ಶಾಸಕರಿಂದ ಇಂದಿರಾ ಕ್ಯಾಂಟಿನ್ ಜಾಗ ವೀಕ್ಷಣೆ

ಸುರಪುರ ಟೈಮ್ಸ್ ವಾರ್ತೆ

ಸುರಪುರ;ಬಡವರು, ಕೂಲಿ ಕಾರ್ಮಿಕರ ಹಸಿವು ನೀಗಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್‌ ಆರಂಭಕ್ಕೆ ಬೇಕಾದ ಜಾಗವನ್ನು ಪಟ್ಟಣದ ಜನನಿಬೀಡ ಸ್ಥಳವಾಗಿರುವ ತಹಸೀಲ ಆಫೀಸ್ ರೋಡ್ ಪಕ್ಕದಲ್ಲಿರುವ ಬಿಸಿಎಂ ಹಾಸ್ಟೆಲ್ ಮುಂದಗಡೆ ಜಾಗವನ್ನು ಶಾಸಕ ರಾಜಾ ವೇಣುಗೋಪಾಲ್ ನಾಯಕ ವೀಕ್ಷಣೆಯನ್ನು ಮಾಡಿದರು.
ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು, ಪ್ರವಾಸಿಗರು, ಕಚೇರಿಗಳಿಗೆ ಅಲೆದಾಡುವ ಮಂದಿ, ಕಚೇರಿ ಸಿಬ್ಬಂದಿ ಓಡಾಟ ನಡೆಸುತ್ತಾರೆ. ಇವರಿಗೆಲ್ಲಕಡಿಮೆ ದರದಲ್ಲಿಆಹಾರ ನೀಡುವ ಇಂದಿರಾ ಕ್ಯಾಂಟೀನ್‌ ಅತ್ಯಗತ್ಯವಾಗಿದೆ. ತಾಲೂಕಿನ ಜನರ ಕನಸು ನನಸಾಗುವ ನಿರೀಕ್ಷೆ ಇದೆ. ಈ ಸ್ಥಳದಲ್ಲಿಇಂದಿರಾ ಕ್ಯಾಂಟೀನ್‌ ನಿರ್ಮಾಣವಾಗುವುದರಿಂದ ಎಲ್ಲರಿಗೂ ಹೆಚ್ಚು ಅನುಕೂಲವನ್ನು ನೀಡಲಿದೆ. ಇಂದಿರಾ ಕ್ಯಾಂಟೀನ್‌ಗೆ ಜಾಗ ಗುರುತಿಸಿ ಕಾಮಗಾರಿ ಆದಷ್ಟು ಬೇಗನೆ ಆರಂಭಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿಯಾಗಿರುವ ವಿಠ್ಠಲ್ ಯಾದವ್, ಮಲ್ಲಣ್ಣ ಸಾಹುಕಾರ ಮುಧೋಳ, ನಗರಸಭೆ ಸದಸ್ಯರಾದ ನಾಸಿರ ಕುಂಡಾಲೆ, ಶಕಿಲ ಅಹ್ಮದ್, ಎಇಇ ಶಾಂತಪ್ಪ, ಸೇರಿದಂತೆ ಇತರರಿದ್ದರು

Leave a Reply

Your email address will not be published. Required fields are marked *

error: Content is protected !!