ಪ್ಲಾಸ್ಟಿಕ್‌ ಮುಕ್ತ ನಗರಕ್ಕೆ ಎಲ್ಲರೂ ಸಾಥ್‌ ನೀಡಿ; ಜೀವನ ಕುಮಾರ

ಸುರಪುರ ಟೈಮ್ಸ್ ವಾರ್ತೆ

ಸುರಪುರ: ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ ಪ್ಲಾಸ್ಟಿಕ್‌ ಮುಕ್ತ ನಗರಕ್ಕೆ ಪ್ರತಿಯೊಬ್ಬರೂ ಸಾಥ್ ನೀಡಬೇಕೆಂದು ಎಂದು ಪೌರಾಯುಕ್ತ ಜೀವನ ಕುಮಾರ ಕಟ್ಟಿಮನಿ ಹೇಳಿದರು.
ನಗರದ ಸರ್ದಾರ ವಲ್ಲಭಾಯಿ ಪಟೇಲ್ ವೃತ್ತದಲ್ಲಿ ಬುಧವಾರ ನಗರಸಭೆ ಆಶ್ರಯದಲ್ಲಿ ಪ್ಲಾಸ್ಟಿಕ್ ಮುಕ್ತ ನಗರ ಕಾರ್ಯಕ್ರಮವು ಉದ್ಘಾಟಿಸಿ ಮಾತನಾಡಿದವರು ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದೆ. ಪ್ಲಾಸ್ಟಿಕ್‌ನಲ್ಲಿಬಿಸಿ ಪದಾರ್ಥ ಹಾಕಿ ಬಳಸುವುದರಿಂದ ಅದರಲ್ಲಿನ ವಿಷಕಾರಿ ಅಂಶಗಳು ದೇಹ ಸೇರುವ ಮೂಲಕ ನಾನಾ ಕಾಯಿಲೆಗಳಿಗೆ ಕಾರಣವಾದರೆ, ಭೂಮಿಯಲ್ಲಿಕರಗದೆ ಇರುವಂತಹ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಜಲಮೂಲಗಳು ಮಲೀನವಾಗುತ್ತಿವೆ. ಮಾರುಕಟ್ಟೆಯಲ್ಲಿನ ಎಲ್ಲಾ ಅಂಗಡಿಗಳಲ್ಲಿ  ಹಾಗೂ ಇತರ ಪ್ಲಾಸ್ಟಿಕ್‌ ಬಳಸುವುದನ್ನು ನಿಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ  ಕಾಂಗ್ರೆಸ್ ಮುಖಂಡ ಶಕೀಲ್ ಅಹ್ಮದ್ ಖುರೇಷಿ ,ನಗರಸಭೆ ಸದಸ್ಯರಾದ ನಾಶಿರ ಕುಂಡಾಲೆ ಮಾನಪ್ಪ ಚಳಿಗಿಡ ಎಡಬ್ಲ್ಯೂ ಶಾಂತಪ್ಪ, ಹರೀಶ ಸಜ್ಜನ ,ಗುರುಸ್ವಾಮಿ, ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!