ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದಲೆ ಘಟನೆ ಸಾರ್ವಜನಿಕರ ಆರೋಪ;ಬಾಲಕನಿಗೆ ವಿದ್ಯುತ್ ತಗುಲಿ ತೀವ್ರ ಗಾಯ
ಸುರಪುರ ಟೈಮ್ಸ್ ವಾರ್ತೆ
ಹುಣಸಗಿ : ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಶಾಖಾಪುರ ಎಸ್ ಕೆ ಗ್ರಾಮದ ಹೊರವಲಯ ಆಟ ಆಡುವಾಗ ಚೆಂಡು ಮನೆಯ ಮೇಲ್ಛಾವಣಿ ಮೇಲೆ ಬಿದ್ದಿದ್ದು ಅದನ್ನು ತರಲು ಹೋದ ಬಾಲಕನಿಗೆ ವಿದ್ಯುತ್ ತಂತಿ ತಗುಲಿ ತೀವ್ರಸ್ವರೂಪದ ಗಾಯವಾದ ಘಟನೆ ನಡದಿದೆ ಶಾಖಾಪುರ ಗ್ರಾಮದಲ್ಲಿ ನಡೆದಿದೆ.
ಹುಣಸಗಿ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು ಘಟನೆಯಲ್ಲಿ ಕುಮಾರ ಹಣಮಂತ ಕಿರದಳ್ಳಿ ವಯಸ್ಸು ( 12) ವಿದ್ಯುತ್ ತಗುಲಿ ಗಾಯಗೊಂಡ ಬಾಲಕನನ್ನು ಕೂಡಲೇ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆಶಾಖಾಪುರ ಗ್ರಾಮಸ್ಥರು ಹಲವು ಬಾರಿ ವಿದ್ಯುತ್ ಕಂಬಗಳನ್ನ ಹಾಗೂ ಟಿಸಿ ಸ್ಥಳಾಂತರ ಮಾಡಿಕೊಡಿ ಎಂದು ಕೆಇಬಿ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಕೊಂಡು, ಸತ್ಯಾಗ್ರಹ ಕೂಡ ಮಾಡಿದ್ದಾರೆ ಜೆಸ್ಕಾಂ ಇಲಾಖೆಯ ದಿವ್ಯ ನಿರ್ಲಕ್ಷದಿಂದಲೆ ಈ ಒಂದುಅನಾಹುತ ಸಂಭವಿಸಿದೆ ಎಂಬುದು ಗ್ರಾಮದ ಸಾರ್ವಜನಿಕರ ಆರೋಪ.
ಘಟನೆಗೆ ಸಂಬಂಧಿಸಿದಂತೆ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಘಟನೆ ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು ಬಂದು ಪರಿಶೀಲನೆ ನಡಿಸಿದ್ದಾರೆ.


