ಮಾ.29ರಂದು ಸುರಪುರ ತಾಲ್ಲೂಕು ಗಮಕ ಕಲಾ ಪರಿಷತ್ ವತಿಯಿಂದ ಯುಗಾದಿ ನವಸಂವತ್ಸರದ ಪ್ರಯುಕ್ತಕವಿಗೋಷ್ಠಿ–ಸನ್ಮಾನ ಸಮಾರಂಭ.

ಸುರಪುರ ಟೈಮ್ಸ್ ವಾರ್ತೆ
ಸುರಪುರ: ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ತಾಲೂಕು ಘಟಕ ಸುರಪುರವತಿಯಿಂದ ಯುಗಾದಿ ನವಸಂವತ್ಸರದ ಪ್ರಯುಕ್ತ ಕವಿಗೋಷ್ಠಿ ಹಾಗೂ ಸನ್ಮಾನ ಸಮಾರಂಭವನ್ನು ದಿನಾಂಕ 29-03-2026 ರವಿವಾರ ಬೆಳಿಗ್ಗೆ 10:00 ಗಂಟೆಗೆ, ನಗರದ ಕನ್ನಡ ಸಾಹಿತ್ಯ ಸಂಘ, ಬಸ್ ನಿಲ್ದಾಣದ ಹತ್ತಿರ, ಸುರಪುರದಲ್ಲಿ ಭವ್ಯವಾಗಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಗಮಕ ಕಲಾ ಪರಿಷತ್ತು ಸುರಪುರದ ಗೌರವ ಅಧ್ಯಕ್ಷರಾದ ಶ್ರೀ ರಾಜಾ ಮುಕುಂದ ನಾಯಕ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಪರಿಷತ್ತಿನ ಅಧ್ಯಕ್ಷರಾದ ಶ್ರೀ ದೊಡ್ಡಮಲ್ಲಿಕಾರ್ಜುನ ಉದ್ದಾರ ವಹಿಸಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಶ್ರೀ ಬಸವರಾಜ ಜಮದ್ರಖಾನಿ, ಗಮಕ ಕಲಾ ಪರಿಷತ್ತು ಯಾದಗಿರಿ ಜಿಲ್ಲಾ ಅಧ್ಯಕ್ಷ ಶ್ರೀ ಶ್ರೀನಿವಾಸ ಜಾಲವಾದಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಯಲ್ಲಪ್ಪ ಕಾಣ್ಣೂರ, ವಿಭಾಗೀಯ ಅಧ್ಯಕ್ಷ ಶ್ರೀ ಲಕ್ಷ್ಮೀಕಾಂತ ಮೊಹರೀರ, ಕಾರ್ಯಾಧ್ಯಕ್ಷ ಶ್ರೀ ಸಿ.ಎನ್. ಭಂಡಾರಿ, ಸಾಹಿತ್ಯ ಸಂಘದ ಅಧ್ಯಕ್ಷ ಶ್ರೀ ಸೂಗೂರೇಶ ವಾರದ, ಮುಖ್ಯೋಪಾಧ್ಯಾಯ ಶ್ರೀ ಶ್ರೀಕಾಂತ ಮಾರ್ಗೇಲ್ ಹಾಗೂ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಪ್ರಕಾಶ ಅಂಗಡಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಗಣ್ಯರಾದ ಶ್ರೀ ದೇವಿಂದ್ರಪ್ಪ ಭೋವಿ, ಶ್ರೀ ಹಳ್ಳೇರಾವ್ ಕುಲಕರ್ಣಿ, ಶ್ರೀ ಭೀಮರಾಯ ಗೋನಾಳ, ಶ್ರೀಮತಿ ವಾಣಿಶ್ರೀ, ಶ್ರೀಮತಿ ಗಾಯತ್ರಿ ಕೊಂಗಿ ಅವರನ್ನು ಸನ್ಮಾನಿಸಲಾಗುತ್ತದೆ.
ಇದೇ ಸಂದರ್ಭದಲ್ಲಿ ನಡೆಯುವ ಕವಿಗೋಷ್ಠಿಗೆ ಶ್ರೀಮತಿ ಪಾರ್ವತಿ ದೇಸಾಯಿ ಅಧ್ಯಕ್ಷತೆ ವಹಿಸಲಿದ್ದು, ಕು. ವಿಶ್ವಪೂರ್ವ ಆಶಯ ಭಾಷಣ ಮಾಡಲಿದ್ದಾರೆ. ವಿವಿಧ ಭಾಗಗಳಿಂದ ಆಗಮಿಸುವ ಅನೇಕ ಕವಿಗಳು ತಮ್ಮ ಕವನ ವಾಚನದ ಮೂಲಕ ಸಾಹಿತ್ಯ ರಸದೌತಣ ನೀಡಲಿದ್ದಾರೆ.
ಯುಗಾದಿ ಹಬ್ಬದ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಹಿರಿಯರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಗಮಕ ಕಲಾ ಪರಿಷತ್ತು ಸುರಪುರ ವತಿಯಿಂದ ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!