ತಿಮ್ಮಾಪುರದ  ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಶರಣ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸಂತರಿಂದ ಸದ್ಭಾವ ಚಿಂತನೆ | ಶರಣ ಶ್ರೀ ಪ್ರಶಸ್ತಿ ಪ್ರದಾನ | ಸಂಸ್ಕೃತ ಪಂಡಿತ ಪಾಣಿಭಾತೆ ಅಭಿಮತ ಶಿಕ್ಷಣ, ಗುರುವಿನಿಂದ ಪ್ರದೇಶ ಶ್ರೇಷ್ಠತೆ ಸಾಧಿಸುತ್ತದೆ.

ಸುರಪುರ ಟೈಮ್ಸ್ ವಾರ್ತೆ

ಸುರಪುರ : ಯಾವ ಊರಿನಲ್ಲಿ ಹೆಚ್ಚು ಶಾಲೆ-ಕಾಲೇಜುಗಳಿರುತ್ತವೆಯೋ, ಯಾವ ಊರಿನಲ್ಲಿ ಹೆಚ್ಚು ಮಠಗಳು ಇರುತ್ತವೆ ಆ ಊರು ಖಂಡಿತವಾಗಿ ಪ್ರಗತಿಯಾಗುತ್ತದೆ. ಶಿಕ್ಷಣ ಮತ್ತು ಗುರುವಿನಿಂದ ಆ ಪ್ರದೇಶ ಶ್ರೇಷ್ಠತೆ ಹೊಂದುತ್ತದೆ ಎಂದು ಖ್ಯಾತ ಸಂಸ್ಕೃತ ಪಂಡಿತ ಜನಾರ್ಧನ ಪಾಣಿಬಾತೆ ಅಭಿಪ್ರಾಯಿಸಿದರು.ಸಮೀಪದ ತಿಮ್ಮಾಪುರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶರಣಬಸವೇಶ್ವರ ಪುರಾಣ ಪ್ರವಚನ, ಶರಣ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಜೀವನದಲ್ಲಿ ಶಿಕ್ಷಣ, ಮಠಾಧೀಶರ ಆಶೀರ್ವಾದ, ಧರ್ಮ, ಸಂಸ್ಕೃತಿ, ಸಂಸ್ಕಾರ ಮನುಷ್ಯನ ಪ್ರಗತಿಗೆ ಸಹಕಾರಿಯಾಗಿವೆ ಎಂದರು.ಅನ್ನ, ಅಕ್ಷರ ದಾಸೋಹ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಜ್ಞಾನ ಒದಗಿಸುವಲ್ಲಿ, ಧಾರ್ಮಿಕ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವಲ್ಲಿ ನಾಡಿನ ಪ್ರಗತಿ ಮತ್ತು ಏಳ್ಗೆಯಲ್ಲಿ ಮಠ-ಮಾನ್ಯಗಳ ಕೊಡುಗೆ ಅಪಾರವಾಗಿದೆ. ಸಮಾಜವನ್ನು ಸರಿಯಾದ ದಾರಿಯಲ್ಲಿ ಕರೆದೊಯುವ ಕೆಲಸ ಮಠಗಳು ಮಾಡುತ್ತವೆ. ರಂಗಂಪೇಟೆಯಲ್ಲಿ ರುದ್ರಸ್ವಾಮಿ ಮಠ ಸೇರಿ ನಾಲ್ಕು ಪ್ರಸಿದ್ಧ ಪಾಂಡಿತ್ಯ ಮನೆತನದ ವಿದ್ಯುನ್ಮಣಿಗಳು ಮಠಗಳಿವೆ ಎಂದ ಅವರು, ಈ ಭಾಗದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಶರಣ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಪ್ರಶಂಸನೀಯ ಎಂದರು.