ಧರ್ಮಸ್ಥಳ ಸಂಸ್ಥೆಯಿಂದ ಕೃಷಿ ತರಬೇತಿ – ಮಹಿಳಾ ರೈತರಿಗೆ ಸ್ವಾವಲಂಬನೆಗೆ ಕರೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ; ತಾಲೂಕಿನ ವಾಗಣ್ಣಗೇರಾ ವಲಯದ ಕುಂಬಾರಪೇಠ ಕಾರ್ಯಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಕೃಷಿ ತರಬೇತಿ ಕಾರ್ಯಕ್ರಮ ಜರುಗಿತು.
ಪ್ರಗತಿಪರ ರೈತ ಮಹಿಳೆ ಹಾಗೂ ಸ್ವಯಂ ಉದ್ಯೋಗಿಗಳಾದ ಶ್ರೀಮತಿ ಸರಸ್ವತಿ ಅವರು ಹೈನುಗಾರಿಕೆ, ಆಡು ಸಾಕಾಣಿಕೆ ಸೇರಿದಂತೆ ವಿವಿಧ ಸ್ವಯಂ ಉದ್ಯೋಗ ಚಟುವಟಿಕೆಗಳ ಮೂಲಕ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ಪಡೆದು ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂದು ಕರೆ ನೀಡಿದರು.
ಕೃಷಿ ಮೇಲ್ವಿಚಾರಕರಾದ ವಿನೋದ್ ಅವರು ಕೃಷಿ ಅನುದಾನ, ದೀರ್ಘಾವಧಿ–ಅಲ್ಪಾವಧಿ ಬೆಳೆಗಳು ಹಾಗೂ ಕೆರೆ ಅಭಿವೃದ್ಧಿ, ಶುದ್ಧಗಂಗಾ ಘಟಕ, ದೇವಸ್ಥಾನ ಜೀರ್ಣೋದ್ಧಾರಕ್ಕೆ ದೊರೆಯುವ ಅನುದಾನಗಳ ಕುರಿತು ಮಾಹಿತಿ ನೀಡಿದರು.
ವಲಯದ ಮೇಲ್ವಿಚಾರಕರಾದ ಶಿವಕಲಾ ಅವರು ಆರೋಗ್ಯ ರಕ್ಷಾ, ಸಂಪೂರ್ಣ ಸುರಕ್ಷಾ ಹಿಡುವಳಿ ಯೋಜನೆ ಹಾಗೂ ಹಣ ಸಂಗ್ರಹಣೆಯ ಮಹತ್ವವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ಶೋಭಾ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.




