ಪೇಠ ಅಮ್ಮಾಪುರದಲ್ಲಿ ಹೊನಲು ಬೆಳಕಿನ ಕಬಡ್ಡಿ ಸಂಭ್ರಮ,|25ನೇ ಜಾತ್ರಾ ಮಹೋತ್ಸವದ ಅಂಗವಾಗಿ ಕ್ರೀಡಾ ಕೂಟ • 15 ತಂಡಗಳ ಭಾಗವಹಿಕೆ • ಪವರ್ ಆಫ್ ಯೂತ್ ತಂಡಕ್ಕೆ ಪ್ರಥಮ ಬಹುಮಾನ


ಸುರಪುರ ಟೈಮ್ಸ್ ವಾರ್ತೆ

ಸುರಪುರ:ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ಮಂಟೂರ ಶಾಖಾ ಮಠದ ವತಿಯಿಂದ ನಡೆಯುತ್ತಿರುವ 25ನೇ ಜಾತ್ರಾ ಮಹೋತ್ಸವದ ಅಂಗವಾಗಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉತ್ಸಾಹಭರಿತವಾಗಿ ನಡೆಯಿತು.
ಪಂದ್ಯಾವಳಿಯನ್ನು ಪ್ರಥಮ ದರ್ಜೆ ಗುತ್ತೇದಾರ ಮಹೇಶ್ ವಿ. ಯಾದವ್ ಅವರು ಕಬಡ್ಡಿ ಆಟಕ್ಕೆ ಚಾಲನೆ ನೀಡಿ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ  ಅಮರಯ್ಯ ಸ್ವಾಮಿ (ಜಾಲಿಬೆಂಚಿ) ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಶ್ರೀ ರಾಮಲಿಂಗೇಶ್ವರ ಮಠದ ರಾಮ ಶರಣರು ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅತಿಥಿಗಳು, ಕಬಡ್ಡಿ ಗ್ರಾಮೀಣ ಭಾರತದ ಪರಂಪರೆಯ ಕ್ರೀಡೆಯಾಗಿದ್ದು ಯುವಕರಲ್ಲಿ ಧೈರ್ಯ, ಶಕ್ತಿ ಹಾಗೂ ತಂಡದ ಮನೋಭಾವವನ್ನು ಬೆಳೆಸುವ ಪ್ರಮುಖ ಕ್ರೀಡೆಯಾಗಿದೆ ಎಂದು ಹೇಳಿದರು. ಗ್ರಾಮೀಣ ಮಟ್ಟದಲ್ಲಿ ಇಂತಹ ಕ್ರೀಡಾ ಸ್ಪರ್ಧೆಗಳು ನಡೆಯುವುದರಿಂದ ಯುವ ಪ್ರತಿಭೆಗಳು ಹೊರಹೊಮ್ಮುವುದರ ಜೊತೆಗೆ ಕ್ರೀಡಾ ಮನೋಭಾವ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಶಿವಮಾನಯ್ಯ ಎಲ್.ಡಿ. ನಾಯಕ ದೇವರ್ ಗೋನಾಲ್ ಶ್ರವಣಕುಮಾರ ದೊಣ್ಣೆಗೆರೆ, ಶರಣು ನಾಯಕ್, ಸಿದ್ದು ಸಾಹುಕಾರ ಕಂಗಳ, ನಿಂಗಣ್ಣ ಕುಳಗೇರಿ ವಾಗಣಿಗೇರಿ ಮಲ್ಲಣ್ಣ ಸಾವಕಾರ ಜಾಲಿಬೆಂಚಿ, ಹನುಮಂತರಾಯ ತನೆಕೆದಾರ್, ವೆಂಕಟೇಶ್ ಕಲಾಲ್, ತಿರುಪತಿ ಯಂಕಗೋಳ್, ಮಹೇಶ್ ಸರ್ವಿ, ಹನುಮೇಶ್ ಯಾದವ್, ವೆಂಕಟೇಶ್ ಜಾಲಹಳ್ಳಿ, ಸನ್ನಿ ಯಾದವ್, ನಾಗಪ್ಪ ಹಡಪದ್, ಪ್ರಮೋದ ರೆಡ್ಡಿ, ಪ್ರಕಾಶ್ ಸಮೇದ, ವೆಂಕಟೇಶ್ ರಾವೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ಕಾರ್ಯಕ್ರಮದ ನಿರೂಪಣೆಯನ್ನು ವೆಂಕಣ್ಣ ಯಾದವ್ ಮಾಡಿದರು. ಪ್ರಾಸ್ತಾವಿಕವಾಗಿ ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ ಮಾತನಾಡಿದರು.
ಪಂದ್ಯಾವಳಿಯಲ್ಲಿ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಂದ ಒಟ್ಟು 15 ತಂಡಗಳು ಭಾಗವಹಿಸಿದ್ದವು. ಶಾಲೆಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ಭಾಗವಹಿಸಿ ಕ್ರೀಡಾಪಟುಗಳಿಗೆ ಹುರಿದುಂಬನೆ ನೀಡಿದರು. ಕಾಮೆಂಟ್ರಿ ಮೂಲಕ ಪಂದ್ಯಾವಳಿಯನ್ನು ರಂಜಕಗೊಳಿಸಿದರು.
ಈ ಸಂದರ್ಭದಲ್ಲಿ ಮೌನೇಶ್ ಗುತ್ತೇದಾರ್, ಆಕಾಶ್ ಕಾಗಿ, ಸಿದ್ದಪ್ಪ ಸಾಲಿ, ಟಿ.ಎಚ್. ಪಾಟೀಲ್, ವಾಸುದೇವ ಯಾದವ್, ಗುರು ಸರ್, ಭೀಮರಾಯ ದೇವರಗೋನಾಲ, ದೇವು ಸುರಪುರ, ನಿಂಗಣ್ಣ ಸರ್ ಸೇರಿದಂತೆ ಅನೇಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಪಂದ್ಯಾವಳಿಯನ್ನು ಸ್ವಾಮಿ ವಿವೇಕಾನಂದ ಹಾಗೂ ಪುನೀತ್ ರಾಜ್ ಕುಮಾರ್ ಯುವಶಕ್ತಿ (ಪವರ್ ಆಫ್ ಯೂತ್) ಯುವಕರ ಕಮಿಟಿ ಆಯೋಜಿಸಿತ್ತು.


