ನರಸಿಂಗಪೇಟ: ಸ್ಮಶಾನ ಸೌಲಭ್ಯಕ್ಕೆ ಆಗ್ರಹ

ಸುರಪುರ ಟೈಮ್ಸ್ ವಾರ್ತೆ
ಸುರಪುರ: ನಗರಸಭೆ ವ್ಯಾಪ್ತಿಯ ನರಸಿಂಗಪೇಟ ಗ್ರಾಮದಲ್ಲಿ (ವಾರ್ಡ ಸಂಖ್ಯೆ-1)ಸ್ಮಶಾನ ಭೂಮಿ ಇಲ್ಲದೇ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ರುದ್ರಭೂಮಿ ಮಂಜೂರಾತಿಗೆ ಸಾರ್ವಜನಿಕರು ಜಿಲ್ಲಾಧಿಕಾರಿ ಡಾ.ಸುಶೀಲಾರವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. ಸಾರ್ವಜನಿಕರಿಗೆ ಮೂಲ ಸೌಲಭ್ಯಗಳಲ್ಲಿ ರುದ್ರಭೂಮಿ ಕೂಡಾ ತುಂಬಾ ಅಗತ್ಯ. ರುದ್ರಭೂಮಿ ಇಲ್ಲದೇ ವಾರ್ಡಿನ ಜನರು ಶವ ಸಂಸ್ಕಾರಕ್ಕೆ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ರುದ್ರಭೂಮಿಯನ್ನು ಒದಗಿಸಲು ಸೂಕ್ತ ನಿರ್ದೇಶನ ತಾಲೂಕು ದಂಡಾಧಿಕಾರಿಗಳಿಗೆ ನೀಡಬೇಕೆಂದು ಮನವಿ ಮಾಡಿದರು.ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಮಲ್ಲಿಕಾರ್ಜುನ, ಪ್ರಶಾಂತ ಇತರರಿದ್ದರು.