17ಕ್ಕೆ ಕುಂಬಾರಪೇಟೆ ಖಾನಪ್ಪ ಶರಣರ ಜಾತ್ರಾಮಹೋತ್ಸವ
ಸುರಪುರ ಟೈಮ್ಸ್ ವಾರ್ತೆ
ಸುರಪುರ; ತಾಲೂಕಿನ ಕುಂಬಾರಪೇಟೆ ಗ್ರಾಮದ ಶ್ರೀದೇವಿ, ಈಶ್ವರ ಲಿಂಗ, ಬೇಡರ ಕಣಪ್ಪ ಹಾಗೂ ಖಾನಪ್ಪ ಶರಣರ 16 ನೇ ವರ್ಷದ ಜಾತ್ರಾ ಮಹೋತ್ಸವ ಫೆ.17 ರಿಂದ ಪ್ರಾರಂಭವಾಗಲಿದೆ. ಅಂದು ಬೆಳಗ್ಗೆ 10 ಕ್ಕೆ ನದಿಗೆ ಗಂಗಾ ಸ್ಥಳಕ್ಕೆ ಪ್ರಯಾಣ. ಸಂಜೆ ಶ್ರೀದೇವಿ, ಈಶ್ವರ ಲಿಂಗ ಗದ್ದುಗೆಗೆ ಪೂಜಾ ಕಾರ್ಯಕ್ರಮ. ರಾತ್ರಿ 10 ಕ್ಕೆ ಭಜನಾ ಕಾರ್ಯಕ್ರಮ.ಫೆ.18 ರಂದು ಬೆಳಗ್ಗೆ 10 ಕ್ಕೆ ಕಾರ್ಯಕ್ರಮದ ಉದ್ಘಾಟನೆ ಮತ್ತು ಮಹಾಪ್ರಸಾದ. ದೇವಾಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ, ಲಕ್ಷ್ಮೀಪುರ ಶ್ರೀಗಿರಿ ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ಗೋಲಪಲ್ಲಿ ಶ್ರೀ ವಾಲ್ಮೀಕಿ ಗುರು ಪೀಠದ ವರದಾನೇಶ್ವರ ಸ್ವಾಮೀಜಿ, ಅಗತೀರ್ಥ ಹಾಲಮತ ಗುರುಪೀಠದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ, ಲಕ್ಷ್ಮೀಪುರದ ಮಲ್ಲಯ್ಯ ಮುತ್ಯಾ ದಿವ್ಯ ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ರಾಜುಗೌಡ ಅಧ್ಯಕ್ಷತೆ ವಹಿಸುವರು. ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಉದ್ಘಾಟಿಸುವರು. ದೇವದುರ್ಗ ಶಾಸಕರಾದ ಕರೆಮ್ಮ ನಾಯಕ ಕ್ರೀಡಾ ಕೂಟ ಉದ್ಘಾಟಿಸುವರು. ಜಿಪಂ ಮಾಜಿ ಅಧ್ಯಕ್ಷರಾದ ರಾಜಾ ಹನುಮಪ್ಪ ನಾಯಕ, ಯಲ್ಲಪ್ಪ ಕುರುಕುಂದಿ, ವಿಜಯಪುರ ಜೆಡಿಎಸ್ ಮುಖಂಡರಾದ ಸುನಿತಾ ದೇವಾನಂದ ಚವ್ಹಾಣ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನಾದ ರಾಜ್ಯಾಧ್ಯಕ್ಷ ಶಾಂತಗೌಡ ಮಾಲಿ ಪಾಟೀಲ್ ಚನ್ನಪಟ್ಟಣ.ಮುಖಂಡರಾದ ಸೋಮನಾಥ ಡೊಣ್ಣಿಗೇರಾ, ರಾಮಕೃಷ್ಣ ಕಲಬುರಗಿ, ತಿಮ್ಮಣ್ಣ ತಿಂಥಣಿ, ಸಣ್ಣ ಮರೆಪ್ಪ ಹರಪನಹಳ್ಳಿ ಕುಂಬಾರಪೇಟೆ, ರಾಮು ನಾಯಕ ಅರಳಹಳ್ಳಿ, ಭೀಮನಗೌಡ ಲಕ್ಷ್ಮೀ, ಶರಣು ನಾಯಕ ಭೈರಿಮಡ್ಡಿ, ಸಣ್ಣ ಖಾನಪ್ಪ ಚಿನ್ನಾಕಾಯಿ ಡೊಣ್ಣೀಗೇರಾ, ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪುರ, ಯಲ್ಲಪ್ಪ ಮಲ್ಲಿಭಾವಿ, ಶರಣು ಕ್ಯಾದಿಗುಂಡ, ನಾಗರಾಜ ಚಿನ್ನಾಕಾಯಿ ಡೊಣ್ಣಿಗೇರಾ, ಸಿದ್ದು ಗುಡ್ಡಕಾಯಿ ಕುಂಬಾರಪೇಟೆ, ಮಹೇಶ ಪಾಟೀಲ್, ಆರ್.ಎಂ.ನಾಯಕ ಮುಖ್ಯ ಅತಿಥಿಗಳಾಗಿರುತ್ತಾರೆ. ಕಬಡ್ಡಿ ಪಂದ್ಯಾವಳಿಯಲ್ಲಿ ನಗದು ಬಹುಮಾನಗಳು, ಉಸುಕಿನ ಚೀಲ ಎತ್ತುವ ಸ್ಪರ್ಧೆಯಲ್ಲಿ 5 ತೊಲಿ ಬೆಳ್ಳಿ ಕಡಗ ಇರುತ್ತದೆ ಎಂದು ಆಯೋಜಕರು ತಿಳಿಸಿದ್ದಾರ

