ಬಾಬೂಜಿ ಜಯಂತಿ ಅದ್ದೂರಿ ಆಚರಣೆಗೆ ; ಎಚ್.ಎ.ಸರಕಾವಸ್

ಸುರಪುರ ಟೈಮ್ಸ್ ವಾರ್ತೆ

ಸುರಪುರ; ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿ ಕಾರ ಡಾ.ಬಾಬು ಜಗಜೀವನ ರಾಮ್ ಜಯಂತಿಯನ್ನು ಅದ್ದೂರಿ ಯಾಗಿ ಆಚರಿಸಲಾಗುವುದು ಎಂದು ತಹಸೀ ಲ್ದಾರ್ ಎಚ್.ಎ.ಸರಕಾವಸ್ ಹೇಳಿದರು.ಇಲ್ಲಿಯ ತಹಸೀಲ್ದಾರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಡಾ.ಬಾಬು ಜಗಜೀವನರಾಮ್ ಜಯಂತಿ ನಿಮಿತ್ತ ಆಯೋಜಿಸಿದ್ದಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಏ.5 ರಂದು ಡಾ.ಬಾಬು ಜಯಂತಿಯನ್ನು ಶಾಲಾ-ಕಾಲೇಜು, ಜಗಜೀವನರಾಮ್ ಎಲ್ಲ ಸರಕಾರಿ ಕಚೇರಿಯೊಳಗೆ ಬೆಳಗ್ಗೆ 9 ರೊಳಗೆ ಆಚರಿಸಬೇಕು. ನಂತರ ತಾಲೂಕು ಆಡಳಿತ ಏರ್ಪಡಿಸಿರುವ ಜಯಂತಿಯಲ್ಲಿ ಎಲ್ಲಾ ಅನುಷ್ಠಾನ ಅಧಿ ಕಾರಿಗಳು ಭಾಗವಹಿಸಬೇಕು ಎಂದರು.ಡಾ.ಬಾಬು ಜಗಜೀವನರಾಮ್ ಭಾವಚಿತ್ರದ ಮೆರವಣಿಗೆಯೂ ಅಂಬೇಡ್ಕರ್ ವೃತ್ತದಿಂದ ನಗರದ ರಾಜಬೀದಿ ಮಾರ್ಗಗಳ ಮೂಲಕ ತಹಸಿಲ್ ಕಚೇರಿವರೆಗೆ ಜರುಗಲಿದೆ. ತಹಸೀಲ್ದಾರ್ ಕಚೇರಿ ಆವರಣದಲ್ಲಿ
ಅದ್ದೂರಿ ಸಮಾರಂಭ ನೆರವೇರಲಿದೆ. ಶಾಸಕ ರಾಜಾ ವೇಣುಗೋಪಾಲ ನಾಯಕ ಅವರನ್ನು ಜಯಂತಿಗೆ ವಿಶೇಷ ‘ವಾಗಿ ಆಹ್ವಾನಿಸಲಾಗುವುದು. ನಗರ ಮತ್ತು ಹಳ್ಳಿಗಳಲ್ಲಿರುವ ಡಾ.ಬಾಬು ಜಗಜೀವನರಾಮ್ ವೃತ್ತಗಳಿಗೆ ಸ್ಥಳೀಯ ಸಂಸ್ಥೆಗಳು ದೀಪಲಂಕಾರ ಮಾಡಬೇಕು ಎಂದು ತಿಳಿಸಿದರು.ದಲಿತ ಮುಖಂಡರು ಸಲಹೆ ಸೂಚನೆಗಳನ್ನು ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ. ನಾಯಕ, ವಿವಿಧ ಇಲಾಖೆಗಳ ಅಧಿ ಕಾರಿಗಳಾದ ಸಣಕೆಪ್ಪ ಕೊಂಡಿಕಾರ,ಮೊಹ್ಮದ್ ಸಲೀಮ್, ಎಸ್.ಜಿ. ಪಾಟೀಲ್, ಡಾ.ಸುರೇಶ ಹಚ್ಚಡ, ಹಣಮಂತ್ರಾಯ ಪಾಟೀಲ್, ಭಾಗ್ಯಶ್ರೀ, ಮಹಾದೇವಿ, ರಾಜು, ಚನ್ನಬಸವ, ಎಸ್.ಬಿ.ಬಿರಾದಾರ್, ಬೂದೆಪ್ಪ, ಚಂದ್ರಶೇಖರ ಪತ್ತಾರ, ಸಂತೋಷ ಕಲಿಕೇರಿ, ಮಹಾದೇವಿ ಹಾಗೂ ದಲಿತ ಮುಖಂಡರಾದ ಚಂದ್ರಶೇಖರ ಕವಡಿಮಟ್ಟಿ, ಬಸವರಾಜ ಹಾದಿಮನಿ, ಮಲ್ಲಿಕಾರ್ಜುನ, ಯಲ್ಲಪ್ಪ ಹುಲಿಕಲ್, ಮಹೇಂದ್ರಕುಮಾರ ಬಿಲ್ಲವ, ಹಣಮಂತ ಬೋಮ್ಮನಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!