ಬಿಸಿಲಲ್ಲಿ ಅನಗತ್ಯ ಓಡಾಟ ಬೇಡ; ಜೀವನ ಕುಮಾರ ಕಟ್ಟಿಮನಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ;ಗಿರಿ ನಾಡಿನಲ್ಲಿ ದಿನಕಳೆದಂತೆ ಬಿಸಿಲಿನ ಬೇಗೆ ಹೆಚ್ಚಾಗ್ತಾ ಇದೆ. ಈ ನಡುವೆ ಹೀಟ್ ವೇವ್ (Heat Wave) ಆತಂಕ ಕೂಡ ಹೆಚ್ಚಾಗಿದ್ದು, ಹವಾಮಾನದ ತಾಪಮಾನದ ಬಗ್ಗೆ ಕಡ್ಡಾಯ ಗಮನ ಹರಿಸಬೇಕು ಕಳೆದ ಎರಡು ದಿನಗಳಿಂದ ಶುಷ್ಕವಾತಾವ-ರಣ, ಬಿಸಿಗಾಳಿ ಹಾಗೂ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ.
ನಗರ ಸೇರಿದಂತೆ ತಾಲ್ಲೂಕಿನ ಜನರು ಹೆಚ್ಚು ಹೊರಗೆ ಓಡಾಡದಂತೆ ಸುರಪುರ ನಗರ ಸಭೆಯ ಪೌರಾಯುಕ್ತ ಜೀವನ ಕುಮಾರ ಕಟ್ಟಿಮನಿ ತಿಳಿಸಿದ್ದಾರೆ.
ಅವರು, ‘ಮಕ್ಕಳು, ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಬೆಳಿಗ್ಗೆ ಹಾಗೂ ಸಂಜೆ ಮಾತ್ರ ನಿತ್ಯದ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು. ಅನಾವಶ್ಯಕವಾಗಿ ಹೊರಗೆ ಓಡಾಡಬಾರದು. ಹೆಚ್ಚು ತಂಪು ಇರುವ ವಾತಾವರಣದಲ್ಲಿಯೇ ರಕ್ಷಣೆ ಪಡೆದುಕೊಳ್ಳಬೇಕು. ಶುದ್ಧ ಕುಡಿಯುವ ನೀರಿನ ಬಳಕೆ ಹೆಚ್ಚಿಸಿಕೊಳ್ಳಬೇಕು. ತೊಂದರೆ ಕಂಡು ಬಂದರೆ ಸಮೀಪದ ಆಸ್ಪತ್ರೆ ಭೇಟಿ ನೀಡಬೇಕು’ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ
