ನಾಳೆ ಶ್ರೀ ಜಗದ್ಗುರು ಪಂಚಾಚಾರ್ಯ ಹಿರಿಯ ಪ್ರಾಥಮಿಕ ಶಾಲೆ, ತಿಮ್ಮಾಪೂರ ಶಾಲೆಯಲ್ಲಿ 33ನೇ ವಾರ್ಷಿಕೋತ್ಸವ ಸಂಭ್ರಮ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಶ್ರೀ ಜಗದಾದಿ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಟ್ರಸ್ಟ್ (ರಿ.) ಸಂಚಾಲಿತ ಶ್ರೀ ಜಗದ್ಗುರು ಪಂಚಾಚಾರ್ಯ ಹಿರಿಯ ಪ್ರಾಥಮಿಕ ಶಾಲೆ, ತಿಮ್ಮಾಪೂರ ವತಿಯಿಂದ ಶಾಲೆಯ 35ನೇ ವಾರ್ಷಿಕೋತ್ಸವ ಸಂಭ್ರಮವನ್ನು ದಿನಾಂಕ 18-02-2026 ಬುಧವಾರ ಶಾಲಾ ಆವರಣದಲ್ಲಿ, ಸರಕಾರಿ ಆಸ್ಪತ್ರೆ ಹತ್ತಿರ ತಿಮ್ಮಾಪೂರದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10.00 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ವಿದ್ಯಾಪ್ರದಾಯಿನಿ ಶ್ರೀ ಸರಸ್ವತೀ ಪೂಜೆ, ಧ್ವಜಾರೋಹಣ ಹಾಗೂ ಮಕ್ಕಳಿಂದ ಶಾರೀರಿಕ ಪ್ರದರ್ಶನಗಳು ನಡೆಯಲಿವೆ. ಈ ಸಂದರ್ಭ ಶ್ರೀ ರಾಮಕೃಷ್ಣ ಪರಮಹಂಸರು ಜಯಂತ್ಯೋತ್ಸವವನ್ನು ಸಹ ಆಚರಿಸಲಾಗುತ್ತದೆ. ಸಂಜೆ 6.00 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಮಾನ್ಯ ರಾಜಾ ವೇಣುಗೋಪಾಲ ನಾಯಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿವಿಧ ಶಿಕ್ಷಣ ತಜ್ಞರು, ಗಣ್ಯರು ಹಾಗೂ ಸಮಾಜ ಸೇವಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಕ್ಕಳಿಂದ ವಿಶೇಷ ಸಾಂಸ್ಕೃತಿಕ ಸಿಂಚನ ನಡೆಯಲಿದ್ದು, ಪೋಷಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶಾಲೆಯ ಆಡಳಿತ ಮಂಡಳಿ, ಪ್ರಧಾನ ಗುರುಗಳು ಹಾಗೂ ಶಿಕ್ಷಕ ವೃಂದ ಮನವಿ ಮಾಡಿಕೊಂಡಿದ್ದಾರೆ.


