ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಶಾಖಾ ಮಠ ಕಟ್ಟಡ ನಿರ್ಮಾಣಕ್ಕೆ ಭಾಗವಹಿಸಲು ಮನವಿ

ಸುರಪುರ ಟೈಮ್ಸ್ ವಾರ್ತೆ
ಸುರಪುರ; ಬಂಡೋಳಿ ಗ್ರಾಮದ ಸಮೀಪದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ, ರಾಜನಹಳ್ಳಿ ಶಾಖಾ ಮಠದ ಕಟ್ಟಡ ನಿರ್ಮಾಣಕ್ಕೆ ಮೀಸಲಾಗಿರುವ ಜಮೀನಿನಲ್ಲಿ ಮಠದ ಭವ್ಯ ಕಟ್ಟಡವನ್ನು ಶೀಘ್ರವಾಗಿ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ, ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಸಚಿವರಿಗೆ ಮನವಿ ಸಲ್ಲಿಸಲ್ಲು ದಿನಾಂಕ ೦1.02.2026 ರವಿವಾರರಂದು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಮಹತ್ವದ ಕಾರ್ಯಕ್ರಮದಲ್ಲಿ ನಮ್ಮ ಸಮಾಜದ ಹಿರಿಯ ಮುಖಂಡರು, ಗಣ್ಯರು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಮಾಜದ ಬಹುಕಾಲದ ನ್ಯಾಯಸಮ್ಮತ ಬೇಡಿಕೆಗೆ ಶಕ್ತಿ ತುಂಬುವಂತೆ ಮನವಿ ಮಾಡಲಾಗಿದೆ. ವಾಲ್ಮೀಕಿ ಸಮಾಜದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಕೇಂದ್ರವಾಗಲಿರುವ ಈ ಗುರುಪೀಠದ ಕಟ್ಟಡ ನಿರ್ಮಾಣವು ಅತ್ಯಂತ ಅಗತ್ಯವಾಗಿದ್ದು, ಸರ್ಕಾರದ ಗಮನ ಸೆಳೆಯಲು ಎಲ್ಲರ ಏಕತೆಯ ಭಾಗವಹಿಸುವಿಕೆ ಅನಿವಾರ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಸಭೆಯ ಅಧ್ಯಕ್ಷತೆಯನ್ನು ಭೀಮನಗೌಡ ಲಕ್ಷ್ಮೀ ತಾಲೂಕಾ ವಾಲ್ಮೀಕಿ ನಾಯಕ ಅಧ್ಯಕ್ಷರು ಹಾಗೂ ರಮೇಶ ದೊರೆ, ವೆಂಕಟೇಶ ಬೇಟೆಗಾರ ಸಮಾಜದ ಮುಖಂಡರು ಸುರಪುರ ವಹಿಸಿದ್ದರು. ತಾಲೂಕಾ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಕಾರ್ಯದರ್ಶಿಯಾದ ನಾಗರಾಜ ನಾಯಕ ಪ್ಯಾಪ್ಲಿ ಸಭೆಯಲ್ಲಿ ಉಪಸ್ಥಿತರಾಗಿ ಮಾತನಾಡಿದರು. ಈ ಸಭೆಯಲ್ಲಿ ವಿಜಯಕುಮಾರ ಚಿಟ್ಟಿ, ಅಶೋಕ ಕೌಲಿ ನ್ಯಾಯವಾದಿಗಳು, ವಿನೋದಕುಮಾರ ನ್ಯಾಯವಾದಿಗಳು, ಬಲಭೀಮನಾಯಕ ನ್ಯಾಯವಾದಿಗಳು, ಗೋವಿಂದರಾಜ ಕರಡಕಲ್, ಪರಶುರಾಮ ದೇವಪುರ, ಯಲ್ಲಪ್ಪ ಕಲ್ಲೋಡಿ, ದೇವಿಂದ್ರ ಜಾಲಿಬೆಂಚಿ, ದತ್ತು ನಾಯಕ ಗುತ್ತೆದಾರ, ರಂಗನಾಥ ಲಕ್ಷ್ಮೀಪೂರ, ಮೌನೇಶ ಚಿಕ್ಕನಹಳ್ಳಿ, ದುರ್ಗಪ್ಪ ಡೊಣ್ಣಿಗೇರಿ, ವೆಂಕಟೇಶ ಗುಡ್ಡಕಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ನಮ್ಮ ಕುಲಬಾಂಧವರ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಿ ನಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!