ರಾಜನಕೋಳೂರ ಗ್ರಾಮದಲ್ಲಿ 25ಕ್ಕೆ ಹಿಂದೂ ಸಮ್ಮೇಳನ ಹಾಗೂ ಶೋಭಾಯಾತ್ರೆ
ಸುರಪುರ ಟೈಮ್ಸ್ ವಾರ್ತೆ
ಹುಣಸಗಿ; ಸಮೀಪದ ರಾಜನಕೋಳೂರ ಗ್ರಾಮದಲ್ಲಿ ದಿನಾಂಕ – 25.01.2026 ರಂದು ಬೆಳಿಗ್ಗೆ 09:00 ಗಂಟೆಗೆ ಶೋಭಾಯಾತ್ರೆ ಹಾಗೂ ಮಧ್ಯಾಹ್ನ ಹಿಂದೂ ಸಮ್ಮೇಳನ ನಡೆಯಲಿದೆ ಎಂದು ಹಿಂದೂ ಸಮ್ಮೇಳನದ ಆಯೋಜನಾ ಸಮಿತಿ ಅಧ್ಯಕ್ಷ ಸಂಗನಗೌಡ ಮಾಗನೂರ ತಿಳಿಸಿದ್ದಾರೆ
ಕಾರ್ಯಕ್ರಮವದ ದಿವ್ಯ ಸಾನಿಧ್ಯವನ್ನು ಶ್ರೀ .ಪ.ಪೂ.ಮರಿಹುಚ್ಚೇಶ್ವರಿ ಸ್ವಾಮಿಗಳು ಶ್ರೀ ರಾಮಲಿಂಗೇಶ್ವರ ಮಠ ಆನಂದ ಆಶ್ರಮ ಗುಳಬಾಳ,ನೇತೃತ್ವವನ್ನು ಬಲಶೆಟ್ಟಿಹಾಳ ವಿರಕ್ತಮಠದ ಶ್ರೀ ಸಿದ್ದಲಿಂಗಯ್ಯ ಶಾಸ್ತ್ರೀಗಳು ವಹಿಸುವರು ಎಂದು ಹೇಳಿದರು.
ಅನಿಲಕುಮಾರ್ ಬಿರಾದಾರ್ ರಾಜ್ಯ ಸಹ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ಅನೇಕ ಗಣ್ಯರು ಭಾಗವಹಿಸಲಿದ್ದಾರೆ
ಮಕ್ಕಳು ಮಹಾಪುರುಷರ ಛದ್ಮವೇಷ ಧರಿಸಿ ಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದರು
ಸಾಮೂಹಿಕ ಡೊಳ್ಳು ಕುಣಿತ,ಕುಂಭ-ಕಳಸ,ರಾಜನಕೋಳೂ ಗ್ರಾಮದ ಎಲ್ಲಾ ಮಹಿಳಾ ಸ್ತ್ರೀಶಕ್ತಿ ಸಂಘದ ಸದಸ್ಯರು ಹಾಗೂ ಯುವ ಸಂಘಗಳ ಸದಸ್ಯರು ಉಪಸ್ಥಿತಿ ಇರಲಿದ್ದಾರೆ
ಶೋಭಾಯಾತ್ರೆಯಲ್ಲಿ ಮಹಾನ್ ದೇಶಭಕ್ತರ,ಸಂತರ, ಶರಣರ ಭಾವಚಿತ್ರಗಳಿಗೆ ಪುಷ್ಪಾರ್ಚನೆಯ ಮೂಲಕ ಭವ್ಯ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

