ರತ್ತಾಳ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಕರವೇ ಮನವಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ಕರವೇ ಸುರಪುರ ತಾಲೂಕ ಘಟಕದ ವತಿಯಿಂದ ಇಂದು ದೇವಿಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರತ್ತಾಳ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ರತ್ತಾಳ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಹಾಗೂ ಮಲಿನ ನೀರು ರಸ್ತೆಗಳ ಮೇಲೆ ಹರಿದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು, ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಭೀತಿ ಎದುರಾಗಿದೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದಾಗಿ ಕರವೇ ಆರೋಪಿಸಿದೆ.
ಈ ಸಂದರ್ಭದಲ್ಲಿ ಕರವೇ ಸುರಪುರ ತಾಲೂಕ ಅಧ್ಯಕ್ಷರಾದ ವೆಂಕಟೇಶ ನಾಯಕ ಭೈರಿಮರಡ್ಡಿ ಮಾತನಾಡಿ, ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಶಾಶ್ವತ ಚರಂಡಿ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು. ಸಮಸ್ಯೆ ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದೆಂದು ಎಚ್ಚರಿಸಿದರು.
ವೇಳೆ ಕರವೇ ತಾಲೂಕ ಅಟೋ ಘಟಕದ ಅಧ್ಯಕ್ಷ ಆನಂದ ಗುಡ್ಡಕಾಯಿ
ರತ್ತಾಳ ಗ್ರಾಮ ಶಾಖೆ ಅಧ್ಯಕ್ಷ ಭಾಗಣ್ಣ ಗುಡ್ಡ್ ಕಾಯಿ , ಮುಖಂಡರಾದ ಶ್ರೀಕಾಂತ ಯಾದಗಿರಕರ್ , ಕೖಷ್ಣ ತಳವಾರ , ಹಣಮಂತ ಗಣಪೂರ , ಯಲ್ಲಪ್ಪ ತೆಲಗಾಣಿ , ಯಲ್ಲಪ್ಪ ಭಂಡಾರಿ , ಬಲಭೀಮ ಬಾದ್ಯಾಪೂರ , ಅಶೋಕ ನಾಯಕ , ಮೌನೇಶ ಬಡಿಗೇರ , ದುರ್ಗಪ್ಪ ಬಿಲ್ಲವ್ , ದೇವಪ್ಪ ಕರಿಕಲ್ , ಮುದುಕಪ್ಪ್ ಗುಡ್ಡಕಾಯಿ , ಲಚಮಣ್ಣ ಗುಡ್ಡಕಾಯಿ , ಭಗವಾನ್ ಗಣಪೂರ ಸಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.






