ಗಂಗಾಧರ್ ಹುಲಕಲ್‌ಗೆ ಡೋಹರ ಕಕ್ಕಯ್ಯ ಪ್ರಶಸ್ತಿ

ಸುರಪುರ ಟೈಮ್ಸ್ ವಾರ್ತೆ
ಸುರಪುರ: ಇಲ್ಲಿಯ ನಿವಾಸಿ ಗಂಗಾಧರ್ ಹುಲಕಲ್ ಡೋಹರ ಕಕ್ಕಯ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಫೆ.2 ರಂದು ಬೆಳಗ್ಗೆ 10.30 ಕ್ಕೆ ಪವಾಡ ಶ್ರೀ ಬಸವಣ್ಣ ದೇವರಮಠ ಮತ್ತು ವೀರಶೈವ ಲಿಂಗಾಯತ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಮಡಿವಾಳ ಮಾಚಿದೇವ ಮತ್ತು ಡೋಹರ ಕಕ್ಕಯ್ಯ ಜಯಂತಿ ನಿಮಿತ್ತವಾಗಿ ಹಮ್ಮಿಕೊಂಡಿರುವ ಶರಣ ಸಂಸ್ಕೃತಿ ಅಭಿಯಾನದಲ್ಲಿ ಗಂಗಾಧರ್ ಹುಲಕಲ್‌ಗೆ ಡೋಹರ ಕಕ್ಕಯ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ವೃತ್ತಿ ಸೇವೆ : ಹುಟ್ಟು ಬಡತನದ ಜೀವನ ಅನುಭವಿಸಿದ ಗಂಗಾಧರ್ ಹುಲಕಲ್ ಅವರು ಶರಣ ಸಂಸ್ಕೃತಿ ಪರಂಪರೆ ಮೈಗೂಡಿಸಿಕೊಂಡು ಚರ್ಮಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡು ಜೀವನ ನಡೆಸಿರುತ್ತಾರೆ. ಕಷ್ಟದ ಕಾಲದಲ್ಲಿ ಚರ್ಮಗಾರಿಕೆ ಕಾಯಕವೇ ಇವರಿಗೆ ಜೀವಾಳವಾಗಿತ್ತು. ಮುಂದುವರಿದ ತಂತ್ರಜ್ಞಾನದಿಂದ ಬದಲಾದ ವರ್ತಮಾನಕ್ಕೆ ತಕ್ಕಂತೆಯೇ ಉದ್ಯೋಗ ಮುಂದುವರಿಸಿಕೊಂಡು ಬಂದಿರುತ್ತಾರೆ. ಸುಮಾರು 50ವರ್ಷಗಳಿಂದಲೂ ಚರ್ಮ ಉದ್ಯೋಗದಲ್ಲಿ ನಿಷ್ಟೆ ಕಾಯಕವಿಟ್ಟುಕೊಂಡು ಕುಟುಂಬವನ್ನು ಸಾಕಿ ಸಲುಹಿದ ಕೀರ್ತಿ ಇವರದಾಗಿದೆ.

Leave a Reply

Your email address will not be published. Required fields are marked *

error: Content is protected !!