ಹಿರಿಯ ಸಾಹಿತಿ ಶರಣಗೌಡ ಪಾಟೀಲ್ ಜೈನಾಪುರ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಶರಣ ಸಂಸ್ಕೃತಿ, ಶರಣ ಸಂಸ್ಕಾರ, ಶರಣ ಪರಂಪರೆಯನ್ನು ಉಳಿಸಿ ಬೆಳೆಸುವುದು ಮುಖ್ಯವಾದ ಕೆಲಸ. ಅಂತಹ ಕೆಲಸವನ್ನು ಗುಮ್ಮಾ ಮನೆತನದವರು ಶರಣಬಸವೇಶ್ವರ ಪುರಾಣ ಮಹೋತ್ಸವ ಮತ್ತು ಸಂತರಿಂದ ಸದ್ಭಾವ ಚಿಂತನೆ ಮೂಲಕ ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದಾರೆ. ಇದು ಸಗರನಾಡಿನ ಎಲ್ಲ ಶರಣ-ಶರಣೆಯರು ಹೆಮ್ಮೆಪಡುವ ವಿಷಯ. ಈ ಕಾರ್ಯ ನಿರಂತರವಾಗಿ ನಡೆಯಲಿ ಭಗವಂತ ಆ ಶಕ್ತಿ ಕೊಡಲಿ ಎಂದರು.ಶಿವರಾತ್ರಿ ಜಾಗರಣೆ ಜತೆ ಆಧ್ಯಾತ್ಮಿಕ ಧಾರ್ಮಿಕ ಚಿಂತನೆಗಳು ನಮ್ನನ್ನು ಸನ್ಮಾರ್ಗದೆಡೆಗೆ ಕೊಂಡೂಯುತ್ತವೆ. ಇಂಥಹ ಯುಗದಲ್ಲಿ ಈ ಪುಣ್ಯ ಕಾರ್ಯಕ್ರಮಗಳು ಪ್ರಸ್ತುತ. ನಾವೆಲ್ಲರೂ ಸದ್ಭಕ್ತರಾಗಿ ಜೀವನ ಸಾಗಿಸೋಣ. ಬದುಕು ಬಂಗಾರವಾಗಲು ಪ್ರತಿಯೊಬ್ಬರು ಶರಣರ ತತ್ವಾದರ್ಶಗಳನ್ನು ಪಾಲಿಸೋಣ ಎಂದರು. ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಸಂದೇಶ ನೀಡಿದರು. ನಾಗಲಿಂಗಯ್ಯಶಾಸ್ತಿ ಪ್ರವಚನ ನೀಡಿದರು. ಬಾಬುರಾವ್ ಹೂಗಾರ ಮತ್ತು ಶಿವಾನಂದ ಮಡಿವಾಳ ಸಂಗೀತ ಸೇವೆ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಶರಣ ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಅಮರೇಶ ಗೋಗಿ ನಿರೂಪಿಸಿ ವಂದಿಸಿದರು.

ಶ್ರೀ ಪ್ರಶಸ್ತಿ ಪ್ರದಾನವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪಂಡಿತ ಜನಾರ್ಧನ ಪಾಣಿಬಾತೆ ರಂಗAಪೇಟೆ (ಸಂಸ್ಕೃತ), ಶರಣಗೌಡ ಪಾಟೀಲ್ ಜೈನಾಪುರ ಜೇವರ್ಗಿ (ಸಾಹಿತ್ಯ ಮತ್ತು ಶಿಕ್ಷಣ), ಶ್ರೀಕರಭಟ್ ಜೋಶಿ ಸುರಪುರ (ಪತ್ರಿಕಾ ರಂಗ), ಆರ್.ವೆಂಕಟರೆಡ್ಡಿ ತಿರುಪತಿರೆಡ್ಡಿ ಹಸನಾಪುರ (ಕೃಷಿ), ಡಾ.ಮಲ್ಲೇಶಿ ಆರ್.ಪೂಜಾರಿ ದೇವಿಕೇರಾ (ವೈದ್ಯಕೀಯ), ಕಾಶಿನಾಥ ಬಣಗಾರ

Leave a Reply

Your email address will not be published. Required fields are marked *

error: Content is protected !!