ಪಂದ್ಯಾವಳಿ ಫಲಿತಾಂಶ
ಪ್ರಥಮ ಬಹುಮಾನ: ಪವರ್ ಆಫ್ ಯೂತ್ – ಪೇಠ ಅಮ್ಮಾಪುರ
ದ್ವಿತೀಯ ಬಹುಮಾನ: ದೋಸ್ತಿ ಬಾಯ್ಸ್ ಟೀಮ್ – ಪೇಠ ಅಮ್ಮಾಪುರ
ತೃತೀಯ ಬಹುಮಾನ: ವಾಗಣಿಗೇರಿ ಬಾಯ್ಸ್ ಟೀಮ್
ಬೆಸ್ಟ್ ರೈಡರ್: ಈಕ್ವಾಲ್ – ದೋಸ್ತಿ ದರ್ಬಾರ್, ಅಮ್ಮಾಪುರ
⭐ ಬೆಸ್ಟ್ ಕ್ಯಾಚರ್: ಯಮನಪ್ಪ ಪ್ಯಾಟಿ – ಪೇಠ ಅಮ್ಮಾಪುರ
⭐ ಬೆಸ್ಟ್ ಆಲ್‌ರೌಂಡರ್: ರಾಜು – ಬೊಮ್ಮನಹಳ್ಳಿ.

Leave a Reply

Your email address will not be published. Required fields are marked *

error: Content is protected !!