀಲ್ ಅಹ್ಮದ್, ಮೇಬೂಬ್ ಬಡೇ ಕುರೇಶಿ, ಜಿಲಾನಿ KBN, ಖಾಜಾ ಹುಸೇನ್, ಮೌಲಾ ಅಲಿ, ಕಲೀಲ್ ಅಹಮದ್, ಅಬ್ದುಲ್ ಘನಿ, ಎಂ ಪಟೇಲ್, ಖಾಜಾಜಮೀರ್, ಸೇರಿದಂತೆ ಸಮಾಜದ ಹಿರಿಯರು, ಯುವಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಅಂತ್ಯದಲ್ಲಿ ಸನ್ಮಾನಿತರಾದವರು ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು.


