ಪೇಠ ಅಮ್ಮಾಪುರದ ಅಮ್ಮ ಶ್ರೇಯಸ್ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ಸಂಭ್ರಮ – ಮಕ್ಕಳಲ್ಲಿ ದೇಶಭಕ್ತಿಯ ಹಬ್ಬ

ಸುರಪುರ ಟೈಮ್ಸ್ ವಾರ್ತೆ
ಸುರಪುರ;ಪೇಠ ಅಮ್ಮಾಪುರದ ಅಮ್ಮ ಶ್ರೇಯಸ್ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೇಶದ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಭಕ್ತಿಭಾವ, ಗೌರವ ಮತ್ತು ಸಂಭ್ರಮದ ವಾತಾವರಣದಲ್ಲಿ ಆಚರಿಸಲಾಯಿತು. ಶಾಲಾ ಆವರಣದಲ್ಲಿ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಯಿತು. ನಂತರ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳು, ಭಾಷಣಗಳು, ನಾಟಕ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಿದ್ದು, ಸಭಿಕರ ಮನಸೂರೆಗೊಂಡವು. ಮಕ್ಕಳ ಕಾರ್ಯಕ್ರಮಗಳು ದೇಶಪ್ರೇಮ, ಶಿಸ್ತು, ಏಕತೆ ಮತ್ತು ಸಂವಿಧಾನದ ಮೌಲ್ಯಗಳನ್ನು ಸಾರುವಂತಿದ್ದವು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಕುಂಬಾರ ಮಾತನಾಡಿ, ಭಾರತದ ಸಂವಿಧಾನದ ಮಹತ್ವ, ಗಣರಾಜ್ಯೋತ್ಸವದ ಹಿನ್ನೆಲೆ ಹಾಗೂ ನಾಗರಿಕರ ಕರ್ತವ್ಯಗಳ ಕುರಿತು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರ ತ್ಯಾಗವನ್ನು ಸ್ಮರಿಸಿ, ಮುಂದಿನ ತಲೆಮಾರಿಗೆ ದೇಶದ ಹೊಣೆಗಾರಿಕೆ ಅರಿವು ಮೂಡಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮುಷ್ತಾಫ ಮೆಕ್ಕಾ,
ಮುಖ್ಯ ಅತಿಥಿಗಳಾಗಿ ಡಾ.ರಶೀದ್ ಪಟೇಲ್ , ಜಬ್ಬರ ಸಾಬ್,ವಾಸುದೇವ್ ಗಂಗೆ ನಿವೃತ್ತ ಉಪ ಪ್ರಾಂಶುಪಾಲರು, ಮೌನೇಶ್ ಪಾಟೀಲ್, ಶ್ರೀ ಸಾಹೇಬ ರಡ್ಡಿ ಇಟಗಿ ಅನುದಾನಿತ ಶಾಲಾ ಕಾಲೇಜುಗಳ ಬೋಧಕ ಬೋಧಕೇತರ ನೌಕರರ ಸಂಘಟನೆಗಳ ಒಕ್ಕೂಟ ಜಿಲ್ಲಾಧ್ಯಕ್ಷ ಶ್ರೀ ಶ್ರೀಕಾಂತ , ಮಹೇಶ ಹೊಸಮನಿ, ನಿಂಗಪ್ಪ ದೈ.ಶಿ. ಬಾಲಪ್ಪ ಪೂಜಾರಿ ಕ್ರೀಡೆಗಳಲ್ಲಿ ವಿಜೇತರಾದಂತಹ ಮಕ್ಕಳಿಗೆ ಪಾರಿತೋಷಕವನ್ನು ವಿತರಿಸಲಾಯಿತು.ಕು.ಶರಣಮ್ಮಅವರು ಕಾರ್ಯಕ್ರಮವನ್ನು ನಿರೂಪಿಸಿದರೆ, ಶ್ರೀಮತಿ ಅನಿತಾ ರವರು ಅತಿಥಿಗಳನ್ನು ಸ್ವಾಗತಿಸಿದರು, ಕು.ಭಾಗ್ಯ ವಂದಿಸಿದರು ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!