ಶಾಸಕ ರಾಜಾ ವೇಣುಗೋಪಾಲ ನಾಯಕರಿಂದ ವಿಶಾದನೀಯ,ಜಾಲಿಬೆಂಚಿ ಗ್ರಾಮಕ್ಕೆ ಅಧಿಕಾರಿಗಳು ದೌಡು
ಸುರಪುರ ಟೈಮ್ಸ್ ವಾರ್ತೆ
ಸುರಪುರ:ಭಾರೀ ಗಾಳಿ ಬಿಟ್ಟಿದ್ದರಿಂದ ಶಾರ್ಟ್ ಸರಕ್ಯೂಟ್ ಆಗಿ ಇಡೀ ಉರಿಗೆ ವಿದ್ಯುತ್ ತಗುಲಿ. ಎಲ್ಲೆಂದರಲ್ಲಿ ವಿದ್ಯುತ್ ಕಂಬಗಳಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ನಡೆದಿದೆ.ಸಂಜೆಯಿಂದ ಶುರುವಾದ ಬೃಹತ್ ಗಾತ್ರದ ಬಿರುಗಾಳಿಗೆ ಗ್ರಾಮದ ಮಲ್ಲಿಕಾರ್ಜುನ ದೇಗುಲ ಹತ್ತಿರ ಇರುವ 65ರ (ಟಿಸಿ)ಯಿಂದ ಶಾರ್ಟ್ ಸರಕ್ಯೂಟ್ ಆಗಿ ಕಂಬಗಳಲ್ಲಿ ಅಳವಡಿಸಿದ ವಿದ್ಯುತ್ ತಂತಿಗಳು ಕತ್ತರಿಸಿ ತುಂಡಾಗಿ ಬಿದ್ದಿವೆ.ಇನ್ನು 100ಕ್ಕೂ ಹೆಚ್ಚು ಅನೇಕ ಮನೆಗಳಲ್ಲಿ ಟಿವಿ, ಫ್ರಿಡ್ಜ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿದ್ದು, ವಿದ್ಯುತ್ ಶಾರ್ಟ್ ಶಬ್ದಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ.
ಇನ್ನು ಗ್ರಾಮದ ರಾಯಪ್ಪ ಪಸಲಾದಿ ಅವರಿಗೆ ವಿದ್ಯುತ್ ತಗುಲಿದ್ದು, ಚಿಕಿತ್ಸೆಗೆಂದು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಬೆಸ್ಕಾಂ ನಿರ್ಲಕ್ಷ್ಯ ಆರೋಪ : ಇದೇ ರೀತಿ ಹಲವು ಭಾರಿಗ್ರಾಮದಲ್ಲಿ ಹೈವೋಲ್ವೇಜ್ ಸಂಭವಿಸಿ ಮನೆಯ ವಿದ್ಯುತ್ ದೀಪಗಳು ಹೊಡೆದು ಹೋಗಿದ್ದವು, ಈ ಸಂಬಂಧ ಹಲವು ಭಾರಿ ಗ್ರಾಮಸ್ಥರು ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರು ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ, ಇದರಿಂದ ಮಂಗಳವಾರ ಮತ್ತೊಂದು ದೊಡ್ಡ ಅನಾಹುತವೇ ಸಂಭವಿಸಿದೆ ಎಂದು ಗ್ರಾಮಸ್ಥರು ಬೆಸ್ಕಾಂ ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ. ತಪ್ಪಿಸ್ಥ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಪಡಿಸಿದ್ದಾರೆ.
ಕತ್ತಲಲ್ಲಿ ಜನ : ವಿದ್ಯುತ್ ಅವಘಡದಿಂದ ಗ್ರಾಮದ ಹಲವು
ಮನೆಗಳಲ್ಲಿ ವಿದ್ಯುತ್ ಮೀಟರ್ ಬೋರ್ಟ್ ಹಾಗೂ ವೈರಿಂಗ್ ಸುಟ್ಟು ಹೋದ ಕಾರಣ ಇಡೀ ರಾತ್ರಿ ಜನರು ಕತ್ತಲಲ್ಲಿ ಕಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸ್ಥಳಕ್ಕೆ ಅಧಿಕಾರಿಗಳ ದೌಡು : ಘಟನೆ ನಡೆದ ಜಾಲಿಬೆಂಚಿ ಗ್ರಾಮಕ್ಕೆ ತಾಲೂಕು ದಂಡಾಧಿಕಾರಿ ಹೆಚ್.ಎ.ಸರಕಾವಸ್ ಮತ್ತು ಪಿಐ ಆನಂದ ವಾಘಮೊಡೆ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದು ಕೊಂಡರು
ಶಾಸಕ ರಾಜಾ ವೇಣುಗೋಪಾಲ ನಾಯಕರಿಂದ ವಿಶಾದನೀಯ
ಜಾಲಿಬೆಂಚಿ ಗ್ರಾಮದಲ್ಲಿ ವಿದ್ಯುತ್ ಅವಘಡ ನಡೆದಿರುವುದು ವಿಷಾದನೀಯ. ದೇವರ ದಯೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜನರಿಗೆ ಜಾಗೃತಿ ಯಿಂದ ಇರುವಂತೆ ತಿಳಿಸಲಾಗಿದೆ. ಜೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ಜಾಲಿಬೆಂಚಿ ಗ್ರಾಮಕ್ಕೆ ತೆರಳುವಂತೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳಿಗೆ ಸ್ಥಳದಲ್ಲಿ ಮೊಕ್ಕಾಂ ಹೂಡುವಂತೆ ತಿಳಿಸಿದ್ದೇನೆ. ಗಾಯಗೊಂಡವರಿಗೆ ಕೂಡಲೇ ಆಸ್ಪತ್ರೆಗೆ ದಾಖಪಡಿಸಿಕೊಂಡು ಚಿಕಿತ್ಸೆ ನೀಡಲು ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

