ರೋಗಿಗಳಿಗೆ ಉಪಹಾರ ವಿತರಣೆ ಮೂಲಕ ಗುಣರಂಜನಶೆಟ್ಟಿ ಜನ್ಮದಿನ ಆಚರಣೆ|ಜಯ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರಿಂದ ಸೇವಾ ಮನೋಭಾವದ ಕಾರ್ಯಕ್ರಮ.

ಸುರಪುರ ಟೈಮ್ಸ್ ವಾರ್ತೆ
ಸುರಪುರ: ಜಯ ಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕರಾದ ಗುಣರಂಜನಶೆಟ್ಟಿ ಅವರ ಜನ್ಮದಿನವನ್ನು ಶುಕ್ರವಾರ ನಗರದ ವಿವಿಧ ಕಡೆಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾ ಸಮಿತಿ ಅಧ್ಯಕ್ಷ ರವಿಕುಮಾರ ನಾಯಕ ಭೈರಿಮರಡಿ ಅವರ ನೇತೃತ್ವದಲ್ಲಿ ವೇದಿಕೆಯ ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಬೆಳಗಿನ ಉಪಹಾರ ವಿತರಿಸಿದರು. ಈ ಮೂಲಕ ಸಮಾಜ ಸೇವೆಯ ಸಂದೇಶವನ್ನು ಸಾರಿದರು.


ನಂತರ ಗಾಂಧಿ ವೃತ್ತದಲ್ಲಿ ಗುಣರಂಜನಶೆಟ್ಟಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ನೆರವೇರಿಸಿ, ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಜನ್ಮದಿನವನ್ನು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರವಿಕುಮಾರ ನಾಯಕ ಭೈರಿಮರಡಿ, “ಗುಣರಂಜನಶೆಟ್ಟಿ ಅವರು ಶ್ರೇಷ್ಠ ಸಮಾಜ ಸೇವಕರು ಹಾಗೂ ಪರಿಸರವಾದಿಗಳು. ಭಾರತೀಯ ಕುಸ್ತಿ ಫೆಡರೇಶನ್‌ನ ಜಂಟಿ ಕಾರ್ಯದರ್ಶಿಗಳಾಗಿದ್ದು, ಕರ್ನಾಟಕ ಕುಸ್ತಿ ಫೆಡರೇಶನ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಸ್ಥಾಪಿಸಿದ ವೇದಿಕೆಯ ಮೂಲಕ ಜನಪರ ಸೇವೆ ಮುಂದುವರಿಸುತ್ತಿದ್ದಾರೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುರಪುರ ತಾಲ್ಲೂಕು ಅಧ್ಯಕ್ಷ ಗೋಪಾಲ ನಾಯಕ ಸತ್ಯಂಪೇಟೆ, ಜಿಲ್ಲಾ ಕಾರ್ಯದರ್ಶಿ ಹುಲಗಪ್ಪ ಶಖಾಪುರ,  ಶಹಾಪುರ ತಾಲೂಕು ಅಧ್ಯಕ್ಷ ಸೋಪಣ್ಣ ಹಳಿಸಗರ, ಶರಣಪ್ಪ ಗೋನಾಲ, ನಿಂಗಪ್ಪನಾಯಕ ಬಿಜಾಸಪುರ, ಮಲ್ಲನಗೌಡ ದೇವಿಕೇರಾ, ವಾಸುದೇವನಾಯಕ ಭೈರಿಮರಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!