ಮುಷ್ಟೂರು ಗ್ರಾಮದಲ್ಲಿ ಸಂಭ್ರಮದ ಹೋಳಿ ಹಬ್ಬ ಆಚರಣೆ
ಸುರಪುರ ಟೈಮ್ಸ್ ವಾರ್ತೆ
ಯಾದಗಿರಿ: ತಾಲೂಕಿನ ಮುಷ್ಟೂರು ಗ್ರಾಮ ಸೇರಿದಂತೆ ಯಾದಗಿರಿ ತಾಲೂಕಿನಾದ್ಯಂತ ಹೋಳಿ ಹಬ್ಬದ ಪ್ರಯುಕ್ತ ಯುವಕರು ಪರಸ್ಪರ ಬಣ್ಣವನ್ನು ಹಚ್ಚುವುದರ ಮೂಲಕ ಅತ್ಯಂತ ಸಡಗರ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು. ತಾಲೂಕಿನ ವಿವಿಧ ಗ್ರಾಮಗಳ ಮಹಿಳೆಯರು ಮಕ್ಕಳು ಯುವಕರು ಸ್ನೇಹಿತರಿಗೆ ಪರಸ್ಪರ ಬಣ್ಣ ಎರಚುವ ಮೂಲಕ ಕುಣಿದು ಕುಪ್ಪಳಿಸಿದರು.ಗ್ರಾಮೀಣ ಭಾಗದಲ್ಲಿ ಮಂಗಳವಾರ ರಾತ್ರಿ ಕಾಮದಹನ ಮಾಡುವ ಮೂಲಕ ಬುಧವಾರ ಬೆಳಿಗ್ಗೆಯಿಂದಲೇ ಯುವಕರು ಹಲಿಗೆ ತಮಟೆ ಬಾರಿಸುತ್ತಾ ಮಧ್ಯಾಹ್ನದವರೆಗೆ ಸ್ನೇಹಿತರೊಂದಿಗೆ ಸೇರಿ ಬಣ್ಣದಾಟವಾಡಿ ಸಂಭ್ರಮಿಸಿದರು.

ಹೋಳಿ ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು ಹೋಳಿ ಹಬ್ಬದ ನಿಮಿತ್ಯ ಈ ಹಬ್ಬದಲ್ಲಿ ಗ್ರಾಮದ ಮುಖಂಡರಾದ ಶಿವರಾಯ ದೊಡ್ಡಮನಿ ದೇವು ಲಿಂಗೇರಿ ಹಳ್ಳೆಪ್ಪ ಗುಂಜನೂರ ಮಲ್ಲಪ್ಪ ದೊಡ್ಡಮನಿ ಸಾಬರೆಡ್ಡಿ ದೊಡ್ಡಮನಿ ಲಕ್ಷ್ಮೀಕಾಂತ ಲಿಂಗೇರಿ ದೇವು ದೊಡ್ಡಮನಿ ಮೌನೇಶ ದೊಡ್ಡಮನಿ ಶಿವು ದೊಡ್ಡಮನಿ ಮಲ್ಲು ದೊಡ್ಡಮನಿ ಮಹಾಂತೇಶ ದೊಡ್ಡಮನಿ ಮಲ್ಲು ಎಸ್ ದೊಡ್ಡಮನಿ ಉಪಸ್ಥಿತರಿದ್ದರು


