ಎಲ್ಲರನ್ನೂ ಸಮಾನವಾಗಿ ಕಾಣುವ, ಸರ್ವರನ್ನೂ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡುವ ಧರ್ಮ ಶರಣ ಧರ್ಮವಾಗಿದೆ;ಶೀಲವಂತೆಶ್ವರ ಮಹಾಸ್ವಾಮಿಗಳು

  ಸುರಪುರ ಟೈಮ್ಸ್ ವಾರ್ತೆ

ಸುರಪುರ; 12ನೇ ಶತಮಾನದಲ್ಲಿ  ಬಸವಣ್ಣನವರ ಶರಣ ಧರ್ಮವು ಉದಾರ, ವೈಚಾರಿಕ ಹಾಗೂ ಸಾಮಾಜಿಕ ಕಳಕಳಿ ಹೊಂದಿದ್ದು, ರೂಢಿಗತವಾಗಿ ಲಿಂಗಾಯತ, ವೀರಶೈವ ಧರ್ಮ ಎಂದು ಕರೆಯುವ ಬದಲಿಗೆ ಶರಣ ಧರ್ಮ ಎಂದು ಕರೆದು, ಎಲ್ಲರನ್ನೂ ಸಮಾನವಾಗಿ ಕಾಣುವ, ಸರ್ವರನ್ನೂ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡುವ ಧರ್ಮ ಶರಣ ಧರ್ಮವಾಗಿದೆ ಎಂದುಶಷ.ಬ್ರ. ಶೀಲವಂತೆಶ್ವರ ಮಹಾಸ್ವಾಮಿಗಳು ಹಿರೇಮಠ ಮದ್ದರಕಿ ಹೇಳಿದರು.

ಅವರು ಸುರಪುರ ಕಬಾಡಗೇರಾದ ಶ್ರೀ ನಿಷ್ಠಿ ಕಡ್ಲಪ್ಪನವರ ವಿರಕ್ತಮಠದಲ್ಲಿ ಲಿಂ.ಶ್ರೀ.ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳವರ 49ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶರಣ ಚರಿತಾಮೃತ ಪ್ರವಚನ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಕಡಣಿ ಕಲಬುರಗಿ ಹಿರೇಮಠದ ಶ್ರೀ ಷ.ಬ್ರ ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ ತ್ರಿಕಾಲ ಪೂಜಾ ನಿಷ್ಠರಾದ ಶ್ರೀಮಠದ ಪೂಜ್ಯರು ಕೇವಲ ಒಬ್ಬ ಶರಣರ ಜೀವನ ಸಕಲ ಸದ್ಭಕ್ತರಿಗೆ ದರ್ಶನ ಮಾಡಿಸುವುದಕ್ಕಿಂತಲೂ ದಿನಕೊಬ್ಬ ಶರಣರನ್ನು ಶರಣರ ಜೀವನ ದರ್ಶನವನ್ನು ಶರಣಚರಿತಾಮೃತ ಪ್ರವಚನದಲ್ಲಿ ಮಾಡಿಸಬೇಕೆಂಬುದ ಮಹೋನ್ನತವಾದ ಉದ್ದೇಶವನ್ನು ಹೊಂದಿರುವುದು ಶ್ರೀಮಠದ ಸಕಲ ಸದ್ಭಕ್ತರ ಸೌಭಾಗ್ಯವಾಗಿದೆ ಎಂದರು ಇಂಥ ಪೂಜ್ಯರನ್ನು ಪಡೆದ ನೀವೇ ಧನ್ಯರು ಎಂದು ನುಡಿದರು

ಶರಣ ಚರಿತಾಮೃತ ಪ್ರವಚನದ ನೇತೃತ್ವವನ್ನು ವಹಿಸಿದ್ದ ಶ್ರೀಮಠದ ಪೂಜ್ಯರಾದ ಶ್ರೀ.ಮ.ನಿ.ಪ್ರ. ಪ್ರಭುಲಿಂಗ ಮಹಾಸ್ವಾಮಿಗಳು ಸಕಲ ಸದ್ವಕ್ತರು ಶರಣರ ಜೀವನವನ್ನು ದರ್ಶನ ಮಾಡಿಕೊಂಡು ನಿಮ್ಮ ಜೀವನವನ್ನು ಪಾವನವನ್ನಾಗಿ ಮಾಡಿಕೊಳ್ಳಬೇಕೆಂದು ನುಡಿದರು.

ಚನ್ನಬಸಯ್ಯ ಜಟಗಿಮಠ ಅವರು ಲಿಂಗೈಕ್ಯ ಶ್ರೀಮ.ನಿ.ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಸಿ
ತಾ.ಕ.ಸಾ.ಪ ಅಧ್ಯಕ್ಷ ಶರಣಬಸಪ್ಪ ಯಾಳವಾರ ಪ್ರಾಸ್ತವಿಕವಾಗಿ ಮಾತನಾಡಿ ಶರಣ ಕುಮಾರ ಯಾಳಗಿ ಸಂಗೀತ ಸೇವೆ ನೀಡಿದರು. ಪ್ರಾಣೇಶ ಶಹಪುರ ತಬಲಾ ಸಾಥ್ ನೀಡಿದರು. ರಾಜಶೇಖರ್ ದೇಸಾಯಿ ಸ್ವಾಗತಿಸಿದರು ಎಚ್ ವೈ ರಾಠೋಡ್ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸುನಿಲ ಸರಪಟ್ಟಣ ಶೆಟ್ಟರು ಶರಣಯ್ಯ ಸ್ವಾಮಿ  ಮಠಪತಿ, ಬಸವರಾಜ ಜಮದ್ರಖಾನಿ, ಚಂದ್ರಕಾಂತ ಕಳ್ಳಿಮನಿ, ವೀರೇಶ್ ನಿಷ್ಠಿ ದೇಶಮುಖ, ನಿಟಲಾಕ್ಷ ಪಂಚಾಂಗಮಠ, ಬಲಭೀಮ ನಾಯಕ, ದೇವು ಎಸ್ ಹೆಬ್ಬಾಳ, ಮಹೇಶ ಹಳ್ಳದ, ಮಂಜುನಾಥ ಗಚ್ಚಿನಮನಿ, ಶಿವಶರಣಬಸವ ಪುರಾಣಿಕ ಮಠ, ಬಸವರಾಜ ಗೋಗಿ, ಎನ್ ಡಿ ಪುರತಗಿರಿ, ಕೊಟ್ರಯ್ಯ ಸ್ವಾಮಿ ಬುಲುಂಡಗಿ ಮಠ, ಭೀಮಾಶಂಕರ ಕಳ್ಳಿಮನಿ, ಬಸವರಾಜ ಜಾಲಹಳ್ಳಿ, ಮಾನಪ್ಪ ದಿಗ್ಗಿ, ಮಲ್ಲಿಕಾರ್ಜುನ ಗೋಗಿ, ಹಣಮಂತ್ರಾಯ ತೆಗ್ಗಳ್ಳಿ, ಸೇರಿದಂತೆ ಸಕಲ ಸದ್ಭಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!