ಆರೋಗ್ಯವೇ ಶ್ರೇಷ್ಠ ಸಂಪತ್ತು ;ಡಾ.ವಂದನಾ ಗಾಳಿ ಅಭಿಮತ
ಸುರಪುರ ಟೈಮ್ಸ್ ವಾರ್ತೆ
ಸುರಪುರ;ಆರೋಗ್ಯ ಸರಿಯಾಗಿದ್ದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು. ಆರೋಗ್ಯ ಇದ್ದರೆ ಜೀವನ ಸುಂದರ ಎಂದು ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ವಂದನಾ ಗಾಳಿ ಹೇಳಿದರು.
ಇಲ್ಲಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ಯಾದಗಿರಿ ಮತ್ತು ರಂಗಂಪೇಟೆ-ತಿಮ್ಮಾಪುರದ ಸರಕಾರಿ ಯುನಾನಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 9ನೇ ರಾಷ್ಟ್ರೀಯ ಯುನಾನಿ ದಿನಾಚರಣೆ ಮತ್ತು ಆರೋಗ್ಯ ತಪಾಸಣೆ ಉಚಿತ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜೀವನದಲ್ಲಿ ಎಲ್ಲ ಸಿರಿ ಸಂಪತ್ತಿಗಿಂತ ಮಿಗಿಲಾದ ಸಂಪತ್ತಾದ ಆರೋಗ್ಯದ ಕಡೆ ಪ್ರತಿಯೊಬ್ಬರು ಗಮನ ಹರಿಸಬೇಕು. ದೇಹದಲ್ಲಿ ಎಲ್ಲ ಅಂಗಗಳನ್ನು ಸರಿಯಾಗಿಟ್ಟುಕೊಳ್ಳುವ ಮೂಲಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಶ್ರೀಕಾಂತ ಜಿಕೆ ಮಾತನಾಡಿ, ಮನುಷ್ಯನಿಗೆ ಆರೋಗ್ಯವೇ ಭಾಗ್ಯ. ಆರೋಗ್ಯ ಇದ್ದರೆ ಎಲ್ಲವೂ ಇದ್ದಂತೆ. ಜನರಲ್ಲಿ ಸಾಮಾನ್ಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು, ಆರೋಗ್ಯ ಒದಗಿಸುವುದು ಮತ್ತು ಮೂಲಭೂತ ನೈರ್ಮಲ್ಯದ ಬಗ್ಗೆ ಅವರಿಗೆ ಸಲಹೆ ಆರೋಗ್ಯ ಶಿಬಿರ ನಡೆಸುವ ಸಾರ್ವಜನಿಕರು ಶಿಬಿರದ ಪ್ರಯೋಜನ.ಸೇವೆಗಳನ್ನು ವಿದ್ಯಾರ್ಥಿಗಳು ಸಹ ಆರೋಗ್ಯದ ಕಡೆಗೆ ಹೆಚ್ಚು ತಪಾಸಣೆ ಮಾಡಿ ಔಷಧಗಳನ್ನು ವಿತರಿಸಲಾಯಿತು. ಆರೋಗ್ಯ ಮತ್ತು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರು, ಯುನಾನಿ ಆಸ್ಪತ್ರೆಯ ನೀಡುವುದು ಡಾ.ರಾಜೇಶ್ವರಿ ಗೋನಾಳಮಠ, ಡಾ.ಶಫೀಕ್ ಅಹ್ಮದ್, ಕೃಷ್ಣ, ರಾಜು, ನಿಂಗಪ್ಪ, ಭೀಮಾರೆಡ್ಡಿ, ಪ್ರಶಾಂತ, ನಿಂಗಮ್ಮ, ಉದ್ದೇಶವಾಗಿರುತ್ತದೆ. ಡಾ.ಇಮಾಮುದ್ದೀನ್ ಮುಲ್ಲಾ, ರವಿ ವೇದಿಕೆಯಲ್ಲಿದ್ದರು. ಮಂಜುಳಾ, ಉಪನ್ಯಾಸಕ ರಾಮನಗೌಡ ನಿರೂಪಿಸಿದರು. ಪಡೆಯಬೇಕು. ಶಿಬಿರದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಆರೋಗ್ಯ ಬಸವರಾಜ ದೇವಾಪುರ ವಂದಿಸಿದರು.
ಹಕೀಮ್ ಅಜ್ಜಲ್ ಖಾನ್ ಕೊಡುಗೆ ಅಪಾರ
ಯುನಾನಿ ಔಷಧಿಯನ್ನು ಭಾರತದಲ್ಲಿ ಪ್ರೋತ್ಸಾಹಿಸಿದ ಹಕೀಮ್ ಅಜ್ಜಲ್ ಖಾನ್ ಅವರ ಜನ್ಮದಿನವನ್ನು ಪ್ರತಿ ವರ್ಷ ಫೆ.11 ರಂದು ಆಯುಷ್ ಇಲಾಖೆಯಿಂದ ವಿಶ್ವ ಯುನಾನಿ ದಿನಾಚರಣೆ ಆಚರಿಸಲಾಗುತ್ತದೆ. ಯುನಾನಿ ಉಳಿವಿಗೆ ಅವರ ಕೊಡುಗೆ ಅಪಾರವಾಗಿದೆ. ಯುನಾನಿ ಔಷಧ ಪದ್ಧತಿ ಒಂದು ಪುರಾತನ ಪದ್ಧತಿಯಾಗಿದೆ.ಯುನಾನಿ ಪದ್ಧತಿಯ ಔಷಧಿಯು ಸರ್ವೇ ಸಾಮಾನ್ಯ ಔಷಧಿಯಲ್ಲ. ಕಾಯಿಲೆಗಳನ್ನು ಬೇರು ಸಮೇತ ಕಿತ್ತೊಗೆಯುವ ಔಷಧಿಯಾಗಿದೆ. ಯುನಾನಿ ಔಷಧವು ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ರೋಗಗಳನ್ನು ತಡೆಗಟ್ಟಲು ಟ್ಟಲು ಆರೋಗ್ಯಕರ ಆಹಾರ ಪದ್ಧತಿಗೆ ವಿವರವಾದ ಮಾರ್ಗಸೂಚಿಗಳನ್ನು ಒದಗಿಸುತ್ತದೆ ಎಂದು ಡಾ.ವಂದನಾ ಗಾಳಿ ತಿಳಿಸಿದರು


