ಸಮರ್ಪಕವಾಗಿ ಪಾಲನೆಯಾಗದ ಆದೇಶ|ವೇಳೆಗೆ ಬಾರದ ಸಿಬ್ಬಂದಿ ಮಧ್ಯಾಹ್ನ 1 ಗಂಟೆಗೆ ಆಫೀಸ್ ಗೆ ಬೀಗ್|ಕಚೇರಿ ಸಮಯದಲ್ಲಿ ನೌಕರರು ಬೀಗ ಹಾಕಿ ಮನೆಯ ಕಡೆಗೆ ಪಾಲಾಯನ…..

ಸುರಪುರ ಟೈಮ್ಸ್ ವಾರ್ತೆ
ಸುರಪುರ:ಸರಕಾರಿ ನೌಕರರು, ಸಾರ್ವಜನಿಕರ ಅನುಕೂಲಕ್ಕಾಗಿ ಸರಕಾರಿ ಕಚೇರಿಗಳ ಕೆಲಸದ ವೇಳೆ ಬದಲಾದರೂ ಹಾಜರಾತಿ ಮಾತ್ರ ಕಡಿಮೆ.ಹೌದು, ತಾಲೂಕು ಸರಕಾರಿ ಕಚೇರಿಗಳಲ್ಲಿ ಏ.2 ರಿಂದ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾರ್ಯನಿರ್ವಹಣೆಗೆ ಸಮಯ ನಿಗದಿಪಡಿಸಲಾಗಿದೆ. ಆದರೆ ಹೊಸ ಸಮಯಕ್ಕೆ ಸರಕಾರಿ ನೌಕರರು ಇನ್ನೂ ಹೊಂದಿ ಕೊಂಡಿಲ್ಲ. ಕೆಲವು ಕಚೇರಿಗಳಲ್ಲಿ ಬೆಳಗ್ಗೆ ನೌಕರರು ಕಾಣುವುದಿಲ್ಲ, ಸುರಪುರ ಟೈಮ್ಸ್ ವಾರ್ತೆ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಈ ವಿಷಯ ಕಂಡುಬಂದಿದೆ.ಬದಲಾಗದ ಮನೋಭಾವ: ರಾಜ್ಯ ಸರಕಾರ ಏ.2 ರಂದು ಬೆಳಗಾವಿ ಬಾಗಲಕೋಟೆ, ವಿಜಯಪುರ ಗುಲ್ಬರ್ಗ ಯಾದಗಿರಿ ಜಿಲ್ಲೆಗಳಲ್ಲಿ ಸರಕಾರಿ ಕಚೇರಿಗಳ ವೇಳಾಪಟ್ಟಿ ಬದಲಾಯಿಸಿ ಆದೇಶ ಹೊರಡಿಸಿದೆ. ಈ ಮೊದಲು ಬೆಳಗ್ಗೆ 10.30 ರಿಂದ ಸಂಜೆ 5ರವರೆಗೆ ಇದ್ದ ಕಚೇರಿ ಅವಧಿಯನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 1.30ರವರೆಗೆ ಬದಲಾಯಿಸಲಾಗಿದೆ. ಆದರೆ ಸುರಪುರ ತಾಲೂಕಿನ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ವಿಸ್ತರ್ಣಾಧಿಕಾರಿಯವರ ಕಾರ್ಯಲಯದ ಕಚೇರಿ ಮಧ್ಯಾಹ್ನ 1 ಗಂಟೆಗೆ ಬೀಗ ಹಾಕಿ ಕೊಂಡಿರುವುದು ದೃಶ್ಯ ಕಂಡುಬಂತು.
ತಾಲೂಕಿನ ನಾನಾ ಭಾಗಗಳ ಸರಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿ ಗಮನಿಸಿದಾಗ ಶೇ.60 ರಷ್ಟು ನೌಕರರು ಮಾತ್ರ ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗುತ್ತಿದ್ದಾರೆ.

ಸಾಹೇಬ್ರ ಭೇಟಿ ಕಷ್ಟ
ಸರಕಾರಿ ಕಚೇರಿಗಳ ಸಮಯ ಬದಲಾವಣೆ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನನುಕೂಲಕ್ಕೂ ಕಾರಣವಾಗಿದೆ. ಉದಾಹರಣೆಗೆ ಬೋನ್ಹಾಳ ಹುಷೇನಬಾಷಯವರು ಕೈಗಾರಿಕಾ ಕಚೇರಿಗೆ ಬಂದಾಗ 1.ಗಂಟೆಯಾಗಿತ್ತು ಅಷ್ಟೊತ್ತಿಗೆ ಕಚೇರಿ ಮುಚ್ಚಿ ಹೋಗಿತ್ತು ಕಾರಣ ಸಾರ್ವಜನಿಕರು ಮತ್ತೊಂದು ದಿನ ದೂರದಿಂದ ಬರುವುದು ಅನಿವಾರ್ಯವಾಗಲಿದೆ.
ತುರ್ತು ಸೇವೆ ಒದಗಿಸುವ ಪ್ರಮುಖ ಇಲಾಖೆ ಹೊರತುಪಡಿಸಿದರೆ ಇನ್ನಿತರ ಇಲಾಖೆಗಳಲ್ಲಿ ತಡವಾಗಿ ಕೆಲಸ ಶುರುವಾಗುತ್ತವೆ ಎಂಬ ಸಾರ್ವಜನಿಕರ ಆರೋಪವಾಗಿದೆ.
ಜನರೂ ವಿರಳ
ಬಿಸಿಲಿನ ತಾಪಮಾನ ಹೆಚ್ಚಾಗುವ ಅವಧಿಯಲ್ಲಿ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದು ತಪ್ಪಲಿ ಎನ್ನುವುದು ಸರಕಾರದ ಸದುದ್ದೇಶ. ಆದರೆ ಸಾರ್ವಜನಿಕರೂ ಹೊಸ ಕೆಲಸದ ಅವಧಿಗೆ ಹೊಂದಿಕೊಂಡಿಲ್ಲ. ಬಹುತೇಕ ಕಚೇರಿಗಳಲ್ಲಿ ನೌಕರರಷ್ಟೇ ಅಲ್ಲ, ಸಾರ್ವಜನಿಕರೂ ಕಾಣುತ್ತಿಲ್ಲ.ಬದಲಾದ ಸಮಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಬೇಕಿದೆ.
ಸಮಯಕ್ಕಿಂತ ಮುಂಚಿತವಾಗಿ ಕಾರ್ಯಾಲಯದ ಕಚೇರಿಗೆ ಬೀಗ ಹಾಕಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕ ಅಭಿಪ್ರಾಯವಾಗಿದೆ.