🗞️ ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಭೂಮಿ ಪೂಜೆ, 2.65 ಕೋಟಿ ವೆಚ್ಚದಲ್ಲಿ 12 ಮನೆಗಳ ಕಾಮಗಾರಿ ಆರಂಭ – ಶಾಸಕ ರಾಜಾ ವೇಣುಗೋಪಾಲ ನಾಯಕ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಪೊಲೀಸ್‌ರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ನಗರದ ಜೆಎಂಎಫ್‌ಸಿ ಕೋರ್ಟ್ ರಸ್ತೆಯಲ್ಲಿ 2.65 ಕೋಟಿ ವೆಚ್ಚದಲ್ಲಿ ಪೊಲೀಸ್ ಹೌಸಿಂಗ್ ಕಾರ್ಪರೇಷನ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ 12 ಪೊಲೀಸ್ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನಿರ್ಮಾಣ ಕಾಮಗಾರಿ ಉತ್ತಮವಾಗಿರಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಆಗಾಗ್ಗೆ ಪರಿಶೀಲಿಸಿ ಕಾಮಗಾರಿಯ ಗುಣಮಟ್ಟ ಗಮನಿಸಬೇಕು. ಗೊತ್ತುಪಡಿಸಿದ ಸಮಯದಲ್ಲಿ ಗುತ್ತಿಗೆದಾರರು ಕಾಮಗಾರಿ ಮಾಡಿ ಮುಗಿಸಿ ಪೊಲೀಸ್‌ರಿಗೆ ವಾಸಿಸಲು ಸಹಕಾರ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.ಡಿವೈಎಸ್‌ಪಿ ಜಾವೇದ್ ಇನಾಮದಾರ್, ಪಿಐ ಉಮೇಶ್ ಎಂ.ನಾಯಕ, ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಯಾದವ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ಗ್ಯಾರಂಟಿ ಯೋಜನೆ ತಾಲೂಕು ಘಟಕದ ಅಧ್ಯಕ್ಷ ಬೀರಲಿಂಗ ಬಾದ್ಯಾಪುರ, ಮುಖಂಡರಾದ ರಾಜಾ ವಾಸುದೇವ ನಾಯಕ, ಮಲ್ಲಣ್ಣ ಸಾಹುಕಾರ, ನಿಂಗರಾಜ್ ಬಾಚಿಮಟ್ಟಿ, ಅಬ್ದುಲ್ ಗಫಾರ್, ಸುಗೂರೇಶ ವಾರದ, ದೊಡ್ಡ ದೇಸಾಯಿ, ಶೇಖ್ ಮಹಿಬೂಬ್ ಒಂಟಿ, ನಾಸೀರ್ ಹುಸೇನ್ ಕುಂಡಾಲೆ, ಕಮರುದ್ದೀನ್ ನಾರಾಯಣಪೇಟ್, ಪ್ರಕಾಶ್ ಅಲಬನೂರ್, ಖಾಲೀದ್ ಅಹ್ಮದ್, ರಾಘವೇಂದ್ರ ಕುಲಕರ್ಣಿ, ಧರ್ಮರಾಜ್ ಬಡಿಗೇರ್ ಬಾದ್ಯಾಪುರ ಸೇರಿ ಇಲಾಖೆಯ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!