ಸ್ವಚ್ಛತೆಯೇ ಆರೋಗ್ಯದ ಮೂಲ : EO ಬಸಣ್ಣ ನಾಯಕ

ಸುರಪುರ ಟೈಮ್ಸ್ ವಾರ್ತೆ

ಹುಣಸಗಿ;ಗ್ರಾಮ ಮತ್ತು ಪಟ್ಟಣಗಳ ಸಮಗ್ರ ಅಭಿವೃದ್ಧಿಗೆ ಸ್ವಚ್ಛತೆ ಅತ್ಯಂತ ಮುಖ್ಯವಾಗಿದ್ದು, ಸ್ವಚ್ಛತೆಯೇ ಆರೋಗ್ಯದ ಮೂಲ ಎಂದು ಇಒ ಬಸಣ್ಣ ನಾಯಕ ಅವರು ಹೇಳಿದರು.

ಅವರು ಶುಕ್ರವಾರ ಹುಣಸಗಿ ತಾಲೂಕಿನ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಹುಣಸಗಿ ಹಾಗೂ ಸಾಹಸ್ ಸಂಸ್ಥೆಯ ಸಹಯೋಗದಲ್ಲಿ
ಗ್ರಾಮ ಪಂಚಾಯತಿಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸ್ವಚ್ಛವಾಹಿನಿ ಸಿಬ್ಬಂದಿಗಳಿಗೆ ಒಂದು ದಿನದ ಸುಸ್ಥಿರ ಘನ ತಾಜ್ಯ ನಿರ್ವಹಣಿಯ ಕುರಿತು ತರಬೇತಿ ಕಾರ್ಯಗಾರ ಹಾಗೂ ಜನ ಜಾಗೃತಿ ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿದ ಅವರು ಪ್ರತಿ ಸ್ವ-ಸಹಾಯ ಸಂಘಗಳ ಸಭೆಯಲ್ಲಿ ತ್ಯಾಜ್ಯ ನಿರ್ವಹಣೆ, ಸ್ವಚ್ಛತೆಯ ಕುರಿತು ಚರ್ಚಿಸಿ, ಪ್ರತಿ ಕುಟುಂಬಕ್ಕು ಸ್ವಚ್ಛತೆಯ ಘನತ್ಯಾಜ್ಯವನ್ನು ರಸ್ತೆ, ಚರಂಡಿ, ಮನೆಯ ಹಿತ್ತಲಲ್ಲಿ ಬಿಸಾಕದಂತೆ ಅವರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿಗೊಳಿಸಿ, ಗ್ರಾಮದ ಸ್ವಚ್ಛತೆಯಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ.ಇದರ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸಿ ಎಂದು ಹೇಳಿದರು.

ಘನತ್ಯಾಜ್ಯ ಸಂಗ್ರಹಿಸುವಾಗ ಸ್ವಚ್ಛತಾ ಸಿಬ್ಬಂದಿಗಳು ತಮ್ಮ ಆರೋಗ್ಯದ ಸುರಕ್ಷಯತೆಗೂ ಕಡೆಗೂ ನಿಗಾವಹಿಸಿ, ಮುಖಗವಸು, ಹ್ಯಾಂಡ್‌ ಗ್ಲೌಸ್‌, ಬೂಟ್‌ ಸೇರಿದಮತೆ ಇತರೆ ಆರೋಗ್ಯ ಸುರಕ್ಷತಾ ಪರಿಕರಗಳನ್ನು ಬಳಕೆ ಮಾಡಿ, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಸ್ವಚ್ಛವಾಹಿನಿ ಕಾರ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾಮನಟಿಗಿ ಮತ್ತು ಕೊಡೇಕಲ್ ಗ್ರಾಮ ಪಂಚಾಯತಿಯ ಸ್ವಚ್ಛವಾಹಿನಿಯ ಚಾಲಕರಾದ ಜಗದೇವಿ ಹಾಗೂ ಭೀಮಬಾಯಿ ಅವರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಣೆ ನೀಡಲಾಯಿತು.

ಸ್ವಚ್ಛ ಭಾರತ ಮಿಷನ್ ನ ವೆಂಕಟೇಶ್ ಪವಾರ್,ಹಾಗೂ ಸಾಹಸ್ ಸಂಸ್ಥೆಯ ಜಿಲ್ಲಾ ಸoಯೋಜಕರಾದ ರವಿಚಂದ್ರ ಚಟ್ನಳ್ಳಿ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿಯ ಯೋಜನೆಯ ಸಹಾಯಕ ನಿರ್ದೇಶಕ ಶ್ರೀ ಶೈಲ್ ಹಳ್ಳಿ ಎನ್ ಆರ್ ಎಲ್ ಎಂ, ನಾಗವೇಣಿ, ಬಸವರಾಜು ಹಾಗೂ ಸ್ವಚ್ಛವಾಹಿನಿ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!