ಸಾರ್ವಜನಿಕ ಬಹಿರಂಗ ಹರಾಜು ಏಪ್ರಿಲ್ 7 ಕ್ಕೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ; ಇಲ್ಲಿಯ ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತು ಜೆ.ಎಂ. ಎಫ್.ಸಿ ನ್ಯಾಯಾಲಯದ ಆವರಣದಲ್ಲಿ ವಾಹನನಗಳು ಮೊಬೈಲ್ ಗಳು ಹಾಗೂ ಇತರೆ ವಸ್ತುಗಳನ್ನು ಏಪ್ರಿಲ್ 7ರ ಸೋಮವಾರ ರಂದು ಬೆಳಿಗ್ಗೆ 10.30 ಗಂಟೆಗೆ ಬಹಿರಂಗ ಹರಾಜು ಆಯೋಜಿಸಲಾಗಿದೆ ಎಂದು ಪ್ರಧಾನ ಸಿವಿಲ್ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ ರವರು ತಿಳಿಸಿದ್ದಾರೆ. ತೋರಿಸಿದ ವಾಹನಗಳು,ಮೊಬೈಲ್‌ಗಳು ಹಾಗೂ ಇತರೆ ವಸ್ತುಗಳ ಬಹಿರಂಗ ಹರಾಜಿಗಾಗಿ ಯಾವ ಸ್ಥಿತಿಯಲ್ಲಿರುತ್ತವೆಯೋ ಹಾಗೆಯೇ ಹರಾಜು ಮಾಡಲಾಗುತ್ತದೆ.ಹಾಗೂ ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಈ ನ್ಯಾಯಾಲಯದಿಂದ ಆದೇಶವಿರುವ ವಿವಿಧ ವಾಹನಗಳು, ವಿವಿಧ ಮೊಬೈಲ್ ಹರಾಜು ಮಾಡಲಾಗುತ್ತದೆ. ಹರಾಜಿನಲ್ಲಿ ಪಡೆದ ವಾಹನಗಳು, ಮೊಬೈಲ್‌ಗಳು ಹಾಗೂ ಇತರೇ ವಸ್ತುಗಳನ್ನು ಮರಳಿ ಪಡೆಯುವುದಿಲ್ಲ . ಸಾರ್ವಜನಿಕರು ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
