ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಬುದ್ಧ ಮೂರ್ತಿ ಅನಾವರಣಕ್ಕೆ ಸಜ್ಜು,ಬೌದ್ಧ ಅನುಯಾಯಿಗಳ ಪೂರ್ವಭಾವಿ ಸಭೆ | ಕಾರ್ಯಕ್ರಮ ಯಶಸ್ಸಿಗೆ ಸಹಕಾರ ಕೋರಿಕೆ.

ಸುರಪುರ ಟೈಮ್ಸ್ ವಾರ್ತೆ
ಸುರಪುರ: ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಸ್ಥಾಪಿಸಲು ಶ್ರೀಲಂಕಾದ ಶಿಲ್ಪಿಯಿಂದ ನಿರ್ಮಿಸಲಾದ ಭಗವಾನ್ ಬುದ್ಧರ ಭವ್ಯ ಮೂರ್ತಿಯನ್ನು ಶೀಘ್ರವೇ ಲೋಕಾರ್ಪಣೆಗೊಳಿಸಲಾಗುವುದು ಎಂದು ಜಿಬಿಟಿ ಟ್ರಸ್ಟ್ ಅಧ್ಯಕ್ಷ ವೆಂಕಟೇಶ್ ಹೊಸಮನಿ ತಿಳಿಸಿದರು.
ಬುದ್ಧ ಮೂರ್ತಿ ಲೋಕಾರ್ಪಣೆ ಹಾಗೂ ಬೌದ್ಧ ಸಂಪ್ರದಾಯದಂತೆ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ ಕುರಿತು ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಬೌದ್ಧ ಅನುಯಾಯಿಗಳು ತಮ್ಮ ಸಲಹೆ–ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು ಎಂದು ಹೇಳಿದರು.


ಕೆಲವು ಕಾರಣಗಳಿಂದ ಹಲವರು ಸಭೆಗೆ ಆಗಮಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಮುಂದಿನ ಸಭೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಧಮ್ಮ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀನಿವಾಸ ನಾಯಕ ಬೊಮ್ಮನಹಳ್ಳಿ, ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಗಳು ಬುದ್ಧ ವಿಹಾರದ ಮಹತ್ವವನ್ನು ಅರಿತುಕೊಳ್ಳಬೇಕು. ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ರಾಹುಲ್ ಹುಲಿಮನಿ ತಿಸರಣ ಪಂಚಶೀಲ ಪಠಿಸಿ ಬೌದ್ಧ ಅನುಯಾಯಿಗಳ ಕರ್ತವ್ಯ ಹಾಗೂ ಹಕ್ಕುಗಳ ಕುರಿತು ವಿವರಿಸಿದರು. ರಾಜ್ಯದಲ್ಲಿ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿರುವ ಮುಖ್ಯಮಂತ್ರಿ ಅವರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಗರದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಸಭೆಯಲ್ಲಿ ಚಂದ್ರಶೇಖರ ಕಟ್ಟಿಮನಿ, ವೆಂಕಟೇಶ್ವರ ಸುರಪುರ, ಭೀಮರಾಯ ಸಿಂದಗೇರಿ, ಮಾಳಪ್ಪ ಕಿರದಳ್ಳಿ, ರಾಜು ದೊಡ್ಡಮನಿ, ಸಿದ್ದಪ್ಪ ಸುರಪುರಕರ್, ಶಿವಶರಣ ಯಾಳಗಿ, ತಿಪ್ಪಣ್ಣ ಶೆಳ್ಳಗಿ, ಮಹಾದೇವ ದೇವಾಪುರ, ಮಾನಪ್ಪ ಬಳಬಟ್ಟಿ, ಹಣಮಂತ ತೇಲ್ಕರ್, ಶೇಖರ ಮಂಗಳೂರು, ಶರಣು ತಳವಾರಗೇರ, ಮಲ್ಲು ಮುಷ್ಟಳ್ಳಿ, ಬಸವರಾಜ ಬೊಮ್ಮನಹಳ್ಳಿ, ಮರೆಪ್ಪ ಮಲ್ಲಾ, ಮಲ್ಲಿಕಾರ್ಜುನ್ ವಾಗಿಣಗೇರ, ವೈಜನಾಥ ಹೊಸಮನಿ, ಶರಣು ಹಸನಾಪುರ, ಶ್ರೀರಾಮ ದೇವರಗೋನಾಲ, ಗೋಪಾಲ್ ಕುಂಬಾರಪೇಟೆ, ವಿಕ್ರಮ್ ಕರಡಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!