ಸುರಪುರ ನಗರಸಭೆ : 13.10 ಲಕ್ಷ ಕೊರತೆ ಬಜೆಟ್ ಮಂಡನೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ : 2025-26ನೇ ಸಾಲಿನ 13.10 ಲಕ್ಷ ರೂ. ಕೊರತೆ ಬಜೆಟ್‌ನ್ನು ನಗರಸಭೆಯಲ್ಲಿ ಸೋಮವಾರ ಜರುಗಿದ ಬಜೆಟ್ ಸಭೆಯಲ್ಲಿ ಮಂಡಿಸಲಾಯಿತು. ನಗರಸಭೆ ಅಧ್ಯಕ್ಷೆ ಹೀನಾ ಕೌಸರ್ ಶಕೀಲ್ ಅಹ್ಮದ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಮತ್ತು ಲೆಕ್ಕಿಗ ರವಿ ರಾಠೋಡ್ ಅವರು ಒಟ್ಟು ಆದಾಯ 33.59 ಕೋಟಿ, ಖುರ್ಚ 33.73 ಕೋಟಿ, 13.1೦ ಲಕ್ಷ ರೂಪಾಯಿಯ ಕೊರತೆ ಬಜೆಟ್‌ನ್ನು ಸಭೆಯಲ್ಲಿ ಬಜೆಟ್ ಪತ್ರಿ ಓದುವುದರ ಮೂಲಕ ಬಜೆಟ್‌ನ ವಿವರಣೆ ನೀಡಿದರು.
15ನೇ ಹಣಕಾಸು ಮುಕ್ತ ನಿಧಿ-6 ಕೋಟಿ, ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನ-15 ಕೋಟಿ, ಎಸ್‌ಎಫ್‌ಸಿ ಇತರೆ ಅನುದಾನ-50 ಲಕ್ಷ, ಎಸ್‌ಎಫ್‌ಸಿ ವೇತನ ಅನುದಾನ-5.75 ಕೋಟಿ, ಎಸ್‌ಎಫ್‌ಸಿ ವಿದ್ಯುತ್ ಅನುದಾನ-7 ಕೋಟಿ, ನಲ್ಮ್ ಅನುದಾನ-20 ಲಕ್ಷ, 24.1೦ ಅನುದಾನ1೦.25 ಲಕ್ಷ, 7.25 ಅನುದಾನ-11.25 ಲಕ್ಷ, ಶೇ.5 ರಷ್ಟು ಅನುದಾನ-75 ಲಕ್ಷ, ಪೌರಕಾರ್ಮಿಕ ಗೃಹಭಾಗ್ಯ ಅನುದಾನ-15 ಲಕ್ಷ ರೂ.ಗಳು ಸರಕಾರ ಮೂಲದಿಂದ ಬರುವ ಆದಾಯಗಳಾಗಿವೆ ಎಂದರು.
ನಗರಸಭೆ ಕಟ್ಟಡಗಳ ಬಾಡಿಗೆ-3೦ ಲಕ್ಷ, ಕಟ್ಟಡ ಪರವಾನಿಗೆ ಶುಲ್ಕ-15 ಲಕ್ಷ, ಅಭಿವೃದ್ಧಿ ಶುಲ್ಕ-4೦ ಲಕ್ಷ, ವ್ಯಾಪಾರ ಪರವಾನಿಗೆ ಶುಲ್ಕ-7.5೦ ಲಕ್ಷ, ನೀರು ಸರಬರಾಜು ಬಳಕೆದಾರರ ಶುಲ್ಕ- 1.66 ಕೋಟಿ, ಸ್ಟ್ಯಾಪ್ ಡ್ಯೂಟಿ ಜಾರ್ಚಸ್-6.5 ಲಕ್ಷ, ನಮೂನೆ-3 ಶುಲ್ಕ-5 ಲಕ್ಷ, ಆಸ್ತಿ ತೆರಿಗೆ ಆದಾಯ-1.85ಕೋಟಿ, ವರ್ಗಾವಣೆ ಶುಲ್ಕ-6೦ ಲಕ್ಷ ರೂಪಾಯಿಗಳು ನಗರಸಭೆ ಸ್ವಂತ ಆದಾಯದ ಮೂಲಗಳಾಗಿವೆ ವಿವರಿಸಿದರು.
ನಗರಸಭೆ ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ (ತಾತಾ), ನಗರಸಭೆ ವಿರೋಧ ಪಕ್ಷದ ನಾಯಕ ವೇಣುಮಾಧವ ನಾಯಕ, ಸದಸ್ಯರಾದ ನರಸಿಂಹಕಾAತ ಪಂಚಮಗಿರಿ, ನಾಸೀರ್ ಕುಂಡಾಲೆ, ಸುವರ್ಣ ಎಲಿಗಾರ, ವಿಷ್ಣು ಗುತ್ತೇದಾರ್, ಮಾನಪ್ಪ ಚೆಳ್ಳಿಗಡ, ಶಿವಕುಮಾರ ಕಟ್ಟಿಮನಿ, ಕಮರುದ್ದೀನ್ ನಾರಾಯಣಪೇಟೆ ಸೇರಿ ಇನ್ನಿತರರು ಸಭೆಯಲ್ಲಿ ಮಾತನಾಡಿದರು. ನಗರಸಭೆ ಸದಸ್ಯರು, ಕಂದಾಯ ನಿರೀಕ್ಷಕ ವೆಂಕಟೇಶ, ಎಇಇ ಶಾಂತಪ್ಪ, ನಗರ ನೀರು ಸರಬರಾಜು ಎಇ ಶಂಕರಗೌಡ ಪಾಟೀಲ್, ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ, ಆರೋಗ್ಯ ನೈರ್ಮಲ್ಯಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